ಇಂದು ಸೋನಿಯಾ ಗಾಂಧಿ ಜೊತೆ ಶರದ್ ಪವಾರ್ ಸಭೆ, 'ಮಹಾ' ಸರ್ಕಾರ ರಚನೆ ಕುರಿತು ಚರ್ಚೆ!

ಈ ಸಭೆಯ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ರಚನೆಯಾಗುವ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ನಂಬಲಾಗಿದೆ.

Last Updated : Nov 18, 2019, 09:50 AM IST
ಇಂದು ಸೋನಿಯಾ ಗಾಂಧಿ ಜೊತೆ ಶರದ್ ಪವಾರ್ ಸಭೆ, 'ಮಹಾ' ಸರ್ಕಾರ ರಚನೆ ಕುರಿತು ಚರ್ಚೆ! title=
File Image

ನವದೆಹಲಿ: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್(Sharad pawar) ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಲಿದ್ದು, ಎಲ್ಲರ ಕಣ್ಣು ಉಭಯ ನಾಯಕರ ಸಭೆಯತ್ತ ನೆಟ್ಟಿದೆ. ಈ ಸಭೆಯ ನಂತರ ಮಹಾರಾಷ್ಟ್ರ(Maharashtra)ದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್‌ಸಿಪಿ ಸರ್ಕಾರ ರಚನೆಯಾಗುವ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ನಂಬಲಾಗಿದೆ. ಶಿವಸೇನೆ(Shiv Sena) ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackeray) ಅವರೊಂದಿಗೆ ಪವಾರ್-ಸೋನಿಯಾ ಅವರನ್ನು ಭೇಟಿ ಮಾಡಬಹುದು ಎಂದು ಮೂಲಗಳು ತಿಳಿಸಿವೆ.

ನವದೆಹಲಿಯಲ್ಲಿ ಸೋನಿಯಾ ಗಾಂಧಿಯವರಿಂದ ನಾಮನಿರ್ದೇಶನಗೊಂಡಿರುವ ಕಾಂಗ್ರೆಸ್ ಪ್ರತಿನಿಧಿಗಳನ್ನು ಶರದ್ ಪವಾರ್ ಮೊದಲು ಭೇಟಿಯಾಗಲಿದ್ದಾರೆ. ಸೋನಿಯಾ ಗಾಂಧಿ ಒಪ್ಪಂದವನ್ನು ಅಂತಿಮಗೊಳಿಸುವ ಮೊದಲು ಮೂರು ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಮಲ್ಲಿಕರ್ಜುನ್ ಖರ್ಗೆ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಿ ಅಧಿಕಾರದ ಒಪ್ಪಂದದ ಕುರಿತು ಮೂರು ಪಕ್ಷಗಳ ನಡುವಿನ ಕನಿಷ್ಠ ಸಾಮಾನ್ಯ ಕಾರ್ಯಕ್ರಮವನ್ನು ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಅಧಿಕಾರ ಹಂಚಿಕೆ ಒಪ್ಪಂದವು ಅಂತಿಮ ಹಂತದಲ್ಲಿದೆ ಎಂದು ಮೂಲವೊಂದು ತಿಳಿಸಿದೆ. ರಾಜ್ಯದ ಹಿರಿಯ ಮುಖಂಡರು, "ನಾವು ಅವಸರದಲ್ಲಿಲ್ಲ. ಐಡಿಯಾಲಜಿ ಒಂದು ದೊಡ್ಡ ವಿಷಯವಾಗಿದೆ. ಇದನ್ನು ಪರಿಹರಿಸಲಾಗುತ್ತಿದೆ. ಈ ರೀತಿಯ ಮೈತ್ರಿ ಸಮಯ ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.

ಸಂಸತ್ತಿನಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿರುವ ಶಿವಸೇನೆ:
ಏತನ್ಮಧ್ಯೆ, ಒಂದು ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಶಿವಸೇನೆ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳೊಂದಿಗೆ ಕುಳಿತುಕೊಳ್ಳಲಿದೆ. ಸಂಸತ್ತಿನ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. ಪಕ್ಷದ ಈ ನಡೆ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಪ್ರತಿಪಕ್ಷಗಳಿಗೆ ಉತ್ತೇಜನ ನೀಡುತ್ತದೆ ಎಂದು ಪಕ್ಷ ತಿಳಿಸಿದೆ. ಶಿವಸೇನೆ ಲೋಕಸಭೆಯಲ್ಲಿ 18 ಸಂಸದರು ಮತ್ತು ರಾಜ್ಯಸಭೆಯಲ್ಲಿ ಮೂವರು ಸಂಸದರನ್ನು ಹೊಂದಿದೆ.

ಮೂಲಗಳ ಪ್ರಕಾರ, ಶಿವಸೇನೆ ಈಗ ಪ್ರತಿಪಕ್ಷಗಳ ಸರದಿಯಲ್ಲಿರುವ 198 ಸಂಖ್ಯೆಯ ಸ್ಥಾನದಲ್ಲಿ ಕುಳಿತುಕೊಳ್ಳಲಿದ್ದಾರೆ. ಇತರ ಇಬ್ಬರು ಶಿವಸೇನೆ ರಾಜ್ಯಸಭಾ ಸಂಸದರ ಅಧ್ಯಕ್ಷರೂ ಸಂಜಯ್ ರೌತ್ ಅವರ ಸುತ್ತಲೂ ಇರಲಿದ್ದಾರೆ. ಅದೇ ಸಮಯದಲ್ಲಿ, ಲೋಕಸಭೆಯಲ್ಲಿ 18 ಶಿವಸೇನೆ ಸಂಸದರ ಆಸನ ವ್ಯವಸ್ಥೆಯನ್ನು ಸಹ ಪ್ರತಿಪಕ್ಷಗಳ ಸಾಲಿನಲ್ಲಿ ಮಾಡಲಾಗಿದೆ. ಮೂಲಗಳ ಪ್ರಕಾರ, ಅವರು ಐದನೇ ಸಾಲಿನಲ್ಲಿ ಸ್ಥಾನ ಪಡೆಯಲಿದ್ದಾರೆ.

Trending News