"ಬಿಜೆಪಿ ಜೊತೆ ಕೈ ಜೋಡಿಸುವುದು ಒಳ್ಳೆಯದು"-ಸಿಎಂ ಉದ್ಧವ್ ಠಾಕ್ರೆಗೆ ಶಿವಸೇನಾ ಶಾಸಕನ ಪತ್ರ

ಶಿವಸೇನೆ ಶಾಸಕರೊಬ್ಬರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಇದರಿಂದ ಪಕ್ಷಕ್ಕೆ ಮತ್ತು ಪಕ್ಷ ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.

Written by - Zee Kannada News Desk | Last Updated : Jun 20, 2021, 08:47 PM IST
  • ಶಿವಸೇನೆ ಶಾಸಕರೊಬ್ಬರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
  • ಇದರಿಂದ ಪಕ್ಷಕ್ಕೆ ಮತ್ತು ಪಕ್ಷ ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.
  • ಈಗ ಹಣ ವರ್ಗಾವಣೆ ಪ್ರಕರಣದಲ್ಲಿ ಸರ್ನಾಯಕ್ ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದಾರೆ.
 "ಬಿಜೆಪಿ ಜೊತೆ ಕೈ ಜೋಡಿಸುವುದು ಒಳ್ಳೆಯದು"-ಸಿಎಂ ಉದ್ಧವ್ ಠಾಕ್ರೆಗೆ ಶಿವಸೇನಾ ಶಾಸಕನ ಪತ್ರ title=
ಸಂಗ್ರಹ ಚಿತ್ರ

ನವದೆಹಲಿ: ಶಿವಸೇನೆ ಶಾಸಕರೊಬ್ಬರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.ಇದರಿಂದ ಪಕ್ಷಕ್ಕೆ ಮತ್ತು ಪಕ್ಷ ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಪಕ್ಷದ ಮುಖ್ಯಸ್ಥರಿಗೆ ಬರೆದ ಪತ್ರದಲ್ಲಿ, ಥಾಣೆ ಜಿಲ್ಲೆಯ ಶಾಸಕ ಪ್ರತಾಪ್ ಸರ್ನಾಯಕ್ "ನಾವು ನಿಮ್ಮನ್ನು ಮತ್ತು ನಿಮ್ಮ ನಾಯಕತ್ವವನ್ನು ನಂಬುತ್ತೇವೆ, ಆದರೆ ಕಾಂಗ್ರೆಸ್ ಮತ್ತು ಎನ್‌ಸಿಪಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ. ನೀವು ಪ್ರಧಾನಿ ಮೋದಿ ಅವರೊಂದಿಗೆ ಹತ್ತಿರವಾದರೆ ಉತ್ತಮ ಎಂದು ನಾನು ನಂಬುತ್ತೇನೆ...ನಾವು ಮತ್ತೊಮ್ಮೆ ಒಗ್ಗೂಡಿದರೆ ಅದು ಪಕ್ಷ ಮತ್ತು ಕಾರ್ಯಕರ್ತರಿಗೆ ಪ್ರಯೋಜನಕಾರಿಯಾಗಿದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಹಿಂದಿ ಎಲ್ಲಾ ಭಾರತೀಯರ ಮಾತೃಭಾಷೆ ಅಲ್ಲ: ಒವೈಸಿ

ಜೂನ್ 10 ರಂದು ಬರೆದ ಪತ್ರದಲ್ಲಿ ಪತ್ರದಲ್ಲಿ ಅವರು "ಎನ್‌ಸಿಪಿ ಮತ್ತು ಕಾಂಗ್ರೆಸ್ ತಮ್ಮದೇ ಸಿಎಂ ಬಯಸಿದೆ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ಬಯಸಿದೆ ಮತ್ತು ಎನ್‌ಸಿಪಿ ಶಿವಸೇನೆನಿಂದ ನಾಯಕರನ್ನು ದೂರವಿಡಲು ಪ್ರಯತ್ನಿಸುತ್ತಿದೆ. ಕೇಂದ್ರದಿಂದ ಬೆಂಬಲವನ್ನು ಮರೆಮಾಚಲಾಗಿದೆ ಎಂದು ತೋರುತ್ತದೆ, ಎನ್‌ಸಿಪಿ ನಾಯಕರ ಹಿಂದೆ ಯಾವುದೇ ಕೇಂದ್ರ ಸಂಸ್ಥೆ ಇಲ್ಲ" ಎಂದು ಹೇಳಿದ್ದಾರೆ. ಈಗ ಹಣ ವರ್ಗಾವಣೆ ಪ್ರಕರಣದಲ್ಲಿ ಸರ್ನಾಯಕ್ ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದಾರೆ.

ಶಿವಸೇನೆ (Shiv Sena) ಮುಖಂಡ ಸಂಜಯ್ ರೌತ್ ಅವರು ಶಾಸಕರ ಬೇಡಿಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರೂ, ಮಹಾ ವಿಕಾಸ್ ಅಘಾಡಿ ಶಾಸಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಬಗ್ಗೆ ಬಹಳ ಮುಖ್ಯವಾದ ವಿಷಯವನ್ನು ಎತ್ತಲಾಗಿದೆ. ಈಗ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಹಾಗೂ ವಕ್ತಾರ ಸಂಜಯ್ ರೌತ್ " ಶಾಸಕರೊಬ್ಬರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ನಾನು ಏನು ಹೇಳಬೇಕು? ಆದಾಗ್ಯೂ, ಪತ್ರವು ಅಧಿಕೃತವಾಗಿದ್ದರೆ, ಮಹಾ ವಿಕಾಸ್ ಅಘಾದಿಯ ಶಾಸಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಪ್ರಮುಖ ವಿಷಯವನ್ನು ಅವರು ಎತ್ತಿದ್ದಾರೆ" ಎಂದು ರೌತ್ ಎಎನ್‌ಐಗೆ ತಿಳಿಸಿದರು.

ಇದನ್ನೂ ಓದಿ: ದೇಶಾದ್ಯಂತ ಕನ್ನಡ ಭಾಷಾ ದಿನವನ್ನು ಯಾವಾಗ ಆಚರಿಸುತ್ತೀರಿ ಮೋದಿಯವರೇ ?- ಕುಮಾರಸ್ವಾಮಿ

ಭದ್ರತಾ ಸೇವಾ ಪೂರೈಕೆದಾರ ಕಂಪನಿ ಮತ್ತು ಇತರರ ವಿರುದ್ಧ ಮನಿ ಲಾಂಡರಿಂಗ್ ಪ್ರಕರಣದ ತನಿಖೆ ನಡೆಸುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2020 ರ ನವೆಂಬರ್‌ನಲ್ಲಿ ಇಡಿ ಮಹಾರಾಷ್ಟ್ರದ ಸರ್ನಾಯ್ಕ್‌ಗೆ ಸಂಬಂಧಿಸಿದ ಆವರಣದ ಮೇಲೆ ದಾಳಿ ನಡೆಸಿತ್ತು. 

ಶಿವಸೇನೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಪಕ್ಷ ಬಿಜೆಪಿಯೊಂದಿಗೆ ಪತನಗೊಂಡ ನಂತರ 2019 ರಲ್ಲಿ ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News