ನವದೆಹಲಿ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಭಾಗವಾಗಿ ತಯಾರಿಸುವ 'ಕಿಚಿಡಿ'ಯಲ್ಲಿ ಹಾವು ಪತ್ತೆಯಾಗಿರುವ ಸಂಗತಿ ವರದಿಯಾಗಿದೆ.
ಬುಧವಾರದಂದು ಗಾರ್ಗವನ್ ಜಿಲ್ಲಾ ಪರಿಷದ್ ಪ್ರಾಥಮಿಕ ಶಾಲೆಯಲ್ಲಿ ಸುಮಾರು 80 ವಿದ್ಯಾರ್ಥಿಗಳು ಬಿಸಿಯೂಟ ಸೇವಿಸುತ್ತಿದ್ದ ಸಂದರ್ಭದಲ್ಲಿ ಹಾವು ಪತ್ತೆಯಾಗಿದೆ ಎನ್ನಲಾಗಿದೆ.ಶಾಲಾ ಸಿಬ್ಬಂಧಿಯೂ ಊಟ ಬಡಿಸುತ್ತಿದ್ದ ಸಂದರ್ಭದಲ್ಲಿ ಹಾವು ಪತ್ತೆಯಾಗಿದ್ದನ್ನು ಕಂಡು ಅಲ್ಲಿ ನೆರೆದಿದ್ದವವರು ದಿಗ್ಬ್ರಮೆಗೊಂಡರು.
ಈ ಘಟನೆ ಸಂಭವಿಸಿದ ನಂತರ ಬಿಸಿಯೂಟವನ್ನು ತಕ್ಷಣ ನಿಲ್ಲಿಸಲಾಯಿತು.ಇದರಿಂದ ಬಹುತೇಕ ವಿದ್ಯಾರ್ಥಿಗಳು ಹಸಿವಿನಿಂದ ಇರಬೇಕಾಯಿತು.ಈ ಘಟನೆ ವಿಚಾರವನ್ನು ನಾಂದೇಡ್ ಜಿಲ್ಲೆಯ ಶಿಕ್ಷಣಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ.ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದ್ದೇವೆ,ಡಿಇಓ ತಂಡವು ಇಂದು ಗ್ರಾಮಕ್ಕೆ ತಲುಪಿ ತನಿಖೆ ನಡೆಸಲಿದೆ ಆನಂತರ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಡಿಇಓ ಪ್ರಶಾಂತ್ ದಿಗ್ರಾಸ್ಕರ್ ತಿಳಿಸಿದ್ದಾರೆ.
1996 ರಲ್ಲಿ ಕಿಚಡಿ ಕಾರ್ಯಕ್ರಮದ ಭಾಗವಾಗಿ ಈ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಗಿದೆ.ಆ ಮೂಲಕ ವಿದ್ಯಾರ್ಥಿಗಳಲ್ಲಿ ನ್ಯೂಟ್ರಿಶಿಯಸ್ ಅಂಶಗಳನ್ನು ಹೆಚ್ಚಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.