ಆಧ್ಯಾತ್ಮಿಕ ಗುರು ದಾದಾ ವಾಸ್ವಾನಿ ಇನ್ನಿಲ್ಲ

    

Last Updated : Jul 12, 2018, 12:12 PM IST
ಆಧ್ಯಾತ್ಮಿಕ ಗುರು ದಾದಾ ವಾಸ್ವಾನಿ ಇನ್ನಿಲ್ಲ  title=
Photo courtesy: ANI

ಪುಣೆ: ಆಧ್ಯಾತ್ಮಿಕ ಗುರು ದಾದಾ ವಾಸ್ವಾನಿ ಪುಣೆಯಲ್ಲಿ  ಗುರುವಾರದಂದು ತಮ್ಮ 99 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಪಾಕಿಸ್ತಾನದ ಹೈದರಾಬಾದ್ ನಲ್ಲಿ ಸಿಂಧಿ ಕುಟುಂಬದಲ್ಲಿ ಅಗಸ್ಟ್ 2 1918 ರಂದು ಜನಿಸಿದ ವಾಸ್ವಾನಿಯವರು  ಶಿಕ್ಷಣ ತಜ್ಞ, ತತ್ವಜ್ಞಾನಿ, ಲೇಖಕ, ಮತ್ತು ಅಹಿಂಸೆಯ ಪ್ರತಿಪಾದಕರಾಗಿದ್ದರು. ಅಲ್ಲದೆ ಅವರು ಪ್ರಾಣಿ ಹಕ್ಕುಗಳ ಬಗ್ಗೆ ಮತ್ತು ಸಸ್ಯಾಹಾರದ ಪ್ರಮುಖ ಪ್ರವರ್ತಕರಾಗಿದ್ದರು.

ದಾದಾ ವಾಸ್ವಾನಿಯವರು ಪುಣೆಯಲ್ಲಿರುವ ಸಾಧು ವಾಸ್ವಾನಿ ಮಿಶನ್  ನ ಮುಖ್ಯಸ್ಥರಾಗಿದ್ದರು.ಈ ಸಂಸ್ಥೆಯು ಅವರ ಗುರುಗಳಾದ  ಸಾಧು ಟಿ.ಎಲ್ ವಾಸ್ವಾನಿಯವರಿಂದ ಸ್ಥಾಪನೆಯಾಗಿತ್ತು. ಲೇಖಕರಾಗಿ ಸುಮಾರು  150 ಪುಸ್ತಕಗಳನ್ನು ರಚಿಸಿದ್ದಾರೆ. ಅಲ್ಲದೆ ತಮ್ಮ ಜಾಗತಿಕ ಶಾಂತಿಗಾಗಿ ಅವರಿಗೆ 1998 ರಲ್ಲಿ  ಯು  ತಾಂತ್ ಶಾಂತಿ ಪ್ರಶಸ್ತಿ ದೊರಕಿದೆ. 

ಕಳೆದ ವರ್ಷ 99 ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ಕೋರಿದ್ದರು.
 

 

Trending News