ಕ್ಲರ್ಕ್ ಸೇರಿದಂತೆ ಹಲವು ಹುದ್ದೆಗಳಿಗೆ ಎಸ್‌ಎಸ್‌ಸಿ ನೇಮಕಾತಿ, ಇಲ್ಲಿದೆ ವಿವರ

ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ), ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್, ಅಂಚೆ ಸಹಾಯಕ, ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅಧಿಸೂಚನೆ ಹೊರಡಿಸಿದೆ.

Last Updated : Nov 13, 2020, 12:37 PM IST
  • ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮಗಾಗಿ ಈ ಸುದ್ದಿ ಮುಖ್ಯವಾಗಿದೆ.
  • ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ
  • ಅರ್ಜಿ ಸಲ್ಲಿಸುವ ಮೊದಲು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಸೂಚನೆಯನ್ನು ತಪ್ಪದೆ ಸಂಪೂರ್ಣವಾಗಿ ಓದಿರಿ.
ಕ್ಲರ್ಕ್ ಸೇರಿದಂತೆ ಹಲವು ಹುದ್ದೆಗಳಿಗೆ ಎಸ್‌ಎಸ್‌ಸಿ ನೇಮಕಾತಿ, ಇಲ್ಲಿದೆ ವಿವರ title=
Photo Credit Official Website: https://ssc.nic.in/

ಭೋಪಾಲ್: ನೀವು ಯಾವುದೇ ಮಂಡಳಿಯಿಂದ 12ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿದ್ದರೆ ಮತ್ತು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದರೆ ನಿಮಗಾಗಿ ದೊಡ್ಡ ಸುದ್ದಿ ಇದೆ. ಸಂಯೋಜಿತ ಹೈಯರ್ ಸೆಕೆಂಡರಿ ಹಂತದ ಹುದ್ದೆಗಳಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನೇಮಕಾತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಆಯೋಗದ ಅಧಿಕೃತ ವೆಬ್‌ಸೈಟ್ www.ssc.nic.in ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿಯ ಪೂರ್ಣ ಹಂತಗಳನ್ನು ನೀಡಲಾಗಿದೆ.

ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ), ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್, ಅಂಚೆ ಸಹಾಯಕ, ಸಾರ್ಟಿಂಗ್ ಅಸಿಸ್ಟೆಂಟ್ ಮತ್ತು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಈ ನೇಮಕಾತಿ ಮಾಡುವ ಬಗ್ಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಹೊರಡಿಸಿರುವ ಅಧಿಸೂಚನೆಯಲ್ಲಿ  ತಿಳಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಅಧಿಸೂಚನೆಯನ್ನು ತಪ್ಪದೆ ಸಂಪೂರ್ಣವಾಗಿ ಓದಿರಿ.

ಶೈಕ್ಷಣಿಕ ಅರ್ಹತೆ: Education Qualification
ಎಸ್‌ಎಸ್‌ಸಿಯ (SSC) ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾದ ಅಧಿಸೂಚನೆಯ ಪ್ರಕಾರ ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ), ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್, ಅಂಚೆ ಸಹಾಯಕ ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 12 ನೇ ತರಗತಿ ಪಾಸ್ ಆಗಿರಬೇಕು.

ಅರ್ಜಿ ಶುಲ್ಕ: Registration Fee
ಲೋವರ್ ಡಿವಿಷನ್ ಕ್ಲರ್ಕ್ (ಎಲ್‌ಡಿಸಿ), ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್, ಅಂಚೆ ಸಹಾಯಕ ಸೇರಿದಂತೆ ಇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನರಲ್ ಮತ್ತು ಒಬಿಸಿ ವಿಭಾಗದ ಅಭ್ಯರ್ಥಿಗಳು 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಮಹಿಳಾ ಅಭ್ಯರ್ಥಿಗಳು, ಅಂಗವಿಕಲ ಅಭ್ಯರ್ಥಿಗಳು, ಎಸ್‌ಸಿ ಮತ್ತು ಎಸ್‌ಟಿ ವರ್ಗದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ.

RITESನಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಪೂರ್ಣ ವಿವರ

ವಿವಿಧ ಎಸ್‌ಎಸ್‌ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: SSC Job 2020 registration Important dates
1- ನವೆಂಬರ್ 6 ರಿಂದ ಎಸ್‌ಎಸ್‌ಸಿಯಲ್ಲಿ ನೇಮಕಾತಿಗಾಗಿ ಅರ್ಜಿಗಳನ್ನು ಸಲ್ಲಿಸಬಹುದು.
2- ಎಸ್‌ಎಸ್‌ಸಿಯಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಡಿಸೆಂಬರ್ 2020.
3- ಡಿಸೆಂಬರ್ 17 ರೊಳಗೆ ಅಭ್ಯರ್ಥಿಗಳು ಎಸ್‌ಎಸ್‌ಸಿಯಲ್ಲಿ ನೇಮಕಾತಿಗಾಗಿ ಆನ್‌ಲೈನ್ ಶುಲ್ಕವನ್ನು ಪಾವತಿಸಬಹುದು.
4- ಕಂಪ್ಯೂಟರ್ (ಸಿಬಿಟಿ) ಆಧಾರಿತ ಶ್ರೇಣಿ -1 ಪರೀಕ್ಷೆಯು 12 ಏಪ್ರಿಲ್ 2021 ರಿಂದ 27 ಏಪ್ರಿಲ್ 2021 ರವರೆಗೆ ಇರುತ್ತದೆ.
5- ಶ್ರೇಣಿ -1 ಪರೀಕ್ಷೆಯ ಫಲಿತಾಂಶ (Result) ಘೋಷಣೆಯ ನಂತರ ಕಂಪ್ಯೂಟರ್ (ಸಿಬಿಟಿ) ಆಧಾರಿತ ಶ್ರೇಣಿ -2 ಪರೀಕ್ಷೆಯನ್ನು ನಡೆಸಲಾಗುವುದು.

JOB: ಆರೋಗ್ಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ನೇರ ಸಂದರ್ಶನ

ಎಸ್‌ಎಸ್‌ಸಿಯ ವಿವಿಧ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು? SSC Jobs 2020 How To Apply
1-ಎಸ್‌ಎಸ್‌ಸಿಯ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೊದಲು ಆಯೋಗದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
2- ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ.
3- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸುವ ಮೂಲಕ ನೋಂದಾಯಿಸಿ.
4- ವಿವಿಧ ಹುದ್ದೆಗಳಲ್ಲಿ ನೇಮಕಾತಿಗಾಗಿ ಫಾರ್ಮ್ ಅನ್ನು ಭರ್ತಿ ಮಾಡಿ.
5. ಅರ್ಜಿಯನ್ನು ಸಲ್ಲಿಸುವ ಮೊದಲು ನೀವು ಭರ್ತಿ ಮಾಡಿರುವ ಮಾಹಿತಿ ಸರಿಯಾಗಿದೆಯೇ ಎಂದು ಒಮ್ಮೆ ಪರಿಶೀಲಿಸಿ.

Trending News