ಇಂಜಿನ್ ರಹಿತ T-18 ಟ್ರೈನ್'ನ ಮೊದಲ ಪ್ರಾಯೋಗಿಕ ಚಲನೆ ಯಶಸ್ವಿ

ಮೊರಾದಾಬಾದ್-ಬರೇಲಿ ವಿಭಾಗದಲ್ಲಿ ಇಂಜಿನ್ ರಹಿತ ಟಿ -18 ರೈಲಿನ ಮೊದಲ ಪ್ರಯೋಗ ಯಶಸ್ವಿಯಾಗಿದೆ. ಟ್ರೈನ್ 90-120 ಕಿ.ಮೀ. ವೇಗವನ್ನು ಸುಲಭವಾಗಿ ಸಂಚರಿಸಿದೆ.

Last Updated : Nov 22, 2018, 04:28 PM IST
ಇಂಜಿನ್ ರಹಿತ T-18 ಟ್ರೈನ್'ನ ಮೊದಲ ಪ್ರಾಯೋಗಿಕ ಚಲನೆ ಯಶಸ್ವಿ title=

ನವದೆಹಲಿ: ಇಂಜಿನ್ ರಹಿತ T-18 ಟ್ರೈನ್'ನ ಮೊದಲ ಪ್ರಾಯೋಗಿಕ ಚಲನೆ ಯಶಸ್ವಿಯಾಗಿದ್ದು, ದೇಶದ ಅತ್ಯಂತ ಆಧುನಿಕ ಟ್ರೈನ್ T-18 ಮುಂದಿನ ತಿಂಗಳಿನಿಂದ ಪ್ರಯಾಣಿಕರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ರೈಲ್ವೆ ಸಚಿವಾಲಯದ ಮೂಲಗಳಿಂದ T-18 ಟ್ರೈನ್ ಡಿಸೆಂಬರ್ 15 ರಿಂದ ಕಾರ್ಯನಿರ್ವಹಿಸಲಿದೆ ಎಂಬ ಮಾಹಿತಿ ಲಭಿಸಿದೆ. 

ಮೊರಾದಾಬಾದ್-ಬರೇಲಿ ವಿಭಾಗದಲ್ಲಿ T-18 ಟ್ರೈನ್'ನ ಮೊದಲ ಪ್ರಾಯೋಗಿಕ ಚಲನೆ ನಡೆಯಿತು. ಯಾವುದೇ ತೊಂದರೆ ಇಲ್ಲದೆ ಟ್ರೈನ್ 90-120 ಕಿ.ಮೀ. ವೇಗವನ್ನು ಸುಲಭವಾಗಿ ಸಂಚರಿಸಿದೆ. ಮುಂದಿನ ವಾರದವರೆಗೆ ಈ ಪ್ರಯೋಗ ಪೂರ್ಣಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಪ್ರಾಯೋಗಿಕ ಚಲನೆ ಯಶಸ್ವಿಯಾದರೆ T-18 160-200 kmph ನಿಂದ ಚಲಾಯಿಸಲು ಮತ್ತೊಂದು ಪ್ರಾಯೋಗಿಕ ಚಲನೆ ನಡೆಯಲಿದೆ.

ಮೊದಲಿಗೆ, ತೇಜಸ್ ತನ್ನ 160-200 ಕಿಮೀ ಸಾಮರ್ಥ್ಯವನ್ನು ಪತ್ತೆಹಚ್ಚಲು ಪ್ರಯೋಗಕ್ಕೊಳಪಡಿಸಲಾಯಿತು ಮತ್ತು ಅದು ಯಶಸ್ವಿಯಾಗಿದೆ.

ದೆಹಲಿ-ಭೂಪಾಲ್ ಮಾರ್ಗ:
ಟಿ -18 ರೈಲು ಶತಾಬ್ದಿ ಎಕ್ಸ್ಪ್ರೆಸ್ ಅನ್ನು ಬದಲಿಸುತ್ತದೆ ಮತ್ತು ದೆಹಲಿಯಿಂದ ಭೋಪಾಲ್ ಮಾರ್ಗವಾಗಿ ಈ ರೈಲು ಚಲಿಸಲಿದೆ ಎಂದು ಮೂಲಗಳು ಹೇಳಿವೆ. ಈ ಸಮಯದಲ್ಲಿ ಅದರ ವೇಗವು 160 kmph ಆಗಿರುತ್ತದೆ. ಇದು ಭಾರತದಲ್ಲಿ ತಯಾರಿಸಿರುವ ಮೊದಲ ರೈಲು. ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ICF) ಯಲ್ಲಿ ಈ ರೈಲನ್ನು ಸಿದ್ಧಪಡಿಸಲಾಗಿದೆ. ಮುಂದಿನ ವಾರ ಮಾರ್ಗದ ಬಗ್ಗೆ ಅಂತಿಮ ನಿರ್ಧಾರ  ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

Trending News