ಶ್ರೀರಾಮ, ಶ್ರೀಕೃಷ್ಣನ ನಂತರ ಹಿಟ್ಲರ್ ವೇಷ ಧರಿಸಿದ ಟಿಡಿಪಿ ಸಂಸದ!

ದನಕಾಯುವ ಹುಡುಗನಿಂದ ನಾರದ ಮುನಿಯವರೆಗೆ ಕೃಷ್ಣ, ರಾಮ, ಸತ್ಯಸಾಯಿ ಹೀಗೆ ವಿಭಿನ್ನ ವೇಷಭೂಷಣಗಳನ್ನು ತೊಟ್ಟು ಶಿವಕುಮಾರ್ ಪ್ರತಿಭಟನೆ ನಡೆಸಿದ್ದಾರೆ.

Updated: Aug 10, 2018 , 05:05 PM IST
ಶ್ರೀರಾಮ, ಶ್ರೀಕೃಷ್ಣನ ನಂತರ ಹಿಟ್ಲರ್ ವೇಷ ಧರಿಸಿದ ಟಿಡಿಪಿ ಸಂಸದ!
Pic courtesy : DNA

ನವದೆಹಲಿ: ಆಂಧ್ರಪ್ರದೇಶಕ್ಕೆ 'ವಿಶೇಷ ಸ್ಥಾನಮಾನ'ಕ್ಕೆ ಒತ್ತಾಯಿಸಿ ತೆಲುಗು ದೇಶಂ ಪಕ್ಷ (ಟಿಡಿಪಿ) ಪ್ರತಿಭಟನೆ ನಡೆಸುತ್ತಿದ್ದು, ಪಕ್ಷದ ಚಿತ್ತೂರ್ ಸಂಸದ ನರಮಲ್ಲಿ ಶಿವಪ್ರಸಾದ್ ಸೃಜನಾತ್ಮಕ ವೇಷಭೂಷಣಗಳೊಂದಿಗೆ ಪ್ರತಿಭಟನೆಗೆ ವಿಭಿನ್ನ ರೂಪ ನೀಡುತ್ತಾ ಬಂದಿದ್ದಾರೆ.

ಆದರೆ ಈ ಬಾರಿ ಜರ್ಮನಿಯ ಸರ್ವಾಧಿಕಾರಿಯಾಗಿದ್ದ ಅಡಾಲ್ಫ್​ ಹಿಟ್ಲರ್​ ವೇಷ ಧರಿಸಿ ಗುರುವಾರ ಸಂಸತ್ತಿಗೆ ಆಗಮಿಸಿದ ಶಿವಕುಮಾರ್ ಎಲ್ಲರ ಗಮನ ಸೆಳೆದರು. ಇದುವರೆಗೂ ದನಕಾಯುವ ಹುಡುಗನಿಂದ ನಾರದ ಮುನಿಯವರೆಗೆ ಕೃಷ್ಣ, ರಾಮ, ಸತ್ಯಸಾಯಿ ಹೀಗೆ ವಿಭಿನ್ನ ವೇಷಭೂಷಣಗಳನ್ನು ತೊಟ್ಟು ಪ್ರತಿಭಟನೆ ನಡೆಸಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ನರಮಲ್ಲಿ ಶಿವಪ್ರಸಾದ್ ಈಗಾಗಲೇ ಹಲವು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 1999 ರಲ್ಲಿ ಶಾಸಕರಾಗಿ ಆಯ್ಕೆಯಾಗಿ ಚಂದ್ರಬಾಬು ನಾಯ್ಡು ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದರು.