ಪ್ರಾಕ್ಟಿಕಲ್ ತರಗತಿ ಹೆಸರಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರಿಂದಲೇ ಕಿರುಕುಳ ಆರೋಪ

ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಶಾಲಾ ಶಿಕ್ಷಕರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

Edited by - ZH Kannada Desk | Last Updated : Dec 7, 2021, 12:42 PM IST
  • ಪ್ರಾಕ್ಟಿಕಲ್ ತರಗತಿ ಹೆಸರಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರಿಂದಲೇ ಕಿರುಕುಳ ಆರೋಪ
  • ಇಬ್ಬರು ಶಾಲಾ ಶಿಕ್ಷಕರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲು
ಪ್ರಾಕ್ಟಿಕಲ್ ತರಗತಿ ಹೆಸರಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರಿಂದಲೇ ಕಿರುಕುಳ ಆರೋಪ

ಮುಜಾಫರ್‌ನಗರ (ಉತ್ತರ ಪ್ರದೇಶ): ಪ್ರಾಕ್ಟಿಕಲ್ ತರಗತಿ ಹೆಸರಲ್ಲಿ ವಿದ್ಯಾರ್ಥಿನಿಗೆ ಶಿಕ್ಷಕರಿಂದಲೇ ಕಿರುಕುಳ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಶಾಲಾ ಶಿಕ್ಷಕರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಇದನ್ನೂ ಓದಿ: Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!

ಹಿರಿಯ ಪೊಲೀಸ್ ಅಧೀಕ್ಷಕ ಅಭಿಷೇಕ್ ಯಾದವ್, ಪ್ರಾಕ್ಟಿಕಲ್ಸ್‌ಗಾಗಿ ಬಾಲಕಿಯೊಬ್ಬಳು ಅಕಾಡೆಮಿಗೆ ಹೋಗಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು. ಇಬ್ಬರು ಶಾಲಾ ಶಿಕ್ಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೌರ್ಜನ್ಯ ಪ್ರಕರಣ ವರದಿಯಾಗಿದೆ. ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. 

ಆರೋಪಿಗಳ ಬಂಧನಕ್ಕೆ ಐದು ತಂಡಗಳನ್ನು ರಚಿಸಲಾಗಿದೆ. ಇಬ್ಬರು ಶಿಕ್ಷಕರ ಬಂಧನಕ್ಕೆ ಅಪರಾಧ ವಿಭಾಗದ ತಂಡಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Mystery House On Moon:ಚಂದ್ರನ ಮೇಲೆ "ಮಿಸ್ಟರಿ ಹೌಸ್".! ಅಚ್ಚರಿ ತಂದ ಚೈನೀಸ್ ರೋವರ್ ಸೆರೆಹಿಡಿದ ಚಿತ್ರ

ಏನಾಯಿತು ಎಂಬುದನ್ನು ಯಾರಿಗೂ ಹೇಳಬೇಡಿ. ಯಾರಾದರೂ ಬಳಿ ಹೇಳಿದರೆ ಅವರ ಕುಟುಂಬ ಸದಸ್ಯರನ್ನು ಕೊಲ್ಲಲಾಗುವುದು ಎಂದು ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದೆ. 

ಪ್ರಾಕ್ಟಿಕಲ್ ತರಗತಿ ಹೆಸರಲ್ಲಿ ವಿದ್ಯಾರ್ಥಿನಿಗೆ ಶಾಲೆಗೆ ಕರಿಸಿದ  ಶಿಕ್ಷಕರು ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. 

More Stories

Trending News