ಬಿಹಾರ: ಮತದಾರರ ಪಟ್ಟಿಯಲ್ಲಿ ತೇಜಸ್ವಿಯಾದವ್ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ

ನಳಂದ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರಾ, ಅರ್ವಾಲ್, ಬಕ್ಸಾರ್, ಕರಕತ್ ಮತ್ತು ಜೆಹನಾಬಾದ್ನಲ್ಲಿ ಲೋಕಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ.

Last Updated : May 19, 2019, 01:30 PM IST
ಬಿಹಾರ: ಮತದಾರರ ಪಟ್ಟಿಯಲ್ಲಿ ತೇಜಸ್ವಿಯಾದವ್ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ title=

ಪಾಟ್ನಾ: ಬಿಹಾರದ ನಳಂದ, ಪಾಟ್ನಾ ಸಾಹಿಬ್, ಪಾಟಲಿಪುತ್ರ, ಅರಾ, ಅರ್ವಾಲ್, ಬಕ್ಸಾರ್, ಕರಕತ್ ಮತ್ತು ಜೆಹನಾಬಾದ್ನಲ್ಲಿ ಲೋಕಸಭಾ ಚುನಾವಣೆಗೆ ಇಂದು ಏಳನೇ ಹಂತದಲ್ಲಿ ಮತದಾನ ನಡೆಯುತ್ತಿದೆ. 

ಏತನ್ಮಧ್ಯೆ ಚುನಾವಣಾ ಆಯೋಗದ ಎಡವಟ್ಟು ಬೆಳಕಿಗೆ ಬಂದಿದ್ದು, ಮತದಾರರ ಪಟ್ಟಿಯಲ್ಲಿ ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಅವರ ಕಿರಿಯ ಪುತ್ರ ಮತ್ತು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರ ಹೆಸರಿನ ಮುಂದೆ ಮತ್ತಾರದ್ದೋ ಫೋಟೋ ಹಾಕಲಾಗಿದೆ.

ವೆಟಾನರಿ ಕಾಲೇಜಿನ ಮತದಾನ ಕೇಂದ್ರದಲ್ಲಿ ತೇಜಸ್ವಿ ಯಾದವ್ ಹೆಸರಿದ್ದು,  ಈ ಬಗ್ಗೆ ವರದಿಯಾದ ಬಳಿಕ ಕಮಿಷನ್ ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ. ಈ ಪ್ರಕರಣದಲ್ಲಿ ದೋಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

Trending News