ಅಯೋಧ್ಯೆ ರಾಮ ಮಂದಿರದ ಮೇಲೆ ಉಗ್ರರ ಕರಿ ನೆರಳು : ಗುಪ್ತಚರ ಇಲಾಖೆಯಿಂದ ಎಚ್ಚರಿಕೆ

Intelligence Alert for Ram Mandir:ರಾಮಮಂದಿರದ ಮೇಲೆ ದಾಳಿ ನಡೆಸಲು ಭಯೋತ್ಪಾದಕರ ಸಂಚು ರೂಪಿಸಿರುವುದನ್ನು ಗುಪ್ತಚರ ಬಯಲು ಮಾಡಿದೆ. ಆತ್ಮಾಹುತಿ ಬಾಂಬರ್ ಮೂಲಕ ದಾಳಿ ನಡೆಸಲು ಭಯೋತ್ಪಾದಕರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. 

Written by - Ranjitha R K | Last Updated : Jan 16, 2023, 12:34 PM IST
  • ರಾಮಮಂದಿರದ ಮೇಲೆ ಉಗ್ರರ ಕರಿ ನೆರಳು
  • ದಾಳಿ ನಡೆಸಲು ಭಯೋತ್ಪಾದಕರ ಸಂಚು
  • ದಾಳಿಗೆ ಸಂಚು ರೂಪಿಸಿದ ಜೈಶ್-ಎ-ಮೊಹಮ್ಮದ್
ಅಯೋಧ್ಯೆ ರಾಮ ಮಂದಿರದ ಮೇಲೆ ಉಗ್ರರ ಕರಿ ನೆರಳು : ಗುಪ್ತಚರ ಇಲಾಖೆಯಿಂದ ಎಚ್ಚರಿಕೆ   title=

Intelligence Alert for Ram Mandir : ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಮೇಲೆ ಉಗ್ರರ ಕರಿ ನೆರಳು ಬಿದ್ದಿದೆ. ರಾಮ ಮಂದಿರದ ಮೇಲೆ ಉಗ್ರರು ದಾಳಿ ನಡೆಸುವ ಸಾಧ್ಯತೆ ಬಗ್ಗೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದೆ. ರಾಮಮಂದಿರದ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿರುವುದನ್ನು ಗುಪ್ತಚರ ಬಯಲು ಮಾಡಿದೆ. ಆತ್ಮಾಹುತಿ ಬಾಂಬರ್ ಮೂಲಕ ದಾಳಿ ನಡೆಸಲು ಭಯೋತ್ಪಾದಕರು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. 

ಸ್ಥಳದಲ್ಲಿ ಬಿಗಿ ಭದ್ರತೆ : 
ರಾಮಮಂದಿರ ನಿರ್ಮಾಣವಾಗುತ್ತಿರುವ ಅಯೋಧ್ಯೆಯಲ್ಲಿ ಈಗಾಗಲೇ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಗುಪ್ತಚರ ಸಂಸ್ಥೆಗಳು ನೀಡಿರುವ ಎಚ್ಚರಿಕೆಯ ನಂತರ, ಉತ್ತರ ಪ್ರದೇಶ ಪೊಲೀಸರು ಮೊದಲಿಗಿಂತ ಹೆಚ್ಚು ಅಲರ್ಟ್ ಆಗಿದ್ದಾರೆ. ದಾಳಿಕೋರರು ತಮ್ಮ ಯೋಜನೆಗಳಲ್ಲಿ ಯಶಸ್ವಿಯಾಗದಂತೆ ಸ್ಥಳದಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ.

ಇದನ್ನೂ ಓದಿ : Hockey World Cup 2023: ಭಾರತ-ಇಂಗ್ಲೆಂಡ್ ಹಾಕಿ ಪಂದ್ಯ ಡ್ರಾದಲ್ಲಿ ಅಂತ್ಯ

ದಾಳಿಗೆ ಸಂಚು ರೂಪಿಸಿದ  ಜೈಶ್-ಎ-ಮೊಹಮ್ಮದ್ :
ಮುಂದಿನ ದಿನಗಳಲ್ಲಿ ಅಯೋಧ್ಯೆಯ ರಾಮ ಮಂದಿರದ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಮುಂದಾಗಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ದಾಳಿಗೆ ಸಂಚು ರೂಪಿಸಿದೆ ಎನ್ನಲಾಗಿದೆ. 

ನೇಪಾಳದ ಮೂಲಕ ಭಾರತ ಪ್ರವೇಶ ಸಾಧ್ಯತೆ : 
ಮೂಲಗಳ ಮಾಹಿತಿ ಪ್ರಕಾರ ಉಗ್ರರು ಪಾಕಿಸ್ತಾನದಿಂದ ನೇಪಾಳದ ಮೂಲಕ ಭಾರತದೊಳಗೆ ನುಸುಳಿ ದಾಳಿ ನಡೆಸಲು ಮುಂದಾಗಿದ್ದಾರೆ. ನೇಪಾಳದ ಮೂಲಕ ಭಾರತಕ್ಕೆ ಆತ್ಮಹತ್ಯಾ ಬಾಂಬರ್ ದಳವನ್ನು ಕಳುಹಿಸುವ ಮೂಲಕ ಜೈಶ್-ಎ-ಮೊಹಮ್ಮದ್ ದಾಳಿ  ನಡೆಸಲು ಯೋಜನೆ ರೂಪಿಸಿದೆ. 

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಸಂತದ ಸುದ್ದಿ, ಕನಿಷ್ಠ ವೇತನದಲ್ಲಿ ಶೀಘ್ರದಲ್ಲೇ ಹೆಚ್ಚಳ

ಶ್ರೀರಾಮ ಮಂದಿರ ನಿರ್ಮಾಣದ ಶೇ.50ಕ್ಕೂ ಹೆಚ್ಚು ಕಾಮಗಾರಿ ನಡೆದಿದ್ದು, ಈ ವರ್ಷಾಂತ್ಯಕ್ಕೆ ಮಂದಿರ ಸಂಪೂರ್ಣ ಸಿದ್ಧಗೊಳ್ಳಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News