ನವದೆಹಲಿ: ಜಮುಯಿ ಜಿಲ್ಲೆಯಲ್ಲಿ ದೇಶದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಅನ್ವೇಷಿಸಲು ಬಿಹಾರ ಸರ್ಕಾರವು ಅನುಮತಿ ನೀಡಲು ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಮೀಕ್ಷೆಯ ಪ್ರಕಾರ, ಜಮುಯಿ ಜಿಲ್ಲೆಯಲ್ಲಿ 37.6 ಟನ್ ಖನಿಜಯುಕ್ತ ಅದಿರು ಸೇರಿದಂತೆ ಸುಮಾರು 222.88 ಮಿಲಿಯನ್ ಟನ್ಗಳಷ್ಟು ಚಿನ್ನದ ನಿಕ್ಷೇಪವಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಮ್ ಗಣಿ ಆಯುಕ್ತ ಹರ್ಜೋತ್ ಕೌರ್ ಬಮ್ರಾಹ್ 'ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಮುಯಿಯಲ್ಲಿನ ಚಿನ್ನದ ನಿಕ್ಷೇಪಗಳ ಅನ್ವೇಷಣೆಗಾಗಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಮತ್ತು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ ಸೇರಿದಂತೆ ಅನ್ವೇಷಣೆಯಲ್ಲಿ ತೊಡಗಿರುವ ಏಜೆನ್ಸಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.ಜಮುಯಿ ಜಿಲ್ಲೆಯ ಕರ್ಮಾಟಿಯಾ, ಝಾಝಾ ಮತ್ತು ಸೋನೋ ಮುಂತಾದ ಪ್ರದೇಶಗಳಲ್ಲಿ ಚಿನ್ನದ ಉಪಸ್ಥಿತಿಯನ್ನು ಸೂಚಿಸಿದ ಜಿಎಸ್ಐ ಸಂಶೋಧನೆಗಳನ್ನು ವಿಶ್ಲೇಷಿಸಿದ ನಂತರ ಸಮಾಲೋಚನೆ ಪ್ರಕ್ರಿಯೆಯು ಪ್ರಾರಂಭವಾಯಿತು" ಎಂದು ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕಿಚ್ಚನ ಕನ್ನಡ ಚಾಲೆಂಜ್ ಸ್ವೀಕರಿಸಿದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್..!
ಇನ್ನು ಮುಂದುವರೆದು ಮಾತನಾಡಿದ ಅವರು 'ರಾಜ್ಯ ಸರ್ಕಾರವು ಒಂದು ತಿಂಗಳ ಅವಧಿಯಲ್ಲಿ G3 (ಪ್ರಾಥಮಿಕ) ಹಂತದ ಅನ್ವೇಷಣೆಗಾಗಿ ಕೇಂದ್ರೀಯ ಸಂಸ್ಥೆ ಅಥವಾ ಏಜೆನ್ಸಿಗಳೊಂದಿಗೆ ಎಂಒಯುಗೆ ಸಹಿ ಹಾಕುವ ಸಾಧ್ಯತೆಯಿದೆ. ಕೆಲವು ಪ್ರದೇಶಗಳಲ್ಲಿ, G2 (ಸಾಮಾನ್ಯ) ಪರಿಶೋಧನೆಯನ್ನು ಸಹ ಕೈಗೊಳ್ಳಬಹುದು ಎಂದು ಬಮ್ರಾಹ್ ಹೇಳಿದರು.
ಇದನ್ನೂ ಓದಿ: ವಿಕ್ರಾಂತ್ ರೋಣ’ ಸಾಂಗ್ ರಿಲೀಸ್..! ಅಭಿನಯ ಚಕ್ರವರ್ತಿ ಅಭಿಮಾನಿಗಳ ಸಂಭ್ರಮಾಚರಣೆ..!
ಕೇಂದ್ರ ಗಣಿ ಸಚಿವ ಪ್ರಲ್ಹಾದ್ ಜೋಶಿ ಕಳೆದ ವರ್ಷ ಲೋಕಸಭೆಗೆ ಮಾಹಿತಿ ನೀಡಿದ್ದು, ಬಿಹಾರವು ಭಾರತದ ಚಿನ್ನದ ನಿಕ್ಷೇಪದಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ.ಲಿಖಿತ ಉತ್ತರದಲ್ಲಿ, ಬಿಹಾರದಲ್ಲಿ 222.885 ಮಿಲಿಯನ್ ಟನ್ ಚಿನ್ನದ ಲೋಹವಿದೆ, ಇದು ದೇಶದ ಒಟ್ಟು ಚಿನ್ನದ ನಿಕ್ಷೇಪದ ಶೇಕಡಾ 44 ರಷ್ಟಿದೆ ಎಂದು ಹೇಳಿದ್ದಾರೆ.ರಾಷ್ಟ್ರೀಯ ಖನಿಜ ದಾಸ್ತಾನು ಪ್ರಕಾರ, 1.4.2015 ರಂತೆ ದೇಶದಲ್ಲಿ ಪ್ರಾಥಮಿಕ ಚಿನ್ನದ ಅದಿರಿನ ಒಟ್ಟು ಸಂಪನ್ಮೂಲಗಳು 654.74 ಟನ್ ಚಿನ್ನದ ಲೋಹದೊಂದಿಗೆ 501.83 ಮಿಲಿಯನ್ ಟನ್ಗಳು ಎಂದು ಅಂದಾಜಿಸಲಾಗಿದೆ ಮತ್ತು ಈ ಪೈಕಿ ಬಿಹಾರವು 222.885 ಮಿಲಿಯನ್ ಟನ್ಗಳಷ್ಟು ಅಧಿರು ಹೊಂದಿದ (44 ಪ್ರತಿ ಸೆಂಟ್) ಅದರಲ್ಲಿ 37.6 ಟನ್ ಲೋಹವನ್ನು ಹೊಂದಿದೆ ಎಂದು ಜೋಶಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.