ಚೀನಾದ ಪರ ಪ್ರಚಾರ ನಡೆಸುತ್ತಿರುವ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಕೇಂದ್ರ ಕಣ್ಣು

ಭಾರತದಲ್ಲಿ ಚೀನಾದ ಪ್ರಚಾರವನ್ನು ಹರಡುತ್ತಿರುವ ಸುಮಾರು 2,500 ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಕೇಂದ್ರ ಏಜೆನ್ಸಿಗಳು ಕಣ್ಣಿಟ್ಟಿವೆ ಎಂದು ಭದ್ರತಾ ಸಂಸ್ಥೆಗಳ ಮೂಲಗಳು ತಿಳಿಸಿವೆ. ಈ ಖಾತೆಗಳಲ್ಲಿ ಹೆಚ್ಚಿನವು ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

Last Updated : Sep 17, 2020, 06:37 PM IST
ಚೀನಾದ ಪರ ಪ್ರಚಾರ ನಡೆಸುತ್ತಿರುವ ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಕೇಂದ್ರ ಕಣ್ಣು  title=
ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ ಚೀನಾದ ಪ್ರಚಾರವನ್ನು ಹರಡುತ್ತಿರುವ ಸುಮಾರು 2,500 ಸೋಷಿಯಲ್ ಮೀಡಿಯಾ ಖಾತೆಗಳ ಮೇಲೆ ಕೇಂದ್ರ ಏಜೆನ್ಸಿಗಳು ಕಣ್ಣಿಟ್ಟಿವೆ ಎಂದು ಭದ್ರತಾ ಸಂಸ್ಥೆಗಳ ಮೂಲಗಳು ತಿಳಿಸಿವೆ. ಈ ಖಾತೆಗಳಲ್ಲಿ ಹೆಚ್ಚಿನವು ಫೇಸ್‌ಬುಕ್, ಟ್ವಿಟರ್ ಮತ್ತು ಯೂಟ್ಯೂಬ್ ಮೂಲಕ ಕಾರ್ಯನಿರ್ವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.

ಈ ಖಾತೆಗಳಲ್ಲಿ ಪಾಕಿಸ್ತಾನ, ಹಾಂಗ್ ಕಾಂಗ್, ಯುಕೆ, ರಷ್ಯಾ ಮತ್ತು ಚೀನಾ ದೇಶಗಳಲ್ಲಿ ಅವರ ಐಪಿ ವಿಳಾಸಗಳಿವೆ. ಚೀನಾ ಮೂಲದ ಕಂಪೆನಿಗಳು ಕೆಲವು ಭಾರತೀಯ ನಾಯಕರ ಮೇಲೆ ಕಣ್ಗಾವಲು ಇಟ್ಟಿರುವ ವರದಿಗಳ ನಂತರ ಇದು ಬಂದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಭಾರತೀಯ ಸೈನಿಕರ ಗಮನವನ್ನು ಬೇರೆಡೆ ಸೆಳೆಯಲು ಪಂಜಾಬಿ ಹಾಡುಗಳ ಮೊರೆಹೋದ ಚೀನಾ

ಸೆಪ್ಟೆಂಬರ್ 16 ರಂದು ಸರ್ಕಾರ ಚೀನಾದ ರಾಯಭಾರಿಯೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಅವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿರುವುದನ್ನು ಪಿಟಿಐ ವರದಿ ಮಾಡಿದೆ. ಈ ವಿಷಯವನ್ನು ಚೀನಾದ ವಿದೇಶಾಂಗ ಸಚಿವಾಲಯದೊಂದಿಗೂ ಕೈಗೆತ್ತಿಕೊಳ್ಳಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

LAC ಉದ್ವಿಗ್ನತೆಯ ಮಧ್ಯೆ ಭಾರತ-ಚೀನಾ ವಿದೇಶಾಂಗ ಸಚಿವರ ಸಭೆ, ಈ 5 ವಿಷಯಗಳಿಗೆ ಸಮ್ಮತಿ

ಭಾರತೀಯ ಸರ್ಕಾರವು ಭಾರತೀಯ ನಾಗರಿಕರ ಗೌಪ್ಯತೆ ಮತ್ತು ವೈಯಕ್ತಿಕ ಡೇಟಾದ ರಕ್ಷಣೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ವಿದೇಶಿ ಮೂಲಗಳು ನಮ್ಮ ನಾಗರಿಕರ ವೈಯಕ್ತಿಕ ಡೇಟಾವನ್ನು ಅವರ ಒಪ್ಪಿಗೆಯಿಲ್ಲದೆ ಪ್ರವೇಶಿಸುತ್ತಿವೆ ಅಥವಾ ಪ್ರವೇಶಿಸಲು ಪ್ರಯತ್ನಿಸುತ್ತಿವೆ ಎಂದು ಸೂಚಿಸುವ ಯಾವುದೇ ವರದಿಯಲ್ಲಿ ಇದು ಬಹಳ ಕಳವಳಕಾರಿಯಾಗಿದೆ" ಎಂದು ವಿದೇಶಾಂಗ ಸಚಿವರು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದರು.

ಈ ವರದಿಗಳನ್ನು ಅಧ್ಯಯನ ಮಾಡಲು ಮತ್ತು ಅವುಗಳ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಸರ್ಕಾರವು ರಾಷ್ಟ್ರೀಯ ಸೈಬರ್ ಭದ್ರತಾ ಸಂಯೋಜಕರ ಅಡಿಯಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಜೈಶಂಕರ್ ಹೇಳಿದರು. ಸಮಿತಿಯು ಯಾವುದೇ ಕಾನೂನು ಉಲ್ಲಂಘನೆಯನ್ನು ನಿರ್ಣಯಿಸುತ್ತದೆ ಮತ್ತು 30 ದಿನಗಳಲ್ಲಿ ಅದರ ಶಿಫಾರಸುಗಳನ್ನು ಸಲ್ಲಿಸುತ್ತದೆ ಎಂದು ಅವರು ಹೇಳಿದರು.

Trending News