Viral Story : ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಫುಡ್​ ಇನ್ಸೆಪೆಕ್ಟರ್!

Viral Story 2023: ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ಸಮಾಜಕ್ಕೆ ಮಾದರಿಯಾಗುವ ಬದಲು ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿ ಮೂರ್ಖತನ ತೋರಿಸಿ ಕೆಲಸದಿಂದ ಅಮಾನತುಗೊಂಡಿದ್ದಾನೆ. 

Written by - Zee Kannada News Desk | Last Updated : May 27, 2023, 06:16 PM IST
  • ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಅಧಿಕಾರಿ
  • ಅಧಿಕಾರಿ ಸಮಾಜಕ್ಕೆ ಮಾದರಿಯಾಗುವ ಬದಲು ಮೂರ್ಖತನ ತೋರಿಸಿ ಕೆಲಸದಿಂದ ಅಮಾನತು
  • ಸುಮಾರು 1500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳಬಹುದಾಗಿದ್ದ ನೀರು
Viral Story : ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿದ ಫುಡ್​ ಇನ್ಸೆಪೆಕ್ಟರ್! title=

ಛತ್ತೀಸ್‌ಗಡ: ವಿದ್ಯಾವಂತರು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಸಮಾಜಕ್ಕೆ ಮಾದರಿಯಾಗಿರುತ್ತಾರೆ. ಆದರೆ ಇಲ್ಲೊಬ್ಬ ಅಧಿಕಾರಿ ಸಮಾಜಕ್ಕೆ ಮಾದರಿಯಾಗುವ ಬದಲು ಜಲಾಶಯದೊಳಗೆ ಮೊಬೈಲ್ ಫೋನ್ ಬಿತ್ತೆಂದು 21 ಲಕ್ಷ ಲೀಟರ್​ ನೀರು ಖಾಲಿ ಮಾಡಿಸಿ ಮೂರ್ಖತನ ತೋರಿಸಿ ಕೆಲಸದಿಂದ ಅಮಾನತುಗೊಂಡಿದ್ದಾನೆ. 

ರಾಜೇಶ್ ವಿಶ್ವಾಸ್ ಎಂಬ ಫುಡ್​ ಇನ್​ಸ್ಪೆಕ್ಟರ್ ಸೆಲ್ಫಿ ತೆಗೆದುಕೊಳ್ಳುವಾಗ ಮೊಬೈಲ್ ಕೈಜಾರಿ ಜಲಾಶಯಕ್ಕೆ ಬಿದ್ದಿದೆ. ಮೊಬೈಲ್ ಜಲಾಶಯಕ್ಕೆ ಬಿದ್ದ ಹಿನ್ನಲೆ, ಆತನ ದುಬಾರಿ ಮೊಬೈಲ್ ಹೊರ ತೆಗೆಯಲು ಆತ ಜಲಾಶಯದ 21 ಲಕ್ಷ ಲೀಟರ್​ ನೀರನ್ನು, ಮೋಟಾರ್​​ ಬಳಸಿ ಖಾಲಿ ಮಾಡಿಸಿರುವ ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: Congress Government: 34 ಸಚಿವರು ಮತ್ತು ಖಾತೆ..! ಸಿದ್ದು ಸಂಪೂರ್ಣ ಸಂಪುಟ ಮಾಹಿತಿ ಇಲ್ಲಿದೆ

ಸುಮಾರು 1500 ಎಕರೆ ಕೃಷಿ ಭೂಮಿಗೆ ಬಳಕೆ ಮಾಡಿಕೊಳ್ಳಬಹುದಾಗಿದ್ದ, ನೀರನ್ನು ಖಾಲಿ ಮಾಡಿಸಿದ ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ, ಫುಡ್​ ಇನ್​ಸ್ಪೆಕ್ಟರ್​ನನ್ನು ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ.

ಹೌದು,   

ರಾಜೇಶ್ ವಿಶ್ವಾಸ್ ಎಂಬ ಫುಡ್​ ಇನ್​ಸ್ಪೆಕ್ಟರ್, ರಜಾ ನಿಮಿತ್ತ ಕುಟುಂಬ ಸಮೇತ ಛತ್ತೀಸ್‌ಗಢದ ಕಂಕೇರ್‌ ಪಂಖಜೂರಿನ ಪ್ಯಾರಕೋಟೆ ಜಲಾಶಯಕ್ಕೆ ತೆರಳಿದ್ದರು. ಜಲಾಶಯದ ಬಳಿ ಸೆಲ್ಫಿ ತೆಗೆದುಕೊಳ್ಳುವಾಗ ಫುಡ್​ ಇನ್​​ಸ್ಪೆಕ್ಟರ್​ ತನ್ನ 1.25 ಲಕ್ಷ ಮೌಲ್ಯದ ಮೊಬೈಲ್ ಜಲಾಶಯದೊಳಗೆ ಬಿದ್ದಿದೆ.

ದುಬಾರಿ ಮೊತ್ತದ ಪೋನ್‌ ನೀರಿಗೆ ಬಿದ್ದಿದ್ದರಿಂದ ಆತಂಕ್ಕೀಡಾಗಿ, ಅದನ್ನು ಇಡೀ ಜಲಾಶಯದ ನೀರನ್ನು ಖಾಲಿ ಮಾಡಿಸಿದ್ದಾರೆ. ವರದಿಗಳ ಪ್ರಕಾರ ಜಲಾಶಯದಲ್ಲಿ ಸಂಗ್ರಹವಾಗಿದ್ದ 21 ಲಕ್ಷ ಲೀಟರ್​ ನೀರನ್ನು ಅಧಿಕಾರಿ ಖಾಲಿ ಮಾಡಿಸಿದ್ದಾನೆ. ನೀರೆಲ್ಲಾ ಖಾಲಿಯಾದ ನಂತರ ಆತನ ಮೊಬೈಲ್ ಫೋನ್ ಸಿಕ್ಕಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Karnataka Cabinet List: ʼಶೆಟ್ಟರ್ ಹಾಗೂ ಸವದಿಗೆ ಅವಕಾಶ ಮಾಡಿಕೊಡೋದು ಪಕ್ಷಕ್ಕೆ ಒಳ್ಳೆದುʼ

ಇಂದು ಬಿಸಿಲಿನ ಬೇಗೆಯಲ್ಲಿ ಜನರು ಜೀವಜಲಕ್ಕಾಗಿ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ, ಕುಡಿಯುವ ನೀರಿಗೂ ವ್ಯವಸ್ಥೆ ಇಲ್ಲ. ಆದರೆ ಅಧಿಕಾರಿ ತನ್ನ ಮೊಬೈಲ್‌ಗಾಗಿ ಸುಮಾರು 21 ಲಕ್ಷ ಲೀಟರ್ ನೀರನ್ನು ವ್ಯರ್ಥ ಮಾಡಿದ್ದಾನೆ.

ಈ ನೀರಿನಿಂದ ಒಂದೂವರೆ ಸಾವಿರ ಎಕರೆ ಜಮೀನು ನೀರಾವರಿಗೆ ಮಾಡಬಹುದಿತ್ತು ಎಂದು ವಿಚಾರವಾದಿಗಳು ಆಕ್ರೋಶ ಹೊರ ಹಾಕಿದ್ದಾರೆ. ಎಲ್ಲೆಡೆ ನೀರು ಉಳಿಸುವ ಅಭಿಯಾನ ನಡೆಸುತ್ತಿದ್ದರೆ, ಛತ್ತೀಸ್‌ಗಢದ ಫುಡ್​ ಇನ್​ಸ್ಪೆಕ್ಟರ್​ ಮೂರ್ಖತನದ ಕಾರ್ಯ ಎಲ್ಲರ ಅಚ್ಚರಿ ಮೂಡಿಸಿದರೇ, ಪರಿಸರವಾದಿಗಳ ಕೋಪಕ್ಕೂ ಕಾರಣವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

 

Trending News