ಪ್ರತಿ ರವಿವಾರ Public Holiday ಆಗಿದ್ದು ಏಕೆ? ಇದಕ್ಕೆ ಕಾರಣವಾದ ಆ ವ್ಯಕ್ತಿ ಇವರೇ...

ವಾರಪೂರ್ತಿ ಬಿಡುವಿಲ್ಲದೆ ಕೆಲಸ ಮಾಡಿದ ಬಳಿಕ, ಭಾನುವಾರ ಬಂತೆಂದೆರೆ ಸಾಕು ರಜೆ ಎಂಬ ಖುಷಿ ಎಲ್ಲೂ ಸಿಗದು. ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಪ್ರತಿ ರವಿವಾರ ರಜೆ ಇರುತ್ತವೆ. ಆದರೆ ಭಾನುವಾರವನ್ನೇ ಏಕೆ ಸಾರ್ವಜನಿಕ ರಜಾದಿನವಾಗಿ ಮಾಡಲಾಗಿದೆ.

Written by - Chetana Devarmani | Last Updated : Jun 29, 2022, 02:50 PM IST
  • ವಾರಪೂರ್ತಿ ಬಿಡುವಿಲ್ಲದೆ ಕೆಲಸ ಮಾಡಿದ ಬಳಿಕ, ಭಾನುವಾರ ಬಂತೆಂದೆರೆ ಸಾಕು ರಜೆ ಎಂಬ ಖುಷಿ ಎಲ್ಲೂ ಸಿಗದು
  • ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಪ್ರತಿ ರವಿವಾರ ರಜೆ ಇರುತ್ತವೆ
  • ಆದರೆ ಭಾನುವಾರವನ್ನೇ ಏಕೆ ಸಾರ್ವಜನಿಕ ರಜಾದಿನವಾಗಿ ಮಾಡಲಾಗಿದೆ
ಪ್ರತಿ ರವಿವಾರ Public Holiday ಆಗಿದ್ದು ಏಕೆ? ಇದಕ್ಕೆ ಕಾರಣವಾದ ಆ ವ್ಯಕ್ತಿ ಇವರೇ...  title=
ರವಿವಾರ ರಜೆ

ವಾರಪೂರ್ತಿ ಬಿಡುವಿಲ್ಲದೆ ಕೆಲಸ ಮಾಡಿದ ಬಳಿಕ, ಭಾನುವಾರ ಬಂತೆಂದೆರೆ ಸಾಕು ರಜೆ ಎಂಬ ಖುಷಿ ಎಲ್ಲೂ ಸಿಗದು. ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಪ್ರತಿ ರವಿವಾರ ರಜೆ ಇರುತ್ತವೆ. ಆದರೆ ಭಾನುವಾರವನ್ನೇ ಏಕೆ ಸಾರ್ವಜನಿಕ ರಜಾದಿನವಾಗಿ ಮಾಡಲಾಗಿದೆ. ಇದನ್ನು ಏಕೆ ಜಾರಿಗೆ ತರಲಾಯಿತು ಎಂಬ ಕುತೂಹಲ ಎಲ್ಲರಿಗೂ ಇದೆ. ಭಾನುವಾರ ವಿಶ್ವದಾದ್ಯಂತ ಸಾರ್ವಜನಿಕ ರಜಾ ದಿನವಾಗಿದೆ. ಆದರೆ ಈ ರಜಾ ದಿನ ಹೇಗೆ ಬಂತು ಇದು ಕೆಲವೇ ಕೆಲವು ಜನರಿಗೆ ತಿಳಿದ ವಿಚಾರ. 

ಇದನ್ನೂ ಓದಿ: ರೇಶನ್ ಸಿಗದೇ ಹೋದರೆ ಈ ರೀತಿ ದೂರು ನೀಡಿ. ! ನೇರವಾಗಿ ಮನೆ ತಲುಪುತ್ತದೆ ಪಡಿತರ

ಭಾರತೀಯ ವೈದಿಕ ವಿಜ್ಞಾನದ ಪ್ರಕಾರ, ಪ್ರತಿದಿನವೂ ಒಂದೊಂದು ಗ್ರಹಗಳಿಗೆ ಮೀಸಲಾಗಿರುತ್ತದೆ. ಅಂದರೆ ಸಂಪೂರ್ಣವಾಗಿ ಒಂಬತ್ತು ಗ್ರಹಗಳು, ಅದರಲ್ಲಿ ಭಾನುವಾರ ಸೂರ್ಯನಿಗಾಗಿ ಮೀಸಲಾಗಿರುತ್ತದೆ. ಆದರೆ ಪ್ರಾಚೀನ ಭಾರತದಲ್ಲಿ ಸಾಪ್ತಾಹಿಕ ರಜಾದಿನಗಳು ಇರಲಿಲ್ಲ. ಅಂದು ಹೋರಾಡಿ ಭಾರತೀಯರಿಗೆ ನ್ಯಾಯ ಒದಗಿಸಿಕೊಟ್ಟ ನಾರಾಯಣ್​ ಮೇಘಾಜಿ ಲೋಖಂಡೆ ಅವರಿಂದ ಇಂದು ಎಲ್ಲರೂ ಪ್ರತಿ ರವಿವಾರ ರಜೆಯನ್ನು ಪಡೆಯುತ್ತಿರುವುದು.

ಬ್ರಿಟೀಷರ​ ಕಾಲದಲ್ಲಿ ಭಾರತೀಯರನ್ನು ಮನಸಾ ಇಚ್ಛೆ ದುಡಿಸಿಕೊಳ್ಳುತ್ತಿದ್ದರು. ದಿನ ಪೂರ್ತಿ ಪರಿಶ್ರಮದ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಆದರೆ ಈ ಸಮಯದಲ್ಲಿ ಭಾರತೀಯರಿಗೆ ವಾರದ ರಜೆ ಎಂಬುದು ಇರಲಿಲ್ಲ. ವಾರದ 7 ದಿನವು ಕೆಲಸ ಬಿಟ್ಟರೆ ಬೇರೆನೂ ಇಲ್ಲ ಎಂಬಂತಾಗಿತ್ತು. 

ಆಗ ಕಾರ್ಮಿಕರ ನಾಯಕರಾಗಿದ್ದ ನಾರಾಯಣ್​ ಮೇಘಾಜಿ ಲೋಖಂಡೆ ಅವರು ಭಾರತೀಯರ  ಕಾರ್ಮಿಕರ ಸ್ಥಿತಿ ನೋಡಿ ಬ್ರಿಟಿಷ್​ ಸರ್ಕಾರಕ್ಕೆ ಮಾಹಿತಿ ನೀಡಿದರು. ವಾರದಲ್ಲಿ ಒಂದು ದಿನ ಕಾರ್ಮಿಕರಿಗೆ ರಜೆ ನೀಡಬೇಕೆಂದು ತಿಳಿಸಿದರು. ಆದರೆ ಭಾರತೀಯ ಕಾರ್ಮಿಕರ ಕಷ್ಟವನ್ನು ಅರಿತುಕೊಳ್ಳದ ಬ್ರಿಟಿಷ್ ಸರ್ಕಾರ ರಜೆ ನೀಡಲು ಒಪ್ಪಲಿಲ್ಲ. ಇದರಿಂದ ಅಸಮಾಧಾನಗೊಂಡ ನಾರಾಯಣ್​ ಮೇಘಾಜಿ ಲೋಖಂಡೆ  ಅವರು ಎಲ್ಲಾ ಕಾರ್ಮಿಕರನ್ನು ಕರೆದುಕೊಂಡು ಒಗ್ಗಟ್ಟಿನಿಂದ ಅವರ ನೀತಿಯನ್ನು ವಿರೋಧಿಸಿದರು.    ಕಾರ್ಮಿಕರ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಿದರು.

ಇದನ್ನೂ ಓದಿ: Viral Video: ‘ರಸಗುಲ್ಲಾ’ ತಿನ್ನದ ವಧುವಿಗೆ ಕಪಾಳಕ್ಕೆ ಭಾರಿಸಿದ ವರ, ವೇದಿಕೆಯಲ್ಲೇ ಬಿಗ್ ಫೈಟ್..!

ಬಾಂಬೆ ಹ್ಯಾಂಡ್ಸ್​ ಅಸೋಸಿಯೇಶನ್​ ಮೂಲಕ 1881ರಲ್ಲಿ ಮೊದಲ ಬಾರಿಗೆ ಕಾರ್ಖಾನೆ ಸಂಬಂಧಿಸಿದ ಕಾಯಿದೆಯಲ್ಲಿ ಬದಲಾವಣೆ ತರಲು ಮುಂದಾದರು. ಅದಕ್ಕಾಗಿ ದೊಡ್ಡ ಹೋರಾಟವನ್ನೇ ಮಾಡಬೇಕಾಯಿತು. ಅಂದಿನ ದಿನಮಾನದಲ್ಲಿ ಕಾರ್ಮಿಕರಿಗೆ ಈ ಚಳವಳಿ ಅನಿವಾರ್ಯವಾಗಿತ್ತು. ಈ ಚಳವಳಿಯ ಪ್ರತಿಫಲವಾಗಿ ಜೂನ್ 10, 1890 ರಂದು ಬ್ರಿಟಿಷ್ ಸರ್ಕಾರ ವಾರದಲ್ಲಿ ಒಮ್ಮೆ ಎಲ್ಲರಿಗೂ  ರಜೆ ಕೊಡಲು ಒಪ್ಪಿಗೆ ನೀಡಿತು. ಇದರೊಂದಿಗೆ, ಪ್ರತಿದಿನ ಮಧ್ಯಾಹ್ನ ಅರ್ಧ ಗಂಟೆಯ ವಿಶ್ರಾಂತಿಯನ್ನು ಸಹ ನೀಡಲಾಗುತ್ತಿತ್ತು, ಇದನ್ನು ನಾವು ಈ ಕಾಲದಲ್ಲಿ ಊಟದ ವಿರಾಮ ಎಂದು ಕರೆಯುತ್ತೇವೆ. 

ಅಂದು ನಾರಾಯಣ್​ ಮೇಘಾಜಿ ಲೋಖಂಡೆ ಅವರು ಮಾಡಿದ ಹೋರಾಟದ ಫಲವಾಗಿ ಇಂದು ನಾವೆಲ್ಲ ಭಾನುವಾರವನ್ನು ರಜಾದಿನವನ್ನಾಗಿ ಎಂಜಾಯ್‌ ಮಾಡುತ್ತಿದ್ದೇವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News