ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ರೈಲ್ವೆ ಅಪಘಾತಕ್ಕೆ ಮೂವರು ಸಾವು

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಉನ್ನತ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿಯ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಲೊಕೊ ಪೈಲಟ್ ಮತ್ತು ಆತನ ಸಹಾಯಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Last Updated : Mar 1, 2020, 03:45 PM IST
ಮಧ್ಯಪ್ರದೇಶದ ಸಿಂಗ್ರೌಲಿಯಲ್ಲಿ ರೈಲ್ವೆ ಅಪಘಾತಕ್ಕೆ ಮೂವರು ಸಾವು  title=
Photo courtesy: ANI

ನವದೆಹಲಿ: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಉನ್ನತ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿಯ ಎರಡು ಸರಕು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಲೊಕೊ ಪೈಲಟ್ ಮತ್ತು ಆತನ ಸಹಾಯಕ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೋಪಾಲ್ ರಾಜ್ಯ ರಾಜಧಾನಿಯಿಂದ ಈಶಾನ್ಯಕ್ಕೆ 780 ಕಿಲೋಮೀಟರ್ ದೂರದಲ್ಲಿರುವ ಸಿಂಗ್ರೌಲಿ ಜಿಲ್ಲೆಯ ಆಡಳಿತ ಕೇಂದ್ರವಾದ ವೈಧಾನ್ ಬಳಿ ಈ ಅಪಘಾತ ಸಂಭವಿಸಿದೆ. ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ಲೊಕೊ ಪೈಲಟ್ ರಶೀದ್ ಅಹ್ಮದ್, ಯುಪಿ ಯ ರಾಬರ್ಟ್ಸ್ ಗಂಜ್ ನ ಸಹಾಯಕ ಲೊಕೊ ಪೈಲಟ್ ಮಂದೀಪ್ ಕುಮಾರ್ ಮತ್ತು ಸಿಂಗ್ರೌಲಿಯ ಪಾಯಿಂಟ್ ಮ್ಯಾನ್ ರಾಮ್ಲಕ್ಷನ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಲ್ಲಿದ್ದಲು ತುಂಬಿದ ಸರಕು ರೈಲುಗಳಲ್ಲಿ ಒಂದು ಉತ್ತರ ಪ್ರದೇಶದ ರಿಹಾಂಡ್ ನಗರದಲ್ಲಿರುವ ಎನ್‌ಟಿಪಿಸಿಗೆ ತೆರಳುತ್ತಿತ್ತು, ಇನ್ನೊಂದು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕಲ್ಲಿದ್ದಲು ಇಳಿಸಿದ ನಂತರ ಹಿಂತಿರುಗುತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಹಳಿಗಳನ್ನು ಬದಲಾಯಿಸುವಾಗ ಒಂದು ರೈಲು ಇನ್ನೊಂದಕ್ಕೆ ನುಗ್ಗಿ ಅಪಘಾತ ಸಂಭವಿಸಿದೆ ಎಂದು ವೈಧಾನ್ ಪೊಲೀಸ್ ಠಾಣೆಯ ಟೌನ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಪಾಂಡೆ ತಿಳಿಸಿದ್ದಾರೆ. ಒಂದು ರೀತಿಯಲ್ಲಿ, ಇದು ಎರಡು ರೈಲುಗಳ ನಡುವೆ ಮುಖಾಮುಖಿಯಾಗಿದೆ ಎಂದು  ಅವರು ಹೇಳಿದರು.

Trending News