Coronavirus ಸಂಕಷ್ಟದ ನಡುವೆ Google ನಲ್ಲಿ ಜನ ಹೆಚ್ಚಾಗಿ ಹುಡುಕಿದ್ದು ಏನು? ಇಲ್ಲಿದೆ ಉತ್ತರ

ಕೊರೊನಾ ವೈರಸ್ ಕಾಲದಲ್ಲಿ ಗೂಗಲ್ ನಲ್ಲಿ ಹುಡುಕಲ್ಪಟ್ಟ ಶಬ್ದಗಳು ಕೊರೊನಾ ಕುರಿತು ಜನರಲ್ಲಿ ವ್ಯಾಪಕ ಜಾಗೃತಿ ಮೂಡಿಸಿವೆ. ಅಷ್ಟೇ ಅಲ್ಲ ಕೆಲ ಶಬ್ದಗಳಂತೂ ನೀವು ಎಂದಿಗೂ ಕೆಳಿರಲಿಕ್ಕಿಲ್ಲ.

Last Updated : Apr 19, 2020, 08:46 PM IST
Coronavirus ಸಂಕಷ್ಟದ ನಡುವೆ Google ನಲ್ಲಿ ಜನ ಹೆಚ್ಚಾಗಿ ಹುಡುಕಿದ್ದು ಏನು? ಇಲ್ಲಿದೆ ಉತ್ತರ  title=

ನವದೆಹಲಿ: ಕೊರೊನ ಸಾಂಕ್ರಾಮಿಕ ಯಾವಾಗ ಮುಕ್ತಾಯಗೊಳ್ಳುತ್ತದೆ, ಇದಕ್ಕೆ ಔಷಧಿ ಕಂಡುಹಿಡಿಯಲಾಗಿದೆಯೇ ಅಥವಾ ಇದರ ವ್ಯಾಕ್ಸಿನ್ ಮಾರುಕಟ್ಟೆಗೆ ಬಂದಿದೆಯೇ. ಈ ಎಲ್ಲ ಪ್ರಶ್ನೆಗಳಿಗೆ ನೀವೂ ಕೂಡ ಉತ್ತರ ಬಯಸುತ್ತಿರಬಹುದು. ಯಾರ ಬಳಿ ಈ ಪ್ರಶ್ನೆಗಲಿವೆಯೋ ಅವರು ಉತ್ತರಕ್ಕಾಗಿ ಮೊದಲು ಗೂಗಲ್ ಅನ್ನು ಸಂಪರ್ಕಿಸುತ್ತಾರೆ. ಕೊರೊನಾದಂತಹ ಜಾಗತಿಕ ಮಹಾಮಾರಿಯ ಹಿನ್ನೆಲೆ ಜನರು ಇಂತಹ ಹಲವು ಪ್ರಶ್ನೆಗಳಿಗೆ ಹುಡುಕಾಟ ನಡೆಸುತ್ತಿದ್ದು, ಗೂಗಲ್ ಕೊರೊನಾ ವೈರಸ್ ಕುರಿತು ಹಲವಾರು ರೀತಿಯ ಮಾಹಿತಿಗಳನ್ನು ನೀಡುತ್ತಿದೆ.

ಇದನ್ನು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಕೊರೊನಾ ಸಾಂಕ್ರಾಮಿಕವನ್ನು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾದ ವೇಳೆ ಗೂಗಲ್ ನಲ್ಲಿ ಒಂದು ಕೀ ವರ್ಡ್ ಟ್ರೆಂಡ್ ಮಾಡುತ್ತಿತ್ತು. ವಾಸನೆ ಗ್ರಹಿಸುವ ಸಾಮರ್ಥ್ಯದಲ್ಲಿ ಕೊರತೆ ಉಂಟಾದರೆ ಇದು ಕೊರೊನಾ ಲಕ್ಷಣವೇ? ಎಂದು ಜನರು ಪ್ರಶ್ನಿಸಲಾರಂಭಿಸಿದ್ದರು. ಈ ವೇಳೆ Loss of Smell ಈ ಕೀವರ್ಡ್ ಗೂಗಲ್ ನಲ್ಲಿ ಟ್ರೆಂಡ್ ಸೃಷ್ಟಿಸಿತ್ತು. ವೈದ್ಯರ ಬಳಿಯೂ ಕೂಡ ಈ ಪ್ರಶ್ನೆಗೆ ಉತ್ತರವಿರಲಿಲ್ಲ. ಗೂಗಲ್ ನಲ್ಲಿ ಸತತವಾಗಿ ಈ ಪ್ರಶ್ನೆಗಳು ಕೇಳಿಬಂದಾಗ ವೈದ್ಯರೂ ಕೂಡ ಈ ಪ್ರಶ್ನೆಗೆ ಉತ್ತರ ಹುಡುಕಲು ಆರಂಭಿಸಿದರು ಹಾಗೂ ವಾಸನೆ ಗ್ರಹಿಸುವ ಕ್ಷಮತೆಯ ಕೊರತೆಯೂ ಕೂಡ ಕೊರೊನಾ ವೈರಸ್ ನ ಒಂದು ಲಕ್ಷಣ ಎಂದು ಹೇಳಿದರು. ಸುಮಾರು ಶೇ.30 ರಿಂದ ಶೇ.60 ರಷ್ಟು ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಈ ಲಕ್ಷಣ ಕಾಣಿಸಿಕೊಂಡಿದೆ.

ಕೊರೊನಾ ಕಾರಣದಿಂದ ವಿಶ್ವಾದ್ಯಂತ ಅತಿ ಹೆಚ್ಚು ಪ್ರಭಾವಿತಕ್ಕೆ ಒಳಗಾದ ದೇಶ ಅಮೇರಿಕಾದಲ್ಲಿಯೂ ಕೂಡ ಸುಮಾರು 10 ದಿನಗಳ ಹಿಂದೆ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಪ್ರಶ್ನೆ ಎಂದರೆ Í can not smell' ಅಂದರೆ, ನನಗೆ ವಾಸನೆ ಬರುತ್ತಿಲ್ಲ. ಇಟಲಿಯಲ್ಲಿಯೂ ಕೂಡ ' Non Sento Odori'ಅಂದರೆ ನನಗೆ ವಾಸನೆ ಬರುತ್ತಿಲ್ಲ  ಎಂದರ್ಥ. ಹಲವು ದಿನಗಳವರೆಗೆ ಇದು ಗೂಗಲ್ ನಲ್ಲಿ ಇದು ಟ್ರೆಂಡ್ ನಲ್ಲಿತ್ತು. ಆದರೆ, ಆ ಸಂದರ್ಭದಲ್ಲಿಯೂ ಕೂಡ ಕೊರೊನಾ ಕಾರಣ ವಾಸನೆ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ ಎಂಬುದು ಸಿದ್ಧವಾಗಿರಲಿಲ್ಲ ಮತ್ತು ಮುಂದಿನ ದಿನಗಳಲ್ಲಿ ಇದು ಕೊರೊನಾ ವೈರಸ್ ನ ಸಾಮಾನ್ಯ ಲಕ್ಷಣವಾಗಿ ಮಾರ್ಪಟ್ಟಿತು.

ಇದೆ ರೀತಿ ಕಣ್ಣು ನೋವು ಕೊರೊನಾ ಸಾಂಕ್ರಾಮಿಕದ ಒಂದು ಲಕ್ಷಣ ಅಲ್ಲ. ಆದರೂ ಕೂಡ ಗೂಗಲ್ ನಲ್ಲಿ ಜನರು ಈ ಕುರಿತು ಹುಡುಕಾಟ ನಡೆಸಿದ್ದರು ಮತ್ತು ಕಣ್ಣು ನೋವಿಗೆ ಕಾರಣಗಳನ್ನು ಹುಡುಕಿದ್ದರು. ಆದರೆ, ಕಣ್ಣು ನೋವು ಕೂಡ ಕೊರೊನಾ ವೈರಸ್ ನ ಒಂದು ಲಕ್ಷಣ ಇರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದಾಗ ಜನರು ಬೆಚ್ಚಿಬಿದ್ದಿದ್ದರು. 

ಭಾರತದ ಕುರಿತು ಹೇಳುವುದಾದರೆ, ಭಾರತದಲ್ಲಿಯೂ ಕೂಡ ಜನರು ಗೂಗಲ್ ನಲ್ಲಿ ಹಲವು ಪ್ರಶ್ನೆಗಳನ್ನೂ ಕೇಳಿದ್ದಾರೆ. ಉದಾಹರಣೆಗೆ ಭಾರತೆದಲ್ಲಿ ಕೊರೊನಾ ವೈರಸ್ ನ ಎಷ್ಟು ಪ್ರಕರಣಗಳಿವೆ? ಕೊರೊನಾ ವೈರಸ್ ಅಥವಾ ಕೊವಿಡ್ 19 ಅಂದರೇನು? ಭಾರತದಲ್ಲಿ ಕೊರೊನಾ ಸಾಂಕ್ರಾಮಿಕ ಯಾವಾಗ ಮುಗಿಯುತ್ತದೆ? ಭಾರತದಲ್ಲಿ ಲಾಕ್ ಡೌನ್ ಮುಂದುವರೆಯಲಿದೆಯೇ? ಚೀನಾ ಕೊರೊನಾ ವೈರಸ್ ಸಾಂಕ್ರಾಮಿಕದ ಮೇಲೆ ಹೇಗೆ ನಿಯಂತ್ರಣ ಸಾಧಿಸಿದೆ?  ಇತ್ಯಾದಿ. ಇದಲ್ಲದೆ ಫೇಸ್ ಮಾಸ್ಕ, ಸ್ಯಾನಿಟೈಸರ್, ಹ್ಯಾಂಡ್ ವಾಶ್ ಹಾಗೂ ಸಾಬೂನಿನಿಂದ ಕೈತೊಳೆಯುವ ಕುರಿತು ಕೂಡ ಗೂಗಲ್ ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ. ಆನ್ಲೈನ್ ಯೋಗಾ, ವ್ಯಾಕ್ಸಿನ್. ಮದ್ಯದ ಆನ್ಲೈನ್ ಹೋಮ್ ಡಿಲೆವರಿ ಕುರಿತು ಕೂಡ ಜನರು ಸರ್ಚ್ ಮಾಡಿದ್ದಾರೆ. ವಿಶೇಷ ಎಂದರೆ Pandemic, Quarantine, Self Isolation ಈ ಶಬ್ದಗಳೂ ಕೂಡ ಟ್ರೆಂಡ್ ಸೃಷ್ಟಿಸಿವೆ.

Trending News