ಏರ್ ಶೋ ರಿಹರ್ಸಲ್ ವೇಳೆ ಜೆಟ್ ವಿಮಾನಗಳ ಡಿಕ್ಕಿ; ಅಪಾಯದಿಂದ ಪಾರಾದ ಪೈಲೆಟ್​ಗಳು

ಮಂಗಳವಾರ ಸೂರ್ಯ ಕಿರಣ್ ಏರೋಬ್ಯಾಟಿಕ್ಸ್ ತಂಡದ ಎರಡು ವಿಮಾನಗಳು ಬೆಂಗಳೂರಿನ ಯಲಹಂಕಾ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿವೆ.

Last Updated : Feb 19, 2019, 12:37 PM IST
ಏರ್ ಶೋ ರಿಹರ್ಸಲ್ ವೇಳೆ ಜೆಟ್ ವಿಮಾನಗಳ ಡಿಕ್ಕಿ; ಅಪಾಯದಿಂದ ಪಾರಾದ ಪೈಲೆಟ್​ಗಳು  title=

ಬೆಂಗಳೂರು: ಸೂರ್ಯ ಕಿರಣ್ ಏರೋಬ್ಯಾಟಿಕ್ಸ್ ತಂಡದ ಎರಡು ವಿಮಾನಗಳು ಮಂಗಳವಾರ  ರಿಹರ್ಸಲ್ ವೇಳೆ ಅಪಘಾತಕ್ಕೀಡಾಗಿದ್ದು, ಪೈಲೆಟ್ ಗಳಿಬ್ಬರೂ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಶೋನ ರಿಹರ್ಸಲ್ ವೇಳೆ ಎರಡು ಸೂರ್ಯಕಿರಣ ಜೆಟ್ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಎರಡೂ ಲಘು ವಿಮಾನಗಳು ಹೊತ್ತಿ ಉರಿದಿವೆ.

ನಾಳೆಯಿಂದ ಪ್ರಾರಂಭವಾಗಲಿರುವ ಏರ್ ಶೋ:
'ಏರೋ ಇಂಡಿಯಾ 2019' ಫೆ.20 ರಿಂದ 24ರವರೆಗೆ ಭಾರತದ ಯುದ್ಧ ಹಾಗೂ ನಾಗರೀಕ ಸೇವಾ ವಿಮಾನಗಳನ್ನು ಸೇರಿದಂತೆ ವಿದೇಶಿ ವಿಮಾನಗಳು ಬಾನಂಗಳದಲ್ಲಿ ಶಕ್ತಿ ಪ್ರದರ್ಶನ ನಡೆಯಲಿವೆ.

ಬುಧವಾರದಿಂದ ಆರಂಭಗೊಳ್ಳಲಿರುವ ಏರ್‌ ಶೋನಲ್ಲಿ 40ಕ್ಕೂ ಹೆಚ್ಚು ದೇಶೀಯ ಮತ್ತು ವಿದೇಶಿ ಯುದ್ಧ ವಿಮಾನಗಳು ಹಾರಾಟ ನಡೆಸಲಿವೆ. ಇನ್ನುಳಿದ 17 ವಿಮಾನಗಳನ್ನು ಪ್ರದರ್ಶನಕ್ಕೆ ಬರುವ ಸಾರ್ವಜನಿಕರ ಪ್ರದರ್ಶನಕ್ಕಿಡಲಾಗಿದೆ. ಪ್ರದರ್ಶನದಲ್ಲಿ ನಿತ್ಯ ಬೆಳಗ್ಗೆ 10 ರಿಂದ 12 ಹಾಗೂ 2 ರಿಂದ 5 ಗಂಟೆ ವರೆಗೂ ವಿಮಾನ ಹಾರಾಟ ನಡೆಸಲಿವೆ.
 

Trending News