ನವದೆಹಲಿ: ಕೇರಳ ಹಾಗೂ ಮಹಾರಾಷ್ಟ್ರದಲ್ಲಿನ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ರೂಪಾಂತರಿ ವೈರಸ್ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈಗ ತೆಲಂಗಾಣದಲ್ಲಿಯೂ ಕೂಡ ಒಂದು ಪ್ರಕರಣ ಕಂಡು ಬಂದಿದೆ.
ದೆಹಲಿಯಲ್ಲಿ ನೀತಿ ಆಯೋಗದ ಸದಸ್ಯ ವಿ.ಕೆ.ಪಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಇಲ್ಲಿಯವರಿಗೆ 187 ಜನರಿಗೆ ರೂಪಾಂತರಿ ವೈರಸ್ ತಗುಲಿದೆ ಎಂದು ತಿಳಿಸಿದರು.ಇದರಲ್ಲಿ ದಕ್ಷಿಣ ಆಫ್ರಿಕಾ ವೈರಸ್ ಗೆ ಆರು ಜನರು ಒಳಗಾಗಿದ್ದಾರೆ.ಜೊತೆಗೆ ಬ್ರೆಜಿಲ್ ವೈರಸ್ (Coronavirus) ಪ್ರಕರಣ ಕೂಡ ಕಂಡು ಬಂದಿದೆ.
ಆದರೆ ಈಗ ಮಹಾರಾಷ್ಟ್ರ ಹಾಗೂ ಕೇರಳದಲ್ಲಿನ ಪ್ರಕರಣ ಹೆಚ್ಚಳವು ರೂಪಾಂತರಿ ವೈರಸ್ ನಿಂದ ಹರಡಿದ್ದಲ್ಲ ಎಂದು ನೀತಿ ಆಯೋಗದ ಸದಸ್ಯ ವಿಕೆ ಪಾಲ್ ಸ್ಪಷ್ಟಪಡಿಸಿದ್ದಾರೆ.ಈಗ ದೇಶಾದ್ಯಂತ ಇದುವರಿಗೆ ಒಟ್ಟು ೩೫೦೦ ಪ್ರಕರಣಗಳು ದಾಖಲಾಗಿವೆ.ಸದ್ಯ ದೇಶದ ಕೇರಳ ಹಾಗೂ ಹಾಗೂ ಮಹಾರಾಷ್ಟ್ರದಲ್ಲಿ ಶೇಕಡಾ ೭೫ ರಷ್ಟು ರೂಪಾಂತರಿ ವೈರಸ್ ನ ಪ್ರಕರಣಗಳು ಕಂಡು ಬಂದಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.