ನವದೆಹಲಿ: ತರಗತಿಯೊಳಗೆ ಧೂಮಪಾನ ಮಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ನಂತರ ಉತ್ತರ ಪ್ರದೇಶದ ಸೀತಾಪುರದ ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ಶನಿವಾರ ಅಮಾನತುಗೊಳಿಸಲಾಗಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಶಿಕ್ಷಕನು ಪ್ರಾಥಮಿಕ ತರಗತಿ ವಿದ್ಯಾರ್ಥಿಗಳ ಮುಂದೆ ಬೀಡಿಯನ್ನು ಹಚ್ಚಿ ಧೂಮಪಾನ ಮಾಡುತ್ತಿರುವುದು ಕಂಡುಬಂದಿದೆ.
ಈಗ ಈ ಶಿಕ್ಷಕನನ್ನು ಅಮಾನತು ಮಾಡಿದ ನಂತರ ಪ್ರತಿಕ್ರಿಯಿಸಿರುವ ಜಿಲ್ಲಾ ಬಿಇಓ ಅಧಿಕಾರಿ ಅಜಯ್ ಕುಮಾರ್ ' ತರಗತಿಯೊಳಗೆ ಶಿಕ್ಷಕ ಧೂಮಪಾನ ಮಾಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಶಿಕ್ಷಕನ ಗುರುತನ್ನು ಧೃಡಿಕರಿಸಲು ನಾನು ವಿಭಾಗ ಶಿಕ್ಷಣ ಅಧಿಕಾರಿಯನ್ನು ಶಾಲೆಗೆ ಕಳುಹಿಸಿದ್ದೆ. ವೀಡಿಯೊದಲ್ಲಿರುವ ವ್ಯಕ್ತಿಯೊಂದಿಗೆ ಅವನ ಮುಖವು ಹೊಂದಿಕೆಯಾದ ನಂತರ, ನಾನು ಅವನನ್ನು ಅಮಾನತುಗೊಳಿಸಿದೆ" ಎಂದು ಹೇಳಿದರು.
ಶಿಕ್ಷಕರು ತರಗತಿಗಳ ಒಳಗೆ ಧೂಮಪಾನ ಮಾಡಬಾರದು ಇದರಿಂದ ಅದು ವಿದ್ಯಾರ್ಥಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ ಎಂದು ಅಜಯ ಕುಮಾರ್ ತಿಳಿಸಿದ್ದಾರೆ