ನವದೆಹಲಿ: ಕರೋನಾ ಬಿಕ್ಕಟ್ಟು ಮತ್ತು ಲಾಕ್‌ಡೌನ್ ಕಾರಣದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ಸಹ ಸ್ಥಗಿತಗೊಂಡಿದ್ದವು. ಇದರಿಂದಾಗಿ ಅಭ್ಯರ್ಥಿಗಳು ಆತಂಕಕ್ಕೊಳಗಾಗಿದ್ದರು. ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿದ್ದ ಯುಪಿಎಸ್‌ಸಿ (UPSC)ಯ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸಲಾಗಿದ್ದು ನಾಗರಿಕ ಸೇವೆಗಳ 2020ರ ಪ್ರಾಥಮಿಕ ಪರೀಕ್ಷೆ ಅಕ್ಟೋಬರ್ 4 ರಂದು ನಡೆಯಲಿದೆ. ಇದನ್ನು ಕೇಂದ್ರ ಸಾರ್ವಜನಿಕ ಸೇವಾ ಆಯೋಗ ಶುಕ್ರವಾರ ಪ್ರಕಟಿಸಿದೆ.
ಕಳೆದ ವರ್ಷದ ನಾಗರಿಕ ಸೇವೆ ಮತ್ತು ಮುಖ್ಯ ಪರೀಕ್ಷೆಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳ ಸಂದರ್ಶನ ಜುಲೈ 20 ರಿಂದ ಪ್ರಾರಂಭವಾಗಲಿದೆ ಎಂದು ಯುಪಿಎಸ್‌ಸಿ ತಿಳಿಸಿದೆ. ಈ ವರ್ಷ ಪ್ರಾಥಮಿಕ ಪರೀಕ್ಷೆಯನ್ನು ಮೇ 31 ರಂದು ನಡೆಸಬೇಕಿತ್ತು. ಆದರೆ ಕರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿಗೊಳಿಸಿದ್ದರಿಂದ ಇದನ್ನು ಮುಂದೂಡಲಾಯಿತು.
Union Public Service Commission (UPSC) prelims to be held on October 4, 2020 and mains from January 8, 2021. pic.twitter.com/7zXarDMfo8
— ANI (@ANI) June 5, 2020
ಪರೀಕ್ಷೆಯನ್ನು ಮೂರು ಹಂತಗಳಲ್ಲಿ ನಡೆಸಲಾಗುತ್ತದೆ:
ನಾಗರಿಕ ಸೇವೆಗಳ ಪರೀಕ್ಷೆಯನ್ನು ಪ್ರತಿವರ್ಷ ಮೂರು ಹಂತಗಳಲ್ಲಿ ನಡೆಸಲಾಗುತ್ತದೆ - ಪ್ರಾಥಮಿಕ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ. ಯುಪಿಎಸ್‌ಸಿ ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಿ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಸೇರಿದಂತೆ ಇತರ ಸೇವೆಗಳ ಅಧಿಕಾರಿಗಳ ಆಯ್ಕೆಗಾಗಿ ಇದನ್ನು ಆಯೋಜಿಸಲಾಗಿದೆ.
ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ:
ಅದೇ ಸಮಯದಲ್ಲಿ ಯುಪಿಎಸ್‌ಸಿ ಇತರ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಈ ಪರೀಕ್ಷೆಗಳಲ್ಲಿ ಎನ್‌ಡಿಎ, ಐಇಎಸ್, ಸಿಎಮ್ಎಸ್, ಜಿಯೋ-ಸೈಂಟಿಸ್ಟ್, ಐಎಸ್ಎಸ್, ಎಂಜಿನಿಯರಿಂಗ್ ಸೇವೆಗಳು ಮತ್ತು ಸಿಎಪಿಎಫ್ ಪರೀಕ್ಷೆಗಳು ಸೇರಿವೆ. ಸಂಯೋಜಿತ ಜಿಯೋ ಸೈಂಟಿಸ್ಟ್ ಪರೀಕ್ಷೆಯನ್ನು ಆಗಸ್ಟ್ 8 ರಂದು ತೆಗೆದುಕೊಳ್ಳಬೇಕಾಗಿದೆ. ಆಗಸ್ಟ್ 9 ರಂದು ಎಂಜಿನಿಯರಿಂಗ್ ಸೇವೆಗಳು - ಮುಖ್ಯ ಪರೀಕ್ಷೆ ನಡೆಯಲಿದೆ. ಎನ್‌ಡಿಎ ಮತ್ತು ಎನ್‌ಎ ಪರೀಕ್ಷೆಗಳು ಸೆಪ್ಟೆಂಬರ್ 6 ರಂದು ನಡೆಯಲಿದ್ದು, ಅಕ್ಟೋಬರ್ 4 ರಂದು ನಾಗರಿಕ ಸೇವೆಗಳ ಐಎಎಸ್ ಮತ್ತು ಭಾರತೀಯ ಅರಣ್ಯ ಸೇವೆಯ ಪ್ರಾಥಮಿಕ ಪರೀಕ್ಷೆ ನಡೆಯಲಿದೆ.
ನವೆಂಬರ್ 8 ರಂದು ಸಿಡಿಎಸ್ ಪರೀಕ್ಷೆ:
ಅಕ್ಟೋಬರ್ 16 ರಂದು ಭಾರತೀಯ ಆರ್ಥಿಕ ಸೇವೆ ಐಇಎಸ್ ಮತ್ತು ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ ಐಎಸ್ಎಸ್ ಪರೀಕ್ಷೆಯನ್ನು ತೆಗೆದುಕೊಳ್ಳಲಾಗುವುದು. ಅಕ್ಟೋಬರ್ 22 ರಂದು ಜಂಟಿ ವೈದ್ಯಕೀಯ ಸೇವೆಗಳ ಪರೀಕ್ಷೆ ನಡೆಯಲಿದೆ. ಸಿಡಿಎಸ್ ಪರೀಕ್ಷೆ ನವೆಂಬರ್ 8 ರಂದು ನಡೆಯಲಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಹಾಯಕ ಕಮಾಂಡೆಂಟ್) ಪರೀಕ್ಷೆಯನ್ನು ಡಿಸೆಂಬರ್ 20 ರಂದು ನಡೆಸಲಾಗಿದೆ. ಅದೇ ಸಮಯದಲ್ಲಿ ನಾಗರಿಕ ಸೇವೆಯ ಮುಖ್ಯ ಪರೀಕ್ಷೆಯನ್ನು ಮುಂದಿನ ವರ್ಷ 20 ಜನವರಿ 2021 ರಂದು ತೆಗೆದುಕೊಳ್ಳಲಾಗುವುದು.