SBI ನಿಂದ ಹೊಸ ಆಫರ್; ಪಡೆಯಿರಿ 1,000 ರೂ. ಗಿಫ್ಟ್ ವೋಚರ್!

ನೀವು ಎಸ್‌ಬಿಐ YONO ಪ್ಲಾಟ್ಫಾರ್ಮ್ ಬಳಸುವುದಾದರೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ವಾರ್ಷಿಕ 1,000ರೂ. ವರೆಗಿನ ಇ-ಗಿಫ್ಟ್ ವೋಚರ್ ದೊರೆಯಲಿದೆ.

Last Updated : Sep 29, 2018, 06:58 PM IST
  • 1,000 ರೂ.ವರೆಗಿನ ಫಿಜ್ಜಾ ಹ್ಯಾಟ್ ಗಿಫ್ಟ್ ವೋಚರ್ ದೊರೆಯಲಿದೆ.
  • IRCTC ಯಲ್ಲಿ 250 ರಿವಾರ್ಡ್ ಪಾಯಿಂಟ್ ದೊರೆಯಲಿದೆ.
  • ಈ ಸೇವೆ ಅಕ್ಟೋಬರ್ 31ರವರೆಗೆ ಮಾತ್ರ ಲಭ್ಯವಿದೆ.
SBI ನಿಂದ ಹೊಸ ಆಫರ್; ಪಡೆಯಿರಿ 1,000 ರೂ. ಗಿಫ್ಟ್ ವೋಚರ್! title=

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಎಂದೇ ಗುರುತಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ನೀಡಿದೆ. 

ನೀವು ಎಸ್‌ಬಿಐ YONO ಪ್ಲಾಟ್ಫಾರ್ಮ್ ಬಳಸುವುದಾದರೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ವಾರ್ಷಿಕ 1,000ರೂ. ವರೆಗಿನ ಇ-ಗಿಫ್ಟ್ ವೋಚರ್ ದೊರೆಯಲಿದೆ. ಇದಕ್ಕಾಗಿ ನೀವು YONO ಆಪ್ ಅಥವಾ ಪೋರ್ಟಲ್'ನಲ್ಲಿ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್'ಗೆ ಲಾಗಿನ್ ಆಗುವ ಮೂಲಕ ಈ ಲಾಭ ಪಡೆಯಬಹುದು. 

ಏನಿದು ಆಫರ್?
ಒಂದು ವೇಳೆ ನೀವು YONO ಆಪ್ ಮೂಲಕ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಿದರೆ, 1,000 ರೂ.ವರೆಗಿನ ಫಿಜ್ಜಾ ಹ್ಯಾಟ್ ಗಿಫ್ಟ್ ವೋಚರ್ ದೊರೆಯಲಿದೆ. ಈ ಆಫರ್ ಎಸ್‌ಬಿಐ ಕಾರ್ಡ್ ಎಲೈಟ್ನಲ್ಲಿ ಲಭ್ಯವಿದೆ. ಅಂತೆಯೇ, ಎಸ್ಬಿಐ ಕಾರ್ಡ್ ಪ್ರೈಮ್ನಲ್ಲಿ ನೀವು 500 ರೂಪಾಯಿ ಪಿಜ್ಜಾ ಹಟ್ ಇ-ಗಿಫ್ಟ್ ವೋಚರ್, SimplyCLICK SBI Cardನಲ್ಲಿ 250ರೂ. ಮೌಲ್ಯದ ಬುಕ್ ಮೈ ಶೋ ವೋಚರ್ ಮತ್ತು   ಪೈಸಾ ಬುಕ್ ಮೌ ಪ್ರದರ್ಶನ ಚೀಟಿ ಮತ್ತು IRCTC SBI Platinum Card ಬಳಸಿ ಸರಳವಾಗಿ 250 ರೂ.ಗಳ ರಿವಾರ್ಡ್ ಪಾಯಿಂಟ್ ಪಡೆಯಬಹುದು. 

ಗಮನಿಸಬೇಕಾದ ಅಂಶವೇನು?
ರೆಸ್ಟೋರೆಂಟ್ ಗಳಲ್ಲಿ ಆಹಾರ ಆರ್ಡರ್ ಮಾಡುವಾಗ ಅಥವಾ ಆನ್ಲೈನ್ ಫುಡ್ ಆರ್ಡರ್ ಮಾಡುವ ಸಂದರ್ಭದಲ್ಲಿ SBI ELITE card ಬಳಸಿ ಹಣ ಪಾವತಿಸಿ. ಒಂದು ವೇಳೆ ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡುವುದಾದರೆ ಪಾವತಿ ಸಂದರ್ಭದಲ್ಲಿ ಕಾರ್ಡ್ ಬಳಸಿ. ಈ ಸೇವೆ ಅಕ್ಟೋಬರ್ 31ರವರೆಗೆ ಮಾತ್ರ ಲಭ್ಯವಿದೆ. 

Book My Show ವೋಚರ್ ಥಿಯೇಟರ್'ಗಳಲ್ಲಿ ಅನ್ವಯಿಸುವುದಿಲ್ಲ
SimplyCLICK SBI Card ನಿಂದ 250 ರೂ.ಗಳ ಬುಕ್ ಮೈ ಶೋ ವೋಚರ್ ಬಳಸಲು ನೀವು http://www.bookmyshow.com ವೆಬ್ಸೈಟ್ ಅಥವಾ ಬುಕ್ ಮೈ ಶೋ ಆಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಈ ಸೇವೆ ಥಿಯೇಟರ್ ಕೌಂಟರ್ ಗಳಲ್ಲಿ ಲಭ್ಯವಿಲ್ಲ. ಇದೇ ರೀತಿ, IRCTC SBI Platinum Card ಬಳಸಿ ಪಡೆದ 250 ರಿವಾರ್ಡ್ ಪಾಯಿಂಟ್ ಗಳನ್ನು ವಾರ್ಷಿಕ ಶುಲ್ಕ ಪಾವತಿಸಿದ 30 ದಿನಗಳ ನಂತರ ರಿಡೀಮ್ ಮಾಡಿಕೊಳ್ಳಬಹುದು. ಈ ಆಫರ್ ಇನ್ಯಾವುದೇ ಆಫರ್ ಜೊತೆ ಅನ್ವಯಿಸುವುದಿಲ್ಲ.

Trending News