"ನಿಮ್ಮ ಮಕ್ಕಳ ಮೇಲೆ ನೀವು ಇದೇ ರೀತಿ ಲಾಠಿ ಬೀಸ್ತೀರಾ?": ತಮ್ಮದೇ ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಗರಂ

Varun Gandhi slams UP police: ತಮ್ಮ ಟ್ವೀಟರ್ ನಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ನಿಮ್ಮ ಮಕ್ಕಳನ್ನು ನೀವು ಇದೇ ರೀತಿ ನಡೆಸಿಕೊಳ್ಳುತ್ತೀರಾ? ನೀವು ಯಾರ ಮೇಲೆ ಲಾಠಿ ಬೀಸಿದ್ದೀರೋ ಅವರು ಕೂಡ ಈ ದೇಶದ ಭಾರತ ಮಾತೆಯ ಮಕ್ಕಳು ಎಂಬುದನ್ನು ಮರೆಯಬೇಡಿ" ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

Edited by - Zee Kannada News Desk | Last Updated : Dec 5, 2021, 05:19 PM IST
  • ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್​ ಗಾಂಧಿ ಅಸಮಾಧಾನ
  • ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ್​ ಮಾಡಿದ್ದ ಉತ್ತರಪ್ರದೇಶ ಪೊಲೀಸರ ಕ್ರಮಕ್ಕೆ ಖಂಡನೆ
  • ತಮ್ಮ ಟ್ವೀಟರ್ ನಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಬಿಜೆಪಿ ಸಂಸದ ವರುಣ್​ ಗಾಂಧಿ
"ನಿಮ್ಮ ಮಕ್ಕಳ ಮೇಲೆ ನೀವು ಇದೇ ರೀತಿ ಲಾಠಿ ಬೀಸ್ತೀರಾ?": ತಮ್ಮದೇ ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಗರಂ title=
ಬಿಜೆಪಿ ಸಂಸದ ವರುಣ್​ ಗಾಂಧಿ

ಪಿಲಿಭಿತ್​(ಉತ್ತರಪ್ರದೇಶ): ಉತ್ತರಪ್ರದೇಶದ ಯೋಗಿ ಆದಿತ್ಯನಾಥ್​ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ವರುಣ್​ ಗಾಂಧಿ (Varun Gandhi) ಮತ್ತೊಮ್ಮೆ ಅಸಮಾಧಾನ ಹೊರಹಾಕಿದ್ದಾರೆ.

ಯುಪಿಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ನೇಮಕಾತಿಗಾಗಿ ಒತ್ತಾಯಿಸಿ ಮೇಣದಬತ್ತಿ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್​ (Varun Gandhi slams UP police)ಮಾಡಿದ ಘಟನೆಯನ್ನು ವರುಣ್ ತೀವ್ರವಾಗಿ ಖಂಡಿಸಿದ್ದಾರೆ. 

ಇದನ್ನೂ ಓದಿ: ಕಾಂಗ್ರೆಸ್ ಇಲ್ಲದೆ ಪ್ರತಿಪಕ್ಷದ ಮೈತ್ರಿಕೂಟದ ರಚನೆ ಸಾಧ್ಯವಿಲ್ಲ- ಭುಪೇಶ್ ಬಾಘೆಲ್

ತಮ್ಮ ಟ್ವೀಟರ್ ನಲ್ಲಿ ಘಟನೆಯ ವಿಡಿಯೋವನ್ನು ಹಂಚಿಕೊಂಡಿರುವ ಅವರು, "ನಿಮ್ಮ ಮಕ್ಕಳನ್ನು ನೀವು ಇದೇ ರೀತಿ ನಡೆಸಿಕೊಳ್ಳುತ್ತೀರಾ? ನೀವು ಯಾರ ಮೇಲೆ ಲಾಠಿ ಬೀಸಿದ್ದೀರೋ ಅವರು ಕೂಡ ಈ ದೇಶದ ಭಾರತ ಮಾತೆಯ ಮಕ್ಕಳು ಎಂಬುದನ್ನು ಮರೆಯಬೇಡಿ" ಎಂದು ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

 

 

ಉತ್ತರಪ್ರದೇಶದ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ 22 ಸಾವಿರ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳು ಲಖನೌದಲ್ಲಿರುವ ಬಿಜೆಪಿ ಕಚೇರಿಯನ್ನು ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ್​ ಮಾಡಿದ್ದರು.

Trending News