ಅಲಪ್ಪುಳ (ಕೇರಳ): ಹುಟ್ಟಿದ ಪ್ರತಿಯೊಂದು ಜೀವಿಯೂ ಸಾಯಲೇ ಬೇಕು. ಆದರೆ ಸಾವು ಎಂಬುದು ಯಾವಾಗ ಎಲ್ಲಿ ಹೇಗೆ ಬರುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ ಎಂಬಂತಿದೆ. ಈಗಿರುವ ಪ್ರಾಣ ಮರುಕ್ಷಣಕ್ಕೆ ಇರುವುದಿಲ್ಲ ಎಂಬ ಮಾತಿಗೆ ತಕ್ಕಂತಿದೆ ಈ ವಿಡಿಯೋ. ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಲೇ ಹಿರಿಯ ಗಾಯಕರೊಬ್ಬರು ನಿಧನರಾಗಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಇದನ್ನೂ ಓದಿ:Elon Musk : ಭಾರತದಲ್ಲಿ ಟೆಸ್ಲಾ ಉತ್ಪಾದನಾ ಘಟಕ : ಎಲೋನ್ ಮಸ್ಕ್ ಮಹತ್ವದ ಟ್ವೀಟ್
ಶನಿವಾರ ರಾತ್ರಿ ಕೇರಳದ ಅಲಪ್ಪುಳದಲ್ಲಿ ನಡೆದ 'ಬ್ಲೂ ಡೈಮಂಡ್ ಆರ್ಕೆಸ್ಟ್ರಾ'ದ ಸುವರ್ಣ ಮಹೋತ್ಸವದಲ್ಲಿ ವೇದಿಕೆಯ ಮೇಲೆ ಹಾಡು ಹಾಡುತ್ತಿದ್ದಾಗಲೇ ಹಿರಿಯ ಹಿನ್ನೆಲೆ ಗಾಯಕ ಎಡವ ಬಶೀರ್ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕುಸಿದುಬಿದ್ದಿದ್ದಾರೆ.
Warning: Disturbing Content
Singer dies during live performance.
Malayalam singer #EdavaBasheer died after collapsing on the stage while singing.
The 78-year-old was performing at the Golden jubilee of Blue Diamonds orchestra. pic.twitter.com/k6CCfhafjO— Bobins Abraham Vayalil (@BobinsAbraham) May 29, 2022
ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Monkeypox outbreak: ಮಕ್ಕಳಿಗೆ ಅಪಾಯ ಹೆಚ್ಚು, ಈ 5 ರೋಗಲಕ್ಷಣಗಳನ್ನು ನಿರ್ಲಕ್ಷಿಸದಿರಿ- ICMR
ಯೇಸುದಾಸ್ ಮತ್ತು ಮುಹಮ್ಮದ್ ರಫಿ ಅವರ ಹಾಡುಗಳನ್ನು ಹೇಳುತ್ತಲೇ ಗಾಯಕ ಎಡವ ಬಶೀರ್ ಜನರ ಮನ ಗೆದ್ದಿದ್ದರು. ಅವರು ವೇದಿಕೆಯ ಮೇಲೆ ಹಾಡು ಹೇಳುತ್ತಿರುವಾಗಲೇ ಕುಸಿದು ಬೀಳುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.