ಹೆಬ್ಬಾವಿನ ಮೊಟ್ಟೆಯನ್ನು ಮುಟ್ಟಲು ಹೋದ ವ್ಯಕ್ತಿಗೆ ಹಾವು ಮಾಡಿದ್ದೇನು ? ಈ ವಿಡಿಯೋ ನೋಡಿ

ಈ ವಿಡಿಯೋದಲ್ಲಿಯೂ ತಾಯಿ ಪ್ರೀತಿ ಎದ್ದು ಕಾಣುತ್ತದೆ. ಈ ವೀಡಿಯೊವನ್ನು ನೋಡಿದ ನಂತರ, ತಾಯಿ ತನ್ನ ಮಗುವನ್ನು ರಕ್ಷಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎನ್ನುವುದನ್ನು ತೋರಿಸುತ್ತದೆ.

Written by - Ranjitha R K | Last Updated : Nov 26, 2021, 05:21 PM IST
  • ತನ್ನ ಮೊಟ್ಟೆಗಳನ್ನು ರಕ್ಷಣೆಗೆ ನಿಂತ ಹೆಬ್ಬಾವು
  • ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು ವಿಡಿಯೋ
  • 7 ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ವೀಕ್ಷಣೆ
ಹೆಬ್ಬಾವಿನ ಮೊಟ್ಟೆಯನ್ನು ಮುಟ್ಟಲು ಹೋದ ವ್ಯಕ್ತಿಗೆ ಹಾವು ಮಾಡಿದ್ದೇನು ? ಈ ವಿಡಿಯೋ ನೋಡಿ

ನವದೆಹಲಿ : ಸೋಶಿಯಲ್ ಮೀಡಿಯಾದಲ್ಲಿ, ಅನೇಕ ರೀತಿಯ ವೀಡಿಯೊಗಳಿರುತ್ತವೆ (Viral vieo). ಈ ಪೈಕೆ ಅನೇಕ ವಿಡಿಯೋಗಳಲ್ಲಿ ತಾಯಿಯ ಪ್ರೀತಿಯನ್ನು ಕಾಣಬಹುದು. ಮನುಷ್ಯರೇ  ಅಗಲಿ ಪ್ರಾಣಿಗಳೇ ಆಗಲಿ ತಾಯಿ ಪ್ರೀತಿಯೇ (Mother love) ಹಾಗೆ. ತನ್ನ ಮಕ್ಕಳ ತಂಟೆಗೆ ಬಂದರೆ ಮಹಾಕಾಳಿ ರೂಪ ತಾಳಿಯೇ ಬಿಡುತ್ತಾಳೆ ತಾಯಿ. ತನ್ನ ಮಗುವಿನ  ರಕ್ಷಣೆಗೆಗಾಗಿ ಯಾರ ವಿರುದ್ದ ಬೇಕಾದರೂ ಸೆಟೆದು ನಿಲ್ಲುತ್ತಾಳೆ. 

ತನ್ನ ಮೊಟ್ಟೆಗಳ ರಕ್ಷಣೆಗೆ ನಿಂತ ಹೆಬ್ಬಾವು : 
ಈ ವಿಡಿಯೋದಲ್ಲಿಯೂ (Snake video) ತಾಯಿ ಪ್ರೀತಿ ಎದ್ದು ಕಾಣುತ್ತದೆ. ಈ ವೀಡಿಯೊವನ್ನು ನೋಡಿದ ನಂತರ, ತಾಯಿ ತನ್ನ ಮಗುವನ್ನು ರಕ್ಷಿಸಲು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎನ್ನುವುದನ್ನು ತೋರಿಸುತ್ತದೆ. ಈ ದೈತ್ಯ ಹೆಬ್ಬಾವು ತನ್ನ ಮೊಟ್ಟೆಗಳನ್ನು ರಕ್ಷಿಸುತ್ತಿರುವುದನ್ನು ವಿಡಿಯೋದಲ್ಲಿ (Viral video) ಕಾಣಬಹುದು. 

ಇದನ್ನೂ ಓದಿ : Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನನ್ನು ಎಳೆದಾಡಿ ಥಳಿಸಿದ ಮಹಿಳೆ, ವಿಡಿಯೋ ವೈರಲ್

jayprehistoricpets ಎಂಬ ಖಾತೆಯೊಂದಿಗೆ Instagram ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದರೊಂದಿಗೆ, 'ತಾಯಿ ತನ್ನ ಮೊಟ್ಟೆಗಳನ್ನು ರಕ್ಷಿಸಬಲ್ಲಳು' ಎಂಬ ಶೀರ್ಷಿಕೆಯನ್ನು ವೀಡಿಯೊದಲ್ಲಿ ಬರೆಯಲಾಗಿದೆ. ಹೆಬ್ಬಾವು ತನ್ನ ಮೊಟ್ಟೆಗಳನ್ನು ರಕ್ಷಿಸುತ್ತಿರುವ ಈ ವಿಡಿಯೋಗೆ  ಸಾಮಾಜಿಕ ಜಾಲತಾಣಗಳಲ್ಲಿ (Social media) ಸಾಕಷ್ಟು ಲೈಕ್ ಸಿಗುತ್ತಿದೆ. ಈ ವಿಡಿಯೋವನ್ನು  ಇದುವರೆಗೆ 7 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Jay Brewer (@jayprehistoricpets)

 

ಹೆಬ್ಬಾವಿನ ಪ್ರೀತಿಗೆ ಜನರ ವಂದನೆ : 
ವಿಡಿಯೋ ನೋಡಿದ ಜನ ಹೆಬ್ಬಾವಿನ ಪ್ರೀತಿಗೆ ಸೆಲ್ಯೂಟ್ ಮಾಡುತ್ತಿದ್ದಾರೆ.  ವಿಡಿಯೋದಲ್ಲಿ ಹೆಣ್ಣು ಹೆಬ್ಬಾವು ಸಣ್ಣ ಬಾಕ್ಸ್ ನಲ್ಲಿ ಕುಳಿತಿರುವುದನ್ನು ನೋಡಬಹುದು. ಅದರ ಮೊಟ್ಟೆಗಳನ್ನು ಸಹ ಇದರಲ್ಲಿ ಇಡಲಾಗಿದೆ. ಹೆಬ್ಬಾವು ತನ್ನ ಮಕ್ಕಳನ್ನು ರಕ್ಷಿಸುತ್ತಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ವ್ಯಕ್ತಿಯು ಕೋಲಿನಿಂದ ಮೊಟ್ಟೆಗಳನ್ನು ಸ್ಪರ್ಶಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಆದರೆ, ವ್ಯಕ್ತಿ ಕೈ ಚಾಚಿದ ತಕ್ಷಣ ಹೆಬ್ಬಾವು ಆಕ್ರಮಣಕಾರಿಯಾಗಿ ಬಿಡುತ್ತದೆ. 

ಇದನ್ನೂ ಓದಿ : Viral Video: ಹಾಡಹಗಲೇ ಬೈಕ್ ಗೆ ಅಡ್ಡಬಂದ ಚಿರತೆ, ಆಮೇಲೇನಾಯ್ತು ನೋಡಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News