ನವದೆಹಲಿ: ಮದುವೆ ಅನ್ನೋದು ಎಲ್ಲಾ ಕಷ್ಟಗಳನ್ನು ಮರೆತು, ಎಲ್ಲರೊಂದಿಗೂ ಸಂತೋಷದಿಂದ ಬೆರೆಯಲು ದೊರಕುವ ಸುಸಂದರ್ಭ. ಎಷ್ಟೋ ವರ್ಷಗಳಿಂದ ದೊರೆಯದ ಸ್ನೇಹಿತರು, ಬಂಧುಗಳು, ಸೋದರ ಸಂಬಂಧಿಗಳನ್ನು ಭೇಟಿ ಮಾಡಲು ಸಾಧ್ಯವಾಗಿಸುವ ಒಂದು ಕಾರ್ಯಕ್ರಮ.
ಮದುವೆಯಲ್ಲಿ ವಧು-ವರರನ್ನು ಸ್ನೇಹಿತರು ಛೇಡಿಸುವುದು, ಹಾಸ್ಯ ಮಾಡುವುದು, ತಮಾಶೆಗೆ ಎತ್ತಿಕೊಂಡು ಹಾರ ಹಾಕಿಸುವುದು, ಇದೆಲ್ಲಾ ಸಾಮಾನ್ಯ. ಆದರೆ ಈ ಮದುವೆ ಮಂಟಪದಲ್ಲಿ ಹಾಗಾಗಿಲ್ಲ... ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ ಎನ್ನುತ್ತಿರುವಾಗಲೇ ವಧು ಮಂಟಪದಲ್ಲಿಯೇ ಓರ್ವ ವ್ಯಕ್ತಿ ಕೆನ್ನೆಗೆ ಬಾರಿಸಿದ್ದಾಳೆ. ಆದರೆ, ಆಕೆ ಏಕೆ ಹಾಗೆ ಮಾಡಿದಳು, ಯಾರಿಗೆ ಹೊಡೆದಳು ಎಂದು ತಿಳಿಯುವ ಕುತೂಹಲವಿದೆಯೇ? ಹಾಗಿದ್ದರೆ ಈ ವೀಡಿಯೋ ನೋಡಿ...
ಹೌದು! ಅಲ್ಲಿ ನಡೆದದ್ದು ಇಷ್ಟೇ... ಅದಕ್ಕೆ ಆ ವಧು ಆತನಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಇದೀಗ ಈ ವೀಡಿಯೋ ಯುಟ್ಯೂಬ್'ನಲ್ಲಿ ಅಪ್ಲೋಡ್ ಆಗಿದ್ದು, ಇದನ್ನು ನೋಡಿದ ವೀಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ. ಆದರೆ ಈ ಘಟನೆ ಯಾವ ರಾಜ್ಯದಲ್ಲಿ ನಡೆದಿದೆ ಎಂಬುದು ತಿಳಿದುಬಂದಿಲ್ಲ.
ಕೆಲವು ದಿನಗಳ ಹಿಂದೆ, ವರನು ವಿವಾಹದ ನಂತರ ತನ್ನ ಪತ್ನಿಯನ್ನು ಜೆಸಿಬಿಯಲ್ಲಿ ಕರೆದೊಯ್ದಿದ್ದ ವೀಡಿಯೋ ವೈರಲ್ ಆಗಿದ್ದನ್ನು ನಾವು ಸ್ಮರಿಸಬಹುದು.