ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ ಈಗ ಮುಂಬೈ ನ ಬೀದಿ ಮಾರಾಟಗಾರ ಇಡ್ಲಿಯನ್ನು ತಯಾರಿಸಲು ಶೌಚಾಲಯದ ನೀರನ್ನು ಬಳಸುತ್ತಿದ್ದಾನೆ. ಬೋರಿವಲಿ ರೈಲ್ವೆ ನಿಲ್ದಾಣದಲ್ಲಿನ ಶೌಚಾಲಯದ ನೀರನ್ನು ಆಹಾರ ತಯಾರಿಸಲು ಬಳಸಿದ್ದಾನೆ ಎನ್ನಲಾಗಿದೆ.
#हे राम! नींबू शरबत के बाद अब इडली भी गंदे पानी से !! इस वायरल वीडियो में इडली विक्रेता इडली के लिए # Borivali स्टेशन के शौचालय से गंदा पानी लेते हुए दिख रहा है #BMC #FDA ?@ndtvindia @MumbaiPolice @WesternRly pic.twitter.com/TFmRkgoMMN
— sunilkumar singh (@sunilcredible) May 31, 2019
ವೈರಲ್ ಆಗಿರುವ 45 ಸೆಕೆಂಡ್ ಗಳ ವಿಡಿಯೋ ದಲ್ಲಿ ಶೌಚಾಲಯದಿಂದ ನೀರನ್ನು ತರುತ್ತಿರುವ ದೃಶ್ಯವು ಸೆರೆಯಾಗಿದೆ.ಈಗ ಈ ಸಂಗತಿ ಆಹಾರ ಮತ್ತು ಡ್ರಗ್ ಆಡಳಿತ ವಿಭಾಗದ ಗಮನಕ್ಕೆ ಬಂದಿದ್ದು, ಅವರು ಈ ವಿಚಾರವಾಗಿ ತನಿಖೆಯನ್ನು ಆರಂಭಿಸಿದ್ದಾರೆ.ಈಗ ಸಾರ್ವಜನಿಕರಿಗೂ ಕೂಡ ಅಂತಹ ಕಲುಷಿತ ನೀರನ್ನು ಬಳಸಕೂಡದು ಎಂದು ಸೂಚನೆ ನೀಡಿದೆ.
ಈಗ ಘಟನೆಯ ವಿಚಾರವಾಗಿ ಪ್ರತಿಕ್ರಿಯಿಸಿರುವ ಮುಂಬೈ ಎಫ್ಡಿಎ ಶಾಖೆ ಅಧಿಕಾರಿ ಶೈಲೇಶ್ ಯಾದವ್ " ಈ ವಿಡಿಯೋ ನಮ್ಮ ಗಮನಕ್ಕೆ ಬಂದಿದ್ದು, ನಾವು ಅವನ ವಿರುದ್ಧ ಹಾಗೂ ಈ ರೀತಿ ಬಳಸುವ ಇತರರ ವಿರುದ್ಧ ತನಿಖೆ ನಡೆಸುತ್ತೇವೆ, ಇಂತಹ ನೀರು ಬಳಕೆಗೆ ಆರೋಗ್ಯಕರವಲ್ಲ " ಎಂದು ಹೇಳಿದ್ದಾರೆ.
"ವ್ಯಕ್ತಿಯು ಸಿಕ್ಕಿಬಿದ್ದಾಗ, ಅವರ ಪರವಾನಗಿ ಪತ್ರವನ್ನು ಪರಿಶೀಲಿಸಲಾಗುವುದು ಮತ್ತು ಯಾವುದೇ ಸ್ಯಾಂಪಲ್ ಕಂಡುಬಂದರೆ, ಅದನ್ನು ವಶಪಡಿಸಿಕೊಳ್ಳಲಾಗುವುದು ಮತ್ತು ನಂತರ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಯಾಧವ್ ಹೇಳಿದರು.