ದೇಶದ ರಕ್ಷಣೆಗೆ ಹೋರಾಡಿ ತಮ್ಮನ್ನು ಸಮರ್ಪಿಸಿಕೊಂಡ ಹುತಾತ್ಮ ಯೋಧರಿಗೆ ನಮನ: ರಾಷ್ಟ್ರಪತಿ

ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು ನಮ್ಮ ಯೋಧರು 20 ವರ್ಷಗಳ ಹಿಂದೆ ಇದೇ ದಿನ(ಜುಲೈ 26) ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು 'ಕಾರ್ಗಿಲ್‌ ವಿಜಯ್‌ ದಿನ'ವಾಗಿ ಆಚರಿಸಲಾಗುತ್ತಿದೆ. 

Last Updated : Jul 26, 2019, 09:26 AM IST
ದೇಶದ ರಕ್ಷಣೆಗೆ ಹೋರಾಡಿ ತಮ್ಮನ್ನು ಸಮರ್ಪಿಸಿಕೊಂಡ ಹುತಾತ್ಮ ಯೋಧರಿಗೆ ನಮನ: ರಾಷ್ಟ್ರಪತಿ title=

ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ 20ನೇ ವಾರ್ಷಿಕೋತ್ಸವದಂದು ಕಾರ್ಗಿಲ್‌ ವಿಜಯ್‌ ದಿನ(ಜುಲೈ 26) ಅಂಗವಾಗಿ ಅಂದು ಶೌರ್ಯ ಮೆರೆದ ಭಾರತೀಯ ಯೋಧರ ಕೊಡುಗೆಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಶ್ಲಾಘಿಸಿದ್ದಾರೆ.

1999ರಲ್ಲಿ ಕಾರ್ಗಿಲ್‌ನಲ್ಲಿ ಭಾರತದ ಯೋಧರು ಮೆರೆದ ಶೌರ್ಯ ಶ್ಲಾಘನೀಯ, ಅವರ ತ್ಯಾಗಕ್ಕೆ ರಾಷ್ಟ್ರ ಕೃತಜ್ಞವಾಗಿದೆ. ಭಾರತದ ರಕ್ಷಣೆಗೆ ಹೋರಾಡಿ ತಮ್ಮನ್ನು ಸಮರ್ಪಿಸಿಕೊಂಡು ಹುತಾತ್ಮರಾದ ಯೋಧರ ಶೌರ್ಯಕ್ಕೆ ನಾವು ನಮಸ್ಕರಿಸುತ್ತೇವೆ. ಜೈ ಹಿಂದ್ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.

ಇಂದು ಜಮ್ಮು ಮತ್ತು ಕಾಶ್ಮೀರದ ಡ್ರಾಸ್‌ನಲ್ಲಿರುವ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು  1999 ರ ಸಂಘರ್ಷದಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸೈನಿಕರಿಗೆ ಗೌರವ ಸಲ್ಲಿಸುತ್ತಾರೆ.

ಯುದ್ಧ ಸ್ಮಾರಕದಲ್ಲಿ ಸುಮಾರು 500 ಸಮಾಧಿ ಕಲ್ಲುಗಳಿದ್ದು, ಅವುಗಳಲ್ಲಿ ಸೈನಿಕರ ಹೆಸರನ್ನು ಕೆತ್ತಲಾಗಿದೆ. ಜುಲೈ 26, 1999 ರಂದು ಭಾರತೀಯ ಸಶಸ್ತ್ರ ಪಡೆ ಪಾಕಿಸ್ತಾನವನ್ನು ಸೋಲಿಸಿತ್ತು. ಅಂದಿನಿಂದ, ಈ ದಿನವನ್ನು ಕಾರ್ಗಿಲ್ ವಿಜಯ್ ದಿವಾಸ್ ಎಂದು ಆಚರಿಸಲಾಗುತ್ತದೆ.

ಆಪರೇಷನ್ ವಿಜಯ್ನಲ್ಲಿ ಭಾಗವಹಿಸಿದ ಸೈನಿಕರ ಹೆಮ್ಮೆ ಮತ್ತು ಶೌರ್ಯವನ್ನು ಪುನರುಜ್ಜೀವನಗೊಳಿಸಲು ಭಾರತೀಯ ಸೇನೆಯು ಇಂದು ಕಾರ್ಗಿಲ್ ಯುದ್ಧದ 20 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ.

Trending News