WHO : ರಂಜಾನ್ ಉಪವಾಸದಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮಾರ್ಗಸೂಚಿ ಬಿಡುಗಡೆ

WHO :  ರಂಜಾನ್ ತಿಂಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡಿದ್ದು,  ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. 

Written by - Zee Kannada News Desk | Last Updated : Mar 8, 2024, 10:41 PM IST
  • ರಂಜಾನ್ ತಿಂಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ
  • ಈ ಸಮಯದಲ್ಲಿ ಅರೋಗ್ಯ ಕಡೆ ಗಮನ ಹರಿಸುವುದು ತುಂಬಾ ಅವಶ್ಯಕವಾಗಿದೆ.
  • ಮಾರ್ಚ್ 11 (ಸೋಮವಾರ) ಅಥವಾ ಮಾರ್ಚ್ 12 (ಮಂಗಳವಾರ) ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.
WHO : ರಂಜಾನ್ ಉಪವಾಸದಲ್ಲಿ ಅರೋಗ್ಯ ಕಾಪಾಡಿಕೊಳ್ಳಲು ಮಾರ್ಗಸೂಚಿ ಬಿಡುಗಡೆ title=

Maintaining Health During Ramadan Fasting : ವಿಶ್ವ ಆರೋಗ್ಯ ಸಂಸ್ಥೆಯು ರಂಜಾನ್ ತಿಂಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ರಂಜಾನ್ ಆಚರಣೆ 29ರಿಂದ 30 ದಿನಗಳವರೆಗೆ ಇರುತ್ತದೆ ಈ ಸಂಧರ್ಭದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ ಈ ಸಮಯದಲ್ಲಿ ಅರೋಗ್ಯ ಕಡೆ ಗಮನ ಹರಿಸುವುದು ತುಂಬಾ ಅವಶ್ಯಕವಾಗಿದೆ. 

ಈಗಾಗಲೇ ರಂಜಾನ್ ಆಚರಣೆಗೆ ದಿನಗಣನೆ ಆರಂಭವಾಗಿದೆ. ರಂಜಾನ್ ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳು ಪ್ರಪಂಚದಾದ್ಯಂತದ ಮುಸ್ಲಿಮರಿಗೆ ಅತ್ಯಂತ ಪವಿತ್ರವಾದ ತಿಂಗಳುಗಳಲ್ಲಿ ಒಂದಾಗಿದೆ. ಈ ತಿಂಗಳಲ್ಲಿ ಮುಸ್ಲಿಂ ಬಾಂಧವರು ಕಠಿಣ ಉಪವಾಸ ಮತ್ತು ಪ್ರಾರ್ಥನೆಗಳನ್ನು ಆಚರಿಸುತ್ತಾರೆ. ದಿನಾಂಕಗಳಲ್ಲಿ ಬದಲಾವಣೆಗಳು ಆಗುವ ಕಾರಣ, ಇವರ ಪವಿತ್ರ ಮಾಸವು ಮಾರ್ಚ್ 11 ಅಥವಾ 12 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಏಪ್ರಿಲ್ 9 ರಂದು ಕೊನೆಗೊಳ್ಳುವ ಸಾಧ್ಯತೆಯಿದೆ.

ರಂಜಾನ್ ಆಚರಣೆ : ಮುಸ್ಲಿಂ ಧರ್ಮೀಯರ ನಂಬಿಕೆಯ ಪ್ರಕಾರ, 1,400 ವರ್ಷಗಳ ಹಿಂದೆ ಪವಿತ್ರ ರಂಜಾನ್ ತಿಂಗಳಲ್ಲಿ, ಪ್ರವಾದಿ ಮುಹಮ್ಮದ್ ಅಲ್ಲಾನಿಂದ ಖುರಾನ್‌ನ ಮೊದಲ ಪದ್ಯಗಳನ್ನು ಪಡೆದರು ಎಂದು ಹೇಳಲಾಗುತ್ತದೆ. ರಂಜಾನ್ ಆಚರಣೆ 29ರಿಂದ 30 ದಿನಗಳವರೆಗೆ ಇರುತ್ತದೆ. ಈ ತಿಂಗಳಲ್ಲಿ, ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಈ ಪವಿತ್ರ ದಿನಗಳಲ್ಲಿ ಉಪವಾಸವನ್ನು ಆಚರಿಸಲಾಗುತ್ತದೆ.

ಉಪವಾಸದ ಅವಧಿಯ ಎರಡು ಮುಖ್ಯ ಭೋಜನಗಳೆಂದರೆ ಇಫ್ತಾರ್, ಇದನ್ನು ಸೂರ್ಯಾಸ್ತದ ನಂತರ ತಿನ್ನಲಾಗುತ್ತದೆ ಮತ್ತು ಸುಹೂರ್, ಇದು ಬೆಳಗಿನ ಮುಂಚೆಯ ಆಹಾರ ಸೇವನೆಯಾಗಿದೆ.

ದಾನ, ಧರ್ಮ ಹಬ್ಬದ ಮತ್ತೊಂದು ವೈಶಿಷ್ಟ್ಯತೆ : ಕುಟುಂಬಗಳು ಮತ್ತು ಸಮುದಾಯಗಳು ಒಟ್ಟಾಗಿ ತಮ್ಮ ಉಪವಾಸವನ್ನು ಮುರಿಯಲು ಇಫ್ತಾರ್ ಭೋಜನವನ್ನು ಹಮ್ಮಿಕೊಳ್ಳುತ್ತವೆ. ಉಪವಾಸದ ಹೊರತಾಗಿ ದೀನದಲಿತರಿಗೆ ದಾನ, ಧರ್ಮ ಮಾಡುವುದು ಈ ರಂಜಾನ್‌ ಮಾಸದ ವಿಶಿಷ್ಟ ಲಕ್ಷಣಗಳಾಗಿವೆ. ಚಂದ್ರನು ಆಕಾಶದಲ್ಲಿ ಕಾಣಿಸಿಕೊಂಡಾಗ, ಉಪವಾಸ ಪ್ರಾರಂಭವಾಗುತ್ತದೆ ಮತ್ತು ಚಂದ್ರನ ದರ್ಶನದ ನಂತರವೇ, ರಂಜಾನ್ ಈದ್‌ನೊಂದಿಗೆ ಕೊನೆಗೊಳ್ಳುತ್ತದೆ.

ಭಾರತದಲ್ಲಿ ರಂಜಾನ್ 2024 :  ಪ್ರತಿ ವರ್ಷ ಇಸ್ಲಾಮಿಕ್ ಪವಿತ್ರ ತಿಂಗಳ ಆರಂಭವು ಚಂದ್ರನ ದರ್ಶನದ ಮೇಲೆ ಅವಲಂಬಿತವಾಗಿರುತ್ತದೆ.ಅರ್ಧಚಂದ್ರಾಕಾರದ ರಂಜಾನ್ ಚಂದ್ರನನ್ನು ಸೌದಿ ಅರೇಬಿಯಾದಲ್ಲಿ ಮೊದಲು ನೋಡಲಾಗುತ್ತದೆ ಮತ್ತು ನಂತರ ಸಾಮಾನ್ಯವಾಗಿ ಒಂದು ದಿನದ ನಂತರ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತಹ ಆಗ್ನೇಯ ಏಷ್ಯಾದ ದೇಶಗಳಲ್ಲಿ ಕಂಡುಬರುತ್ತದೆ.
ಭಾರತದಲ್ಲಿ ರಂಜಾನ್ 2024 ರ ಮಾರ್ಚ್ 11 (ಸೋಮವಾರ) ಅಥವಾ ಮಾರ್ಚ್ 12 (ಮಂಗಳವಾರ) ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.  

ಇದನ್ನು ಓದಿ : Xiaomi 14 Ultra : ಭಾರತದಲ್ಲಿ ಬಿಡುಗಡೆ, ಏಪ್ರಿಲ್ 12 ರಿಂದ ಮಾರಾಟ ಪ್ರಾರಂಭ

WHO ಮಾರ್ಗಸೂಚಿಗಳು : ಪ್ರತಿ ವರ್ಷ, ವಿಶ್ವ ಆರೋಗ್ಯ ಸಂಸ್ಥೆಯು ರಂಜಾನ್ ತಿಂಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡುತ್ತದೆ. ಅಂತೆಯೇ ಈ ವರ್ಷವೂ ಕೆಲ ಗೈಡ್‌ಲೈನ್ಸ್‌ಗಳನ್ನು ನೀಡಿದೆ.

ಸಮತೋಲಿತ ಆಹಾರ : ಉಪವಾಸದ ನಂತರ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವಂತೆ ಮತ್ತು ಉಪವಾಸ ಇರುವ ಕಾರಣ ದೇಹಕ್ಕೆ ಹೆಚ್ಚಿನ ಶಕ್ತಿ ನೀಡಲು ಮುಸ್ಲಿಂ ಬಾಂಧವರು ಹೆಚ್ಚು ಸಮತೋಲಿತ ಆಹಾರ ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಉಪ್ಪು ಸೇವನೆ ಮಿತಿಯಲ್ಲಿರಲಿ :  ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡಬೇಕು. ಬದಲಾಗಿ, ವಿವಿಧ ಗಿಡಮೂಲಿಕೆಗಳೊಂದಿಗೆ ಆಹಾರಕ್ಕೆ ಸುವಾಸನೆಗಳನ್ನು ಸೇರಿಸಲು ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ಬೇಕಿಂಗ್ ಮತ್ತು ಸ್ಟೀಮಿಂಗ್ : ಹೆಚ್ಚು ಎಣ್ಣೆಯಲ್ಲಿ ಕರಿದ ಆಹಾರದ ಬದಲಿಗೆ ಸ್ಟೀಮ್‌ ಅಥವಾ ಬೇಯಿಸಿದ ಆಹಾರಗಳನ್ನು ತಿನ್ನುವಂತೆ ಶಿಫಾರಸು ಮಾಡಲಾಗಿದ್ದು, ಇದು ಪೌಷ್ಟಿಕಾಂಶವನ್ನು ಉಳಿಸಿಕೊಳ್ಳುವುದರ ಜೊತೆಗೆ ಆಹಾರಕ್ರಮವನ್ನು ಆರೋಗ್ಯಕರವಾಗಿಸುತ್ತದೆ. ಈ ಸಮಯದಲ್ಲಿ ಹುರಿದ, ಕರಿದ ಆಹಾರವನ್ನು ತಿನ್ನುವುದು ಒಳ್ಳೆಯದಲ್ಲ ಎಂದು ತಿಳಿಸಿದೆ. 

ಇದನ್ನು ಓದಿ :Xiaomi 14 Ultra : ಭಾರತದಲ್ಲಿ ಬಿಡುಗಡೆ, ಏಪ್ರಿಲ್ 12 ರಿಂದ ಮಾರಾಟ ಪ್ರಾರಂಭ

ವ್ಯಾಯಾಮ :  ರಂಜಾನ್ ಹಬ್ಬದ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ಜೀರ್ಣಕ್ರಿಯೆ ಮತ್ತು ಚಲನೆ ಉತ್ತಮವಾಗಿರುತ್ತದೆ. ಮತ್ತು ದೇಹವು ಸದೃಢವಾಗಿ ಮತ್ತು ಆರೋಗ್ಯಕರವಾಗಿರುತ್ತದೆ.

ಈ ತಿಂಗಳಲ್ಲಿ ಮುಸ್ಲಿಂ ಬಾಂಧವರು ಕಠಿಣ ಉಪವಾಸ ಮತ್ತು ಪ್ರಾರ್ಥನೆಗಳನ್ನುಆಚರಿಸುತ್ತಾರೆ. ದಿನಾಂಕಗಳಲ್ಲಿ ಬದಲಾವಣೆಗಳು ಆಗುವ ಕಾರಣ, ಇವರ ಪವಿತ್ರ ಮಾಸವು ಮಾರ್ಚ್ 11 ಅಥವಾ 12 ರಂದು ಪ್ರಾರಂಭವಾಗುವ ಸಾಧ್ಯತೆಯಿದೆ ಮತ್ತು ಏಪ್ರಿಲ್ 9 ರಂದು ಕೊನೆಗೊಳ್ಳುವ ಸಾಧ್ಯತೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News