PNB Recruitment 2021 : ಪರೀಕ್ಷೆಯಿಲ್ಲದೆ PNBಯಲ್ಲಿ ಉದ್ಯೋಗಾವಕಾಶ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಸುವರ್ಣಾವಕಾಶ. 

Written by - Ranjitha R K | Last Updated : Apr 13, 2021, 06:43 PM IST
  • ಪರೀಕ್ಷೆ ಬರೆಯದೆ PNBಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದು
  • ಏಪ್ರಿಲ್ 17 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
  • ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ತಿಳಿಯಿರಿ
PNB Recruitment 2021 : ಪರೀಕ್ಷೆಯಿಲ್ಲದೆ PNBಯಲ್ಲಿ ಉದ್ಯೋಗಾವಕಾಶ title=
ಪರೀಕ್ಷೆ ಬರೆಯದೆ PNBಯಲ್ಲಿ ಉದ್ಯೋಗ ಪಡೆದುಕೊಳ್ಳಬಹುದು (file photo)

ನವದೆಹಲಿ : PNB Recruitment 2021: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ (Punjab national Bank) ಕೆಲಸ ಮಾಡಲು ಇಚ್ಛಿಸುವವರಿಗೆ ಸುವರ್ಣಾವಕಾಶ. ಇದಕ್ಕಾಗಿ (PNB Recruitment 2021)  PNB ತಿರುವನಂತಪುರ ಸರ್ಕಲ್ ಗೆ ಸ್ವೀಪರ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಇದಕ್ಕಾಗಿ ಪಿಎನ್‌ಬಿ (PNB) ನೋಟಿಫಿಕೇಶನ್ ಹೊರಡಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪಿಎನ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ 2021 ಏಪ್ರಿಲ್ 17 ರಂದು ಅಥವಾ ಮೊದಲು ನಿಗದಿತ ಸ್ವರೂಪದಲ್ಲಿ ಅರ್ಜಿ ಸಲ್ಲಿಸಬಹುದು. 

ಇದಲ್ಲದೆ ಅಭ್ಯರ್ಥಿಗಳು   PNB Recruitment 2021  ಈ ಲಿಂಕ್ ಅನ್ನು ನೇರವಾಗಿ ಕ್ಲಿಕ್ ಮಾಡುವ ಮೂಲಕ, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ,   PNB Recruitment 2021 ಈ ಲಿಂಕ್ ಮೂಲಕ ಅಧಿಕೃತ Notification ನೋಡಬಹುದು. ಈ ನೇಮಕಾತಿ ಪ್ರಕ್ರಿಯೆಯಡಿ ಒಟ್ಟು 23 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. 

ಇದನ್ನೂ ಓದಿ : SBI Recruitment 2021: ಎಸ್‌ಬಿಐನಲ್ಲಿ ಬಂಪರ್ ಉದ್ಯೋಗಾವಕಾಶ

PNB Recruitment 2021 ರ ಪ್ರಮುಖ ದಿನಾಂಕಗಳು : 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಏಪ್ರಿಲ್ 2021

ಪಿಎನ್‌ಬಿ (PNB) ನೇಮಕಾತಿ 2021 ರ ಹುದ್ದೆಯ ವಿವರಗಳು :
ತಿರುವನಂತಪುರ - 6 ಹುದ್ದೆಗಳು
ಪಥನಮತ್ತಟ್ಟ - 4 ಹುದ್ದೆಗಳು
ಕೊಲ್ಲಂ - 5 ಪೋಸ್ಟ್‌ಗಳು
ಕೊಟ್ಟಾಯಂ - 4 ಹುದ್ದೆಗಳು
ಇಡುಕ್ಕಿ - 2 ಹುದ್ದೆಗಳು
ಅಲೆಪ್ಪಿ - 2 ಹುದ್ದೆಗಳು

PNB Recruitment 2021  ಗೆ ಅರ್ಹತಾ ಮಾನದಂಡ :

ಅಭ್ಯರ್ಥಿಗಳು 10 ನೇ ಉತ್ತೀರ್ಣರಾಗಿರುವ ಅವಶ್ಯಕತೆಯಿಲ್ಲ. ಅವಿದ್ಯಾವಂತರು ಕೂಡಾ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. 

ಇದನ್ನೂ ಓದಿ :  CBSE Board Exams: ಬೋರ್ಡ್ ಪರೀಕ್ಷೆ ರದ್ದುಗೊಳಿಸುವಂತೆ ಕೇಂದ್ರಕ್ಕೆ ಕೇಜ್ರಿವಾಲ್ ಮನವಿ

PNB Recruitment 2021  ರ ವಯಸ್ಸಿನ ಮಿತಿ :

ಅಭ್ಯರ್ಥಿಗಳ ವಯಸ್ಸಿನ ಮಿತಿ 18 ರಿಂದ 24 ವರ್ಷದೊಳಗಿರಬೇಕು (ಕಾಯ್ದಿರಿಸಿದ ವರ್ಗದ ಅಭ್ಯರ್ಥಿಗಳಿಗೆ ಪ್ರಮಾಣಿತ ಮಾನದಂಡಗಳ ಪ್ರಕಾರ ಯಾವುದೇ ವಯೋಮಿತಿ ಇರುವುದಿಲ್ಲ).

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News