ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ

ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಗೋಲ್ಡನ್ ಜಾಯಿಂಟ್ ಅನ್ನು ಶನಿವಾರದಂದು ಉದ್ಘಾಟಿಸಲಾಯಿತು.

Written by - Zee Kannada News Desk | Last Updated : Aug 13, 2022, 07:16 PM IST
  • ಚೆನಾಬ್ ನದಿಯ ಮೇಲಿನ ಈ ವಿಶ್ವದ ಅತಿ ಎತ್ತರದ ಏಕ-ಕಮಾನು ರೈಲ್ವೆ ಸೇತುವೆಯಿಂದಾಗಿ ಶ್ರೀನಗರವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸಲಾಗುತ್ತದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟನೆ title=
file photo

ಬೆಂಗಳೂರು: ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಗೋಲ್ಡನ್ ಜಾಯಿಂಟ್ ಅನ್ನು ಶನಿವಾರದಂದು ಉದ್ಘಾಟಿಸಲಾಯಿತು.

ಚೆನಾಬ್ ನದಿಯ ಮೇಲಿನ ಈ ವಿಶ್ವದ ಅತಿ ಎತ್ತರದ ಏಕ-ಕಮಾನು ರೈಲ್ವೆ ಸೇತುವೆಯಿಂದಾಗಿ ಶ್ರೀನಗರವನ್ನು ಭಾರತದ ಉಳಿದ ಭಾಗಗಳಿಗೆ ಸಂಪರ್ಕಿಸಲಾಗುತ್ತದೆ.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೊಂಕಣ ರೈಲ್ವೇ ಅಧ್ಯಕ್ಷ ಮತ್ತು ಎಂಡಿ ಸಂಜಯ್ ಗುಪ್ತಾ, 'ಇದು ಸುದೀರ್ಘ ಪ್ರಯಾಣವಾಗಿದೆ.'ಗೋಲ್ಡನ್ ಜಾಯಿಂಟ್' ಎಂಬ ಪದವನ್ನು ಸಿವಿಲ್ ಎಂಜಿನಿಯರ್‌ಗಳು ಸೃಷ್ಟಿಸಿದ್ದಾರೆ...ಇದು ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯಾಗಿದೆ' ಎಂದು ಹೇಳಿದರು.

ಇದನ್ನೂ ಓದಿ: Khadi Flags : ಪಾಲಿಸ್ಟರ್ ಧ್ವಜಗಳ ಮಧ್ಯೆ, ಮಾರುಕಟ್ಟೆಯಲ್ಲಿ ಖಾದಿ ಧ್ವಜಗಳಿಗೆ  ಭಾರಿ ಬೇಡಿಕೆ!

ಚೆನಾಬ್ ಸೇತುವೆಯು ಸಂಕೀರ್ಣವಾದ ಎಂಜಿನಿಯರಿಂಗ್‌ನೊಂದಿಗೆ ಪ್ರಸಿದ್ಧ ಸೇತುವೆಯಾಗಿದ್ದು, ಅದು ಹಲವಾರು ಸವಾಲುಗಳನ್ನು ಎದುರಿಸಬೇಕಾಗಿತ್ತು, ಈಗ ಭೂವಿಜ್ಞಾನ, ಕಠಿಣ ಭೂಪ್ರದೇಶ ಮತ್ತು ಪ್ರತಿಕೂಲ ವಾತಾವರಣದ ನಡುವೆಯೂ  ಇಂಜಿನಿಯರ್‌ಗಳು ಮತ್ತು ರೈಲ್ವೆ ಅಧಿಕಾರಿಗಳು ಈ ಹಂತಕ್ಕೆ ತೆಗೆದುಕೊಂಡು ಹೋಗುವಲ್ಲಿ ಪರಿಶ್ರಮವಹಿಸಿದ್ದಾರೆ.ಗೋಲ್ಡನ್ ಜಾಯಿಂಟ್ ಮುಗಿದ ನಂತರ ಸೇತುವೆಯು ಸರಿಸುಮಾರು ಶೇ 98 ರಷ್ಟು ಪೂರ್ಣಗೊಳ್ಳುತ್ತದೆ ಎಂದು ನಾವು ವಿಶ್ವಾಸದಿಂದ ಹೇಳಬಹುದು' ಎಂದು ಆಫ್ಕಾನ್ಸ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಗಿರಿಧರ್ ರಾಜಗೋಪಾಲನ್ ಹೇಳಿದರು.

ಇದನ್ನೂ ಓದಿ: ಯಾದಗಿರಿಯಲ್ಲಿ ಗಾಂಜಾ ಘಾಟು; ಪಾನ್-ಬೀಡಾ ಅಂಗಡಿಗಳಲ್ಲಿ ಗಾಂಜಾ ಜಾಕಲೇಟ್ ಮಾರಾಟ..!

ಚೆನಾಬ್ ಸೇತುವೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರದ ಅಪಾಯಕಾರಿ ಭೂಪ್ರದೇಶದಲ್ಲಿ ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್ (KRCL) ಗಾಗಿ ಆಫ್ಕಾನ್ಸ್ 16 ಹೆಚ್ಚುವರಿ ರೈಲ್ವೆ ಸೇತುವೆಗಳನ್ನು ನಿರ್ಮಿಸುತ್ತಿದೆ. ಎಲ್ಲಾ ಸೇತುವೆಗಳು ಉಧಂಪುರ್ ಶ್ರೀನಗರ ಬಾರಾಮುಲ್ಲಾ ರೈಲ್ ಲಿಂಕ್ (USBRL) ಯೋಜನೆಯ ಭಾಗವಾಗಿದೆ.

16 KRCL ಸೇತುವೆಗಳ ಯೋಜನೆಯ ಭಾಗವಾಗಿ ಕುತುಬ್ ಮಿನಾರ್‌ಗಿಂತಲೂ ಎತ್ತರದ ಸೇತುವೆಯ ಮುಖ್ಯ ಡೆಕ್ ಸ್ಲ್ಯಾಬ್ ಕಾಂಕ್ರೀಟಿಂಗ್ ಅನ್ನು ಆಫ್ಕಾನ್ಸ್ ಇತ್ತೀಚೆಗೆ ಪೂರ್ಣಗೊಳಿಸಿದೆ. 70 ದಿನಗಳಲ್ಲಿ, 1,550 ಕಮ್‌ಗಿಂತ ಹೆಚ್ಚಿನ ಒಟ್ಟು ನಾಲ್ಕು ಹಂತಗಳ ಕಾಂಕ್ರೀಟಿಂಗ್ ಪೂರ್ಣಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News