ಫ್ಲೈಯಿಂಗ್ ಕಾರಿನಲ್ಲಿ ಪ್ರಯಾಣಿಸುವ ಕಾಲ ದೂರವಿಲ್ಲ, ಸಿದ್ದವಾಗಿದೆ ದೇಶದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್ ಮಾದರಿ

ಜನರು ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಈ ಫ್ಲೈಯಿಂಗ್ ಕಾರುಗಳನ್ನು ಬಳಸಲಾಗುತ್ತದೆ ಎಂದು,  ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ ಮೂಲಕ ತಿಳಿಸಿದ್ದಾರೆ.

Written by - Ranjitha R K | Last Updated : Sep 22, 2021, 05:10 PM IST
  • ದೇಶದ ಮೊದಲ ಫ್ಲೈಯಿಂಗ್ ಕಾರು
  • ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರಿನ ಮಾದರಿ ಪರಿಚಯ
  • ಹೆಲಿಟೆಕ್ ಪ್ರದರ್ಶನದಲ್ಲಿ ಮಾದರಿ ಪ್ರಸ್ತುತಪಡಿಸಲು ಸಜ್ಜು
ಫ್ಲೈಯಿಂಗ್ ಕಾರಿನಲ್ಲಿ ಪ್ರಯಾಣಿಸುವ ಕಾಲ ದೂರವಿಲ್ಲ, ಸಿದ್ದವಾಗಿದೆ ದೇಶದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರ್ ಮಾದರಿ  title=
ದೇಶದ ಮೊದಲ ಫ್ಲೈಯಿಂಗ್ ಕಾರು (photo twitter)

ನವದೆಹಲಿ : ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಕೂಡಾ ಹೆಚ್ಚಾಗುತ್ತಿದೆ. ಟ್ರಾಫಿಕ್ ಜಾಮ್‌ನಿಂದಾಗಿ ಹೆಚ್ಚಿನ ಜನರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಟ್ರಾಫಿಕ್ ಜಾಮ್ ಕಾರಣದಿಂದಾಗಿ, ಅನೇಕ ಬಾರಿ ಜನರು ಕಚೇರಿ ಸೇರಿದಂತೆ ಹಲವು ಪ್ರಮುಖ ಕೆಲಸಗಳಿಗೆ ಸಮಯಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ. ದೇಶದ ಜನರು ಈ ಸಮಸ್ಯೆಯಿಂದ ಮುಕ್ತರಾಗುವ ಕಾಲ ಸನ್ನಿಹಿತವಾಗುತ್ತಿದೆ. ಹೌದು ಇನ್ನು ದೆಶದ ಜನ ಹೈಬ್ರಿಡ್ ಫ್ಲೈಯಿಂಗ್ ಕಾರ್‌ಗಳ (Hybrid Flying Car) ಮೂಲಕ ಪ್ರಯಾಣಿಸಬಹುದು.

ಫ್ಲೈಯಿಂಗ್ ಕಾರು ಮಾದರಿಯ ಬಗ್ಗೆ ಮಾಹಿತಿ ನೀಡಿದ ಜ್ಯೋತಿರಾದಿತ್ಯ ಸಿಂಧಿಯಾ  :
ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಟ್ವೀಟ್ (Tweet) ಮಾಡುವ ಮೂಲಕ ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರಿನ (Flying car) ಮಾದರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚೆನ್ನೈ ಮೂಲದ ಸ್ಟಾರ್ಟಪ್ ನ ಯುವ ತಂಡದ ಮೂಲಕ, ಏಷ್ಯಾದ ಮೊದಲ ಹೈಬ್ರಿಡ್ ಫ್ಲೈಯಿಂಗ್ ಕಾರಿನ (Hybrid Flying Car) ಪರಿಕಲ್ಪನಾ ಮಾದರಿಯನ್ನು ಪರಿಚಯಿಸಿದ್ದಾರೆ. 

 

ಇದನ್ನೂ ಓದಿ : ಪಾಸ್ ಪೋರ್ಟ್ , ಪ್ಯಾನ್ ಕಾರ್ಡ್ ಗಾಗಿ ಅಲೆಯಬೇಕಿಲ್ಲ, ಸಮೀಪದ ರೇಷನ್ ಅಂಗಡಿಯಲ್ಲೇ ಅರ್ಜಿ ಸಲ್ಲಿಸಬಹುದು

ಈ ಕೆಲಸಗಳಿಗಾಗಿ ಫ್ಲೈಯಿಂಗ್ ಕಾರುಗಳನ್ನು ಬಳಸಲಾಗುವುದು : 
ಜನರು ಮತ್ತು ಸರಕುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಲು ಈ ಫ್ಲೈಯಿಂಗ್ ಕಾರುಗಳನ್ನು ಬಳಸಲಾಗುತ್ತದೆ ಎಂದು,  ಜ್ಯೋತಿರಾದಿತ್ಯ ಸಿಂಧಿಯಾ (Jyotiraditya Scindia) ಟ್ವೀಟ್ ಮೂಲಕ ತಿಳಿಸಿದ್ದಾರೆ. ಇದರೊಂದಿಗೆ, ಭವಿಷ್ಯದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಹಾಯವಾಗುವ  ನಿರೀಕ್ಷೆಯಿದೆ. ಅಲ್ಲದೆ, ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಈ ಫ್ಲೈಯಿಂಗ್ ಕಾರು ಜನರ ಜೀವವನ್ನು ಉಳಿಸಬಲ್ಲದು ಎಂದು ಅವರು ಹೇಳಿದ್ದಾರೆ. 

ಕಾರಿನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಿಜಿಟಲ್ ಇನ್ಸ್ಟ್ರುಮೆಂಟ್ :
ಅಕ್ಟೋಬರ್ 5 ರಂದು ಲಂಡನ್‌ನಲ್ಲಿ (London) ನಡೆಯಲಿರುವ ವಿಶ್ವದ ಅತಿದೊಡ್ಡ ಹೆಲಿಟೆಕ್ ಪ್ರದರ್ಶನದಲ್ಲಿ ವಿನತಾ ಏರೋಮೊಬಿಲಿಟಿ (Vinata AeroMobility) ತಂಡವು ತನ್ನ ಮಾದರಿಯನ್ನು ಪ್ರಸ್ತುತಪಡಿಸಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ವಿನತಾ  ಏರೋಮೊಬಿಲಿಟಿಯಲ್ಲಿರುವ ತಂಡವು ಹೈಬ್ರಿಡ್ ಫ್ಲೈಯಿಂಗ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಡಿಜಿಟಲ್ ಇನ್ಸ್ಟ್ರುಮೆಂಟ್ ಪ್ಯಾನಲ್‌ಗಳನ್ನು ಹೊಂದಿದೆ, ಇದು ಹಾರುವ ಮತ್ತು ಚಾಲನೆ ಅನುಭವವನ್ನು ಹೆಚ್ಚು ಆಕರ್ಷಕವಾಗಿ ಮತ್ತುಯಾವುದೇ ಸಮಸ್ಯೆಗಳಾಗದಂತೆ ನಡೆಸುತ್ತದೆ. ಹೊರಗಿನಿಂದ ನೋಡಲು ಕಾರು ತುಂಬಾ ಆಕರ್ಷಕವಾಗಿರಲಿದೆ.

ಇದನ್ನೂ ಓದಿ : PAN Card ಕಳೆದು ಹೋಗಿದ್ದರೆ, ಕೆಲವೇ ನಿಮಿಷಗಳಲ್ಲಿ ಹೀಗೆ ಡೌನ್ಲೋಡ್ ಮಾಡಿ e-Pan

1300 ಕೆಜಿ ಎತ್ತುವ ಸಾಮರ್ಥ್ಯ :
ಹೈಬ್ರಿಡ್ ಫ್ಲೈಯಿಂಗ್ ಕಾರಿನ ತೂಕ 1100 ಕೆಜಿ. ಇದು ಗರಿಷ್ಠ 1300 ಕೆಜಿ ತೂಕವನ್ನು ಎತ್ತಬಲ್ಲದು. ಇದು ಬ್ಯಾಟರಿಯನ್ನು ಹೊಂದಿದ್ದು, ಭಾರತದಲ್ಲಿ ತಯಾರಿಸಿದ ಹೈಬ್ರಿಡ್ ಫ್ಲೈಯಿಂಗ್ ಕಾರ್ ಇದಾಗಿದೆ. ವಿನತಾ ಏರೋಮೊಬಿಲಿಟಿಯ ಫ್ಲೈಯಿಂಗ್ ಕಾರುಗಳನ್ನು ಇಬ್ಬರು ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು ಗಂಟೆಗೆ 100-120 ಕಿಮೀ ವೇಗದಲ್ಲಿ ಹಾರಬಲ್ಲವು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News