ನವದೆಹಲಿ: ಇಂದು ಮಾರ್ಚ್ 31, ಲಾಕ್ ಡೌನ್ 4.0ಯ ಕೊನೆಯ ದಿನ. ನಾಳೆಯಿಂದ ರೈಲು ಹಳಿಗಳ ಮೇಲೆ ಟ್ರ್ಯಾಫಿಕ್ ಕೂಡ ಹೆಚ್ಚಾಗಲಿದೆ. ಜೂನ್ 1 ರಿಂದ ಭಾರತೀಯ ರೇಲ್ವೆ ಪ್ರಯಾಣಿಕರಿಗಾಗಿ 200 ಹೆಚ್ಚುವರಿ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಪ್ರಯಾಣದ ವೇಳೆ ಯಾವುದೇ ರೀತಿಯ ತೊಂದರೆಯಾಗಬಾರರು ಎಂಬ ಕಾರಣಕ್ಕೆ ಪ್ರತಿಯೊಬ್ಬರೂ ಕನ್ಫರ್ಮ್ ಟಿಕೆಟ್ ಬಯಸುವುದು ಸಾಮಾನ್ಯ. ಪ್ರಯಾಣಿಕರ ಈ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ರೇಲ್ವೆ ವಿಭಾಗ ಮುಂಗಡ ಟಿಕೆಟ್ ಕಾಯ್ದಿರಿಸುವ ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಪ್ರಯಾಣಿಕರು ಇನ್ಮುಂದೆ 30 ದಿನಗಳ ಬದಲಾಗಿ 120 ದಿನಗಳು ಮುಂಚಿತವಾಗಿ ಟಿಕೆಟ್ ಅನ್ನು ಮುಂಗಡ ಕಾಯ್ದಿರಿಸುವ ಸೌಲಭ್ಯ ಆರಂಭಿಸಿದೆ. ಮಾರ್ಚ್ 22 ರಿಂದಲೇ ಈ ರೈಲುಗಳಿಗೆ ಟಿಕೆಟ್ ಬುಕಿಂಗ್ ಆರಂಭಗೊಂಡಿದೆ.
ಲಾಕ್ ಡೌನ್ ಅವಧಿಯಲ್ಲಿ ಓದಿಸಲಾಗುತ್ತಿರುವ ವಿಶೇಷ ರೈಲುಗಳಿಗೆ ಜಾರಿಯಲ್ಲಿರುವ ಮಾರ್ಗ ಸೂಚಿಗಳಲ್ಲಿಯೂ ಕೂಡ ಬದಲಾವಣೆ ಮಾಡಿರುವ ರೇಲ್ವೆ ಇಲಾಖೆ, ಈ ರೈಲುಗಳಲ್ಲಿ ಟಿಕೆಟ್ ಬುಕಿಂಗ್ 4 ತಿಂಗಳು ಮೊದಲು ಸಾಮಾನ್ಯ ಟಿಕೆಟ್, ತತ್ಕಾಲ್ ಟಿಕೆಟ್ ಹಾಗೂ ಮಾಧ್ಯಮದ ಸ್ಟೇಷನ್ ಗಳಿಗಾಗಿ ಟಿಕೆಟ್ ಬುಕಿಂಗ್ ಮಾಡಬಹುದು ಎಂದು ಹೇಳಿದೆ.ಈ ಎಲ್ಲ ಬದಲಾವಣೆಗಳು ಇಂದಿನಿಂದಲೇ ಜಾರಿಗೆ ಬಂದಿವೆ.
ಸದ್ಯ ದೇಶಾದ್ಯಂತ 23೦ ವಿಶೇಷ ರೈಲುಗಳಲ್ಲಿ ಪ್ರಯಾಣಕ್ಕಾಗಿ ಆನ್ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಬಹದು. ಆದರೆ, ಇವುಗಳಿಗಾಗಿ ಇಲಾಖೆ ದೇಶಾದ್ಯಂತ ಎರಡು ಲಕ್ಷ ಹೆಚ್ಚುವರಿ ಕಾಮನ್ ಸೆಂಟರ್ ಗಳ ಮೂಲಕ ಕೂಡ ಟಿಕೆಟ್ ಬುಕ್ ಮಾಡುವ ಸೌಲಭ್ಯ ನೀಡಲಾಗಿದೆ. ಈ ರೈಲುಗಳಲ್ಲಿ ಸಾಮಾನುಗಳ ಬುಕಿಂಗ್ ಕೂಡ ಮಾಡಬಹುದಾಗಿದೆ. ಈ ರೈಲುಗಳಿಗಾಗಿ ಮೊಬೈಲ್ ಆಪ್, ರೇಲ್ವೆ ಸ್ಟೇಷನ್ ಕೌಂಟರ್, ಪೋಸ್ಟ್ ಆಫೀಸ್, ಯಾತ್ರಿ ಟಿಕೆಟ್ ಸೌಕರ್ಯ ಕೇಂದ್ರಗಳು, ಅಧಿಕೃತ ಏಜೆಂಟ್, ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್ ಗಳ ಮೂಲಕ ಕೂಡ ಟಿಕೆಟ್ ಬುಕ್ ಮಾಡಬಹುದು.