Horse Injection: ಈ ಕೆಲಸಕ್ಕಾಗಿ ಕುದುರೆ ಇಂಜೆಕ್ಷನ್ ಹಾಕಿಸಿಕೊಂಡ ಯುವಕ.. ಮುಂದೆನಾಗಿದೆ ಗೊತ್ತಾ?

Indore Boy: ಕುದುರೆಯ ಇಂಜೆಕ್ಷನ್ ಹಾಕಿಸಿಕೊಂಡರೆ ಏನಾಗುತ್ತದೆ ಎಂಬುದು ಯುವಕನಿಗೂ ತಿಳಿದಿಲ್ಲ. ಆದರೆ, ಇನ್ನೊಂದೆಡೆ ತನಗೆ ಯಾವ ಚುಚ್ಚುಮದ್ದು ನೀಡಲಾಗುತ್ತಿದೆ ಎಂಬುದು ಯುವಕನಿಗೂ ಗೊತ್ತಿರಲಿಲ್ಲವಂತೆ  ಎನ್ನಲಾಗುತ್ತಿದೆ. ಅದೇನೇ ಇದ್ದರೂ ಪ್ರಸ್ತುತ ಯುವಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಗತಿ ಮಾತ್ರ ನಿಜ.  

Written by - Nitin Tabib | Last Updated : Nov 25, 2022, 07:28 PM IST
  • ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.
  • ಮಾಧ್ಯಮ ವರದಿಗಳ ಪ್ರಕಾರ, ಒಬ್ಬ ಯುವಕ ಜಿಮ್‌ಗೆ ಹೋಗುತ್ತಿದ್ದನು
  • ಮತ್ತು ಉತ್ತಮ ಶರೀರ ಸೌಷ್ಟ್ಯವನ್ನು ಹೊಂದಲು ಬಯಸಿದ್ದ ಎನ್ನಲಾಗಿದೆ.
Horse Injection: ಈ ಕೆಲಸಕ್ಕಾಗಿ ಕುದುರೆ ಇಂಜೆಕ್ಷನ್ ಹಾಕಿಸಿಕೊಂಡ ಯುವಕ.. ಮುಂದೆನಾಗಿದೆ ಗೊತ್ತಾ? title=
Horse Injection

Boy Takes Horse Injection: ಕೆಲವೊಮ್ಮೆ ಜೀವನದಲ್ಲಿ ಶಾರ್ಟ್ ಕಟ್ ಅನುಸರಿಸುವುದು ಎಷ್ಟೊಂದು ದುಬಾರಿ ಸಾಬೀತಾಗಬಹುದು ಎಂಬುದು ಅದನ್ನು ಅನುಸರಿಸುವವರಿಗೆ ತಿಳಿದಿರುವುದಿಲ್ಲ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಇಂದೋರ್ ನಲ್ಲಿ ಇಂತಹುದೆ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಯುವಕನೋರ್ವನಿಗೆ ಕುದುರೆ ಹಾಕಲಾಗುವ ಇಂಜೆಕ್ಷನ್ ನೀಡಲಾಗಿದೆ. ನಂತರ ಆ ಯುವಕನ ಪರಿಸ್ಥಿತಿ ಯಾವ ಮಟ್ಟಕ್ಕೆ ಬಿಗಡಾಯಿಸಿದೆ ಎಂದರೆ, ಕೊನೆಗೆ ಆತನನ್ನು ಆಸ್ಪತ್ರೆಗೆ ಭರ್ತಿ ಮಾಡಲಾಗಿದೆ. ಸಿಕ್ಸ್ ಪ್ಯಾಕ್ ಆಬ್ ಪಡೆಯಲು ಯುವಕ ಔಷಧ ಮಳಿಗೆಗೆ ಹೋದ ಕಾರಣ ಇದೆಲ್ಲಾ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ.

ಚುಚ್ಚುಮದ್ದು ಹಾಕಿಸಿಕೊಂಡ ಬಳಿಕ ಬದಲಾವಣೆ
ಈ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಮಾಧ್ಯಮ ವರದಿಗಳ ಪ್ರಕಾರ, ಒಬ್ಬ ಯುವಕ ಜಿಮ್‌ಗೆ ಹೋಗುತ್ತಿದ್ದನು ಮತ್ತು ಉತ್ತಮ ಶರೀರ ಸೌಷ್ಟ್ಯವನ್ನು ಹೊಂದಲು ಬಯಸಿದ್ದ ಎನ್ನಲಾಗಿದೆ. ಯಾರದ್ದೋ ಸಲಹೆ ಮೇರೆಗೆ ಜಿಮ್ ಜೊತೆಗೆ ಸ್ವಲ್ಪ ಪ್ರೊಟೀನ್ ಮತ್ತು ಸಪ್ಲಿಮೆಂಟ್ಸ್ ತೆಗೆದುಕೊಳ್ಳಬೇಕು ಎಂದುಕೊಂಡಿದ್ದಾನೆ. ಇದಾದ ಬಳಿಕ ಅಂಗಡಿಯವನೊಬ್ಬ ಆತನಿಗೆ ಪ್ರೊಟೀನ್ ಪೌಡರ್ ಮತ್ತು ಇಂಜೆಕ್ಷನ್ ಹಾಕಿಕೊಂಡ ನಂತರ ದೇಹದಲ್ಲಿ ಬದಲಾವಣೆ ಆಗಲಿದ್ದು, ಎರಡು ತಿಂಗಳ ನಂತರ ಈ ವ್ಯತ್ಯಾಸ ಗೋಚರಿಸುತ್ತದೆ ಎಂದು ಸಲಹೆ ನೀಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ-ಹುಡುಗನನ್ನು ಕೊಂದು ರಕ್ತ ಕುಡಿದಿದ್ದಕ್ಕಾಗಿ ಉತ್ತರ ಪ್ರದೇಶದ ಮಹಿಳೆಗೆ ಜೀವಾವಧಿ ಶಿಕ್ಷೆ

ಮಾಹಿತಿ ನೀಡದೆ ಕುದುರೆ ಚುಚ್ಚುಮದ್ದು ನೀಡಿದ ಅಂಗಡಿಯ ಮಾಲೀಕ!
ಇದಾದ ನಂತರ ಅದೇ ಅಂಗಡಿಯವನು ಯುವಕನಿಗೆ ಯಾವುದೇ ರೀತಿಯ ಮಾಹಿತಿಯನ್ನು ನೀಡದೆ ಕುದುರೆಗೆ ಹಾಕಲಾಗುವ ಇಂಜೆಕ್ಷನ್ ನೀಡಿದ್ದಾನೆ. ಇಂಜೆಕ್ಷನ್ ಪಡೆದ ಕೆಲವೇ ದಿನಗಳಲ್ಲಿ ಯುವಕನ ಆರೋಗ್ಯ ಹದಗೆಡಲಾರಂಭಿಸಿತು. ಹೊಟ್ಟೆಯಲ್ಲಿ ತೀವ್ರ ನೋವು ಕಾಣಿಸಿಕೊಂಡು ವಾಂತಿ ಭೇದಿ ಶುರುವಾಗುವ ಸ್ಥಿತಿ ಎದುರಾಗಿದೆ. ಇಷ್ಟೆಲ್ಲಾ ನಡೆದ ಬಳಿಕ ಆಸ್ಪತ್ರೆಗೆ ತೆರಳಿ ವೈದ್ಯರನ್ನು ಸಂಪರ್ಕಿಸಿದಾಗ ಯುವಕನಿಗೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ. ಈ ಘಟನೆಯ ಬಳಿಕ ಯುವಕ ನೇರವಾಗಿ ಪೋಲೀಸ್ ಠಾಣೆಗೆ ತಲುಪಿ ಇಡೀ ಕಥೆಯನ್ನು ಹೇಳಿದ್ದಾನೆ.

ಇದನ್ನೂ ಓದಿ-Viral News : 17 ವರ್ಷದ ಬಾಲಕನನ್ನು ಹನುಮಂತ ಎಂದು ಪೂಜಿಸುವ ಗ್ರಾಮಸ್ಥರು! ಕಾರಣ ಗೊತ್ತಾ?

ಆರೋಪಿ ಬಂಧನ!
ವರದಿಗಳ ಪ್ರಕಾರ, ಸಂತ್ರಸ್ತಯುವಕನ ಹೆಸರು ಜೈ ಸಿಂಗ್ ಮತ್ತು ಆತ ಇಂದೋರ್ ಪಟ್ಟಣದ ವಿಜಯ್ ನಗರದಲ್ಲಿ ವಾಸಿಸುತ್ತಾನೆ. ಅಂಗಡಿಯವನ ಹೆಸರನ್ನು ಆತ ಮೋಹಿತ್ ಅಹುಜಾ ಎಂದು ಹೇಳಿದ್ದಾನೆ. ಪ್ರಕರಣ ಬಯಲಿಗೆ ಬಂದ ನಂತರ ಅಂಗಡಿಯವರು ಇದುವರೆಗೆ ಎಷ್ಟು ಜನರಿಗೆ ಈ ಚುಚ್ಚುಮದ್ದನ್ನು ನೀಡಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಅಂಗಡಿಯವನ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News