"ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ"-ರಾಹುಲ್ ಗಾಂಧಿ

ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ. ನೀವು ಆರಿಸಿದ್ದು, ಬೇರೆ ಸರ್ಕಾರ, ಆದರೆ ಆಡಳಿತ ಮಾಡಿದ್ದು, ಬೇರೆ ಸರ್ಕಾರ. ಶಾಸಕರನ್ನು ಹಣದಿಂದ ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

Written by - Zee Kannada News Desk | Last Updated : May 7, 2023, 11:05 PM IST
  • ಮುಂದಿನ ಕಾಂಗ್ರೆಸ್ ಸರ್ಕಾರ ರೈತರ ಬೆಳೆ ವಿಮೆಗಾಗಿ 5 ಸಾವಿರ ಕೋಟಿ ರೈತರ ಪರಿಹಾರಕ್ಕಾಗಿ ಮೀಸಲಿಡಲಿದೆ
  • ನಿಮ್ಮ ಜಮೀನಿಗೆ ನಷ್ಟವಾದರೆ ನಿಮಗೆ ಈ ಹಣ ಸಿಗುತ್ತದೆ
  • ಹಾಲಿನ ಉತ್ಪಾದಕರಿಗೆ ನೀಡುತ್ತಿರುವ 5 ರೂ. ಪ್ರೋತ್ಸಾಹಧನವನ್ನು 7 ರೂ.ಗೆ ಏರಿಕೆ ಮಾಡಲಾಗದುವುದು
 "ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ"-ರಾಹುಲ್ ಗಾಂಧಿ  title=
file photo

ಬೆಂಗಳೂರು: ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ. ನೀವು ಆರಿಸಿದ್ದು, ಬೇರೆ ಸರ್ಕಾರ, ಆದರೆ ಆಡಳಿತ ಮಾಡಿದ್ದು, ಬೇರೆ ಸರ್ಕಾರ. ಶಾಸಕರನ್ನು ಹಣದಿಂದ ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

ಆನೇಕಲ್ ನ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ರಾಹುಲ್ ಗಾಂಧಿ ಮಾತನಾಡಿದ್ದಿಷ್ಟು...

ನಾನು ಕರ್ನಾಟಕದಲ್ಲಿ ಭಾರತ ಜೋಡೋ ಯಾತ್ರೆ ಮೂಲಕ 500ಕ್ಕೂ ಹೆಚ್ಚು ಕಿ.ಮೀ ನಿಮ್ಮ ಜತೆ ಪಾದಯಾತ್ರೆ ಮಾಡಿದ್ದೆ. ಈ ರಾಜ್ಯದ ತಾಯಂದಿರು, ಯುವಕರು, ಕಾರ್ಮಿಕರ ಜತೆ ನಾನು ಹೆಜ್ಜೆ ಹಾಕಿದ್ದೆ. ಭಾರತ ಹಾಗೂ ಭಾರತವನ್ನು ಒಂದುಗೂಡಿಸಲು ಹೆಜ್ಜೆ ಹಾಕಿದ್ದೆ. ಸಮಾಜದಲ್ಲಿ ದ್ವೇಷ, ಹಿಂಸಾಚಾರ ತೊಲಗಿಸಲು ಹೆಜ್ಜೆ ಹಾಕಿದ್ದೆ. ಈ ಸಂದರ್ಭದಲ್ಲಿ ನೀವು ನನಗೆ ನಿರುದ್ಯೋಗ, ಬೆಲೆ ಏರಿಕೆ ವಿಚಾರವಾಗಿ ಹೇಳಿದ್ದಿರಿ. 400 ರೂ. ಇದ್ದ ಸಿಲಿಂಡರ್ 1100 ಆಗಿದೆ. 70 ರೂ. ಇದ್ದ ಪೆಟ್ರೋಲ್ 100 ರೂ. ಆಗಿದೆ. ಡೀಸೆಲ್ 60 ರೂ. ಇತ್ತು 90 ರೂ. ಆಗಿದೆ. ನೋಟು ರದ್ಧತಿ ಹಾಗೂ ಜಿಎಸ್ ಟಿ ಸಣ್ಣಪುಟ್ಟ ವ್ಯಾಪಾರಿಗಳನ್ನು ನಾಶ ಮಾಡಿದೆ. ಕರ್ನಾಟಕದಲ್ಲಿ 40% ಕಮಿಷನ್ ಭ್ರಷ್ಟಾಚಾರ ಸರ್ಕಾರ ಎಂದು ನೀವೆಲ್ಲರೂ ಹೇಳಿದ್ದೀರಿ. ಭ್ರಷ್ಟಾಚಾರದಲ್ಲಿ ಈ ಸರ್ಕಾರ ವಿಶ್ವ ದಾಖಲೆ ಮುರಿದಿದೆ. 

ಇದನ್ನೂ ಓದಿ: ನಿಮ್ಮ ಹೊಲಸು ರಾಜಕೀಯಕ್ಕೆ ಅಪ್ಪು ಹೆಸರು ತರಬೇಡಿ: ಪ್ರಕಾಶ್ ರೈ

ರಾಜ್ಯದಲ್ಲಿ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದರು. ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ನೀಡಲಿಲ್ಲ. ಎಲ್ಲೇ ನೋಡಿದರೂ ಹಗರಣಗದಳು ನಡೆದಿವೆ. ಪಿಎಸ್ಐ, ಸಹಾಯಕ ಪ್ರಾದ್ಯಾಪಕರು, ಕಿರಿಯ ಇಂಜಿನಿಯರ್ ನೇಮಕಾತಿ ಹಗರಣ, ಸಹಕಾರಿ ಬ್ಯಾಂಕ್ ಹಗರಣ, ಮೈಸೂರ್ ಸ್ಯಾಂಡಲ್ ಹಗರಣದಲ್ಲಿ ಶಾಸಕರ ಪುತ್ರ 8 ಕೋಟಿ ಅಕ್ರಮ ಹಣದ ಜತೆ ಸಿಕ್ಕಿ ಬೀಳುತ್ತಾರೆ. ಆದರೆ ಬಿಜೆಪಿ ಶಆಸಕರು ಹೇಳುತ್ತಾರೆ, ರಾಜ್ಯದಲ್ಲಿ ಸಿಎಂ ಹುದ್ದೆಗೆ 2500 ಕೋಟಿಗೆ ಖರೀದಿ ಮಾಡಬಹುದು ಎನ್ನುತ್ತಾರೆ. ಈ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಕ್ಕಳಿಗೂ ತಿಳಿದಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರವಿದೆ. ಪ್ರಧಾನಮಂತ್ರಿಗಳಿಗೂ ರಾಜ್ಯದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದೆ. 

ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದರೋಡೆಯಾಗಿದೆ. ಪ್ರಧಾನಮಂತ್ರಿಗಳೇ 40% ಕಮಿಷನ್ ಲಂಚದಲ್ಲಿ ಯಾವ ಇಂಜಿನ್ ಗೆ ಎಷ್ಟು ಪಾಲು ದೊರೆತಿದೆ? ಪ್ರಧಾನಮಂತ್ರಿಗಳು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷ 91 ಬಾರಿ ನನ್ನನ್ನು ಟೀಕೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೂ ಮೊದಲು ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಷ್ಟು ಜನರನ್ನು ಜೈಲಿಗೆ ಹಾಕಿದ್ದೀರಿ? ನಾನು ಲೋಕಸಭೆಯಲ್ಲಿ ನಿಮಗೆ ಅಧಾನಿ ಅವರ ಜತೆ ನಿಮ್ಮ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದ್ದೆ. ನನ್ನನ್ನು ಅನರ್ಹ ಮಾಡಿದರು. ನಾನು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಲೋಕಸಭೆಯಿಂದ ಹೊರಗೆಹಾಕಿದರು. ರಾಜ್ಯದಲ್ಲಿ ಇಷ್ಟು ಭ್ರಷ್ಟಾಚಾರ ನಡೆಯುತ್ತಿದ್ದರೂ ಏನೂ ಮಾಡುತ್ತಿಲ್ಲ?

ನಾನು ಇಲ್ಲಿಗೆ ಬಂದಾಗ ನಮ್ಮ ನಾಯಕರುಗಳ ಹೆಸರು ಪ್ರಸ್ತಾಪಿಸಿದೆ. ಆದರೆ ಮೋದಿ ಅವರು ತಮ್ಮ ಭಾ,ಣದ ವೇಲೆ ಯಾರೊಬ್ಬರ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಮೋದಿ ಅವರ ರೋಡ್ ಶೋಗಳಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರನ್ನು ಹೊರಗೆ ಹಾಕಿದ್ದಾರೆ. ಮೋದಿ ಅವರು ಗಾಡಿಯಲ್ಲಿ ಹೋದರೆ, ಉಳಿದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ. ಇದೆಲ್ಲವು ಯಾಕೆ ಆಗುತ್ತಿದೆ ಎಂದು ನನ್ನನ್ನು ನಾನು ಕೇಳಿಕೊಂಡೆ. ಆಗ ನನಗೆ ಎರಡು ಉತ್ತರ ಸಿಕ್ಕಿತು. ಒಂದು ಮೋದಿ ಅವರು ಕೇವಲ ಮೋದಿ ಅವರನ್ನು ನೋಡಿಕೊಳ್ಳಲು ಬಯಸುತ್ತಾರೆ. ಮತ್ತೊಂದು ಅವರು ಅವರ ಹೊರತಾಗಿ ಉಳಿದವರನ್ನು ಕೀಳಾಗಿ ನೋಡುತ್ತಾರೆ. ಇದಕ್ಕಾಗಿ ಅವರು ಮಾತ್ರ ಗಾಡಿಗಳಲ್ಲಿ ಪ್ರಯಾಣ ಮಾಡುತ್ತಾರೆ. ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರು ಭ್ರಷ್ಟರು ಎಂಬ ವಿಚಾರ ತಿಳಿದು ಅವರನ್ನು ನಿಮ್ಮಿಂದ ಮುಚ್ಚಿಡುವ ಪ್ರಯತ್ನ ಮಾಡುತ್ತಿರಬಹುದು.

ಇದನ್ನೂ ಓದಿ: ರಾಹುಲ್‌ ಗಾಂಧಿಯಿಂದ ಚಿಕ್ಕೋಡಿಯಲ್ಲಿ ಭರ್ಜರಿ ಕ್ಯಾಂಪೇನ್

ರಾಜ್ಯದಲ್ಲಿ ಕಳ್ಳತನ ಆಗಿದ್ದರೆ ಅದರ ಲಾಭ ದೆಹಲಿಗೂ ತಲುಪಿರುತ್ತದೆ. ಇಲ್ಲದಿದ್ದರೆ ಪ್ರಧಾನಮಂತ್ರಿಗಳು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಬೇಕಿತ್ತು. ಕಳೆದ 3 ವರ್ಷಗಳಲ್ಲಿ ಮೋದಿ ಅವರು ಏನು ಮಾಡಿಲ್ಲ. ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಒಂದು ಮಾತನ್ನು ಆಡಿಲ್ಲ. ಮಣಿಪುರದಲ್ಲಿ ದೊಡ್ಡ ಗಲಾಟೆ ನಡೆದು ಜನ ಸಾಯುತ್ತಿದ್ದರಾ. ಆದರೂ ಪ್ರಧಾನಿಗಳು ಹಾಗೂ ಗೃಹಸಚಿವರಿಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ದ್ವೇಷ ರಾಜಕೀಯದ ಫಲ ಇದಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಅದಕ್ಕೆ ದ್ವೇಷ ರಾಜಕಾರಣವೇ ಕಾರಣ. ಈ ರಾಜನೀತಿ ವಿರುದ್ಧವಾಗಿಯೇ ನಾವು ಭಾರತ ಜೋಡೋ ಯಾತ್ರೆ ಮಾಡಿದೆವು. ಇದು ನಮ್ಮ ವಿಚಾರಧಾರೆ. 

ಪ್ರಧಾನಿಗಳು ಕಳೆದ ನಾಲ್ಕು ವರ್ಷಗಳ ಬಗ್ಗೆಯೂ ಮಾತನಾಡುತ್ತಿಲ್ಲ, ಮುಂದಿನ ಐದು ವರ್ಷಗಳ ಬಗ್ಗೆಯೂ ಮಾತನಾಡುತ್ತಿಲ್ಲ. ರಾಜ್ಯದ ಯುವಕರು, ಮಹಿಳೆಯರು, ರೈತರು, ಅಸಂಘಟಿತ ಕಾರ್ಮಿಕರಿಗಾಗಿ ಏನು ಮಾಡುತ್ತೀರಿ ಎಂಬುದನ್ನಾದರೂ ಹೇಳಿ ಪ್ರಧಾನಮಂತ್ರಿಗಳೇ. ಈ ಚುನಾವಣೆ ರಾಜ್ಯದ ಜನರ ಚುನಾವಣೆಯೇ ಹೊರತು, ಮೋದಿ ಅವರ ಚುನಾವಣೆ ಅಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಸಂಪುಟ ಸಭೆಯಲ್ಲಿ ಏನು ಮಾಡಲಿದೆ ಎಂಬುದನ್ನು ಹೇಳಲು ಬಯಸುತ್ತೇನೆ.

ಬೆಲೆ ಏರಿಕೆಯಿಂದ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಇದಕ್ಕೆ ಪರಿಹಾರ ನೀಡಲು ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ, ಮನೆ ಯಜಮಾನಿಗೆ 2 ಸಾವಿರ ರೂಪಾಯಿ, ನಿರುದ್ಯೋಗ ಯುವಕರಿಗೆ ನೆರವು, ಪದವೀಧರರಿಗೆ 3 ಸಾವಿರ ರೂಪಾಯಿ, ಡಿಪ್ಲೊಮೊ ಪದವೀಧರರಿಗೆ 1,500 ಯುವನಿಧಿ ಮೂಲಕ 2 ವರ್ಷಗಳ ಕಾಲ ಆರ್ಥಿಕ ನೆರವು ಈ 5 ಗ್ಯಾರಂಟಿಗಳನ್ನು  ನಾವು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೊದಲ ದಿನದ ಮೊದಲ ಸಂಪುಟ ಸಭೆಯಲ್ಲೇ ನಾವು ಅದನ್ನು ಜಾರಿಗೆ ತರಲಿದ್ದೇವೆ.

ಇದನ್ನೂ ಓದಿ: ಸಿದ್ದರಾಮಯ್ಯರಿಗೆ ಇದು ಕೊನೆ ಚುನಾವಣೆ: ಗೌರವಯುತ ನಿವೃತ್ತಿಗೆ ಅವಕಾಶ ನೀಡಿ-ಡಾ.ಯತೀಂದ್ರ ಸಿದ್ದರಾಮಯ್ಯ

ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ನಿಮ್ಮ ಬೆಳೆಗಳನ್ನು ಕಸಿಯುವ ಪ್ರಯತ್ನ ಮಾಡಿತ್ತು. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಕಲ್ಯಾಣಕ್ಕೆ 1.50 ಲಕ್ಷ ಕೋಟಿಗಳನ್ನು ನೀಡಲಾಗುವುದು. ಮೋದಿ ಅವರ ಸರ್ಕಾರ ನಿಮ್ಮ ವಿಮಾ ಯೋಜನೆಗಳ ಹಣವನ್ನು ಕಳ್ಳತನ ಮಾಡಿದೆ. ನೀವು ಬೆಳೆ ವಿಮೆ ಮಾಡಿಸಿರುತ್ತೀರಿ. ಆದರೆ ನಿಮ್ಮ ಬೆಳೆ ನಾಶವಾದರೆ ನಿಮಗೆ ವಿಮೆ ಹಣ ಸಿಗುವುದಿಲ್ಲ. ಹೀಗಾಗಿ ಮುಂದಿನ ಕಾಂಗ್ರೆಸ್ ಸರ್ಕಾರ ರೈತರ ಬೆಳೆ ವಿಮೆಗಾಗಿ 5 ಸಾವಿರ ಕೋಟಿ ರೈತರ ಪರಿಹಾರಕ್ಕಾಗಿ ಮೀಸಲಿಡಲಿದೆ. ನಿಮ್ಮ ಜಮೀನಿಗೆ ನಷ್ಟವಾದರೆ ನಿಮಗೆ ಈ ಹಣ ಸಿಗುತ್ತದೆ. ಹಾಲಿನ ಉತ್ಪಾದಕರಿಗೆ ನೀಡುತ್ತಿರುವ 5 ರೂ. ಪ್ರೋತ್ಸಾಹಧನವನ್ನು 7 ರೂ.ಗೆ ಏರಿಕೆ ಮಾಡಲಾಗದುವುದು. 

ಬಿಜೆಪಿ ಅಭ್ಯರ್ಥಿ ಖರ್ಗೆ ಅವರ ಹತ್ಯೆ ಬಗ್ಗೆ ಮಾತನಾಡಿದರೂ ಮೋದಿ ಅವರು ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಆದರೂ ಅವರು ನಮ್ಮ ಬಗ್ಗೆ ಭಯೋತ್ಪಾದನೆ ಕುರಿತು ಮಾತನಾಡುತ್ತಾರೆ. ಕಾಂಗ್ರೆಸ್ ಸರ್ಕಾರದ ಇಬ್ಬರು ಪ್ರಧಾನಮಂತ್ರಿಗಳು ಓರ್ವ ಮುಖ್ಯಮಂತ್ರಿಗಳು ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಪ್ರಧಾನಮಂತ್ರಿಗಳೇ ನನ್ನ ಕುಟುಂಬದ ಇಬ್ಬರು ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ನೀವು ನನಗೆ ಭಯೋತ್ಪಾದಕ ವಿಚಾರವಾಗಿ ಪಾಠ ಮಾಡುತ್ತೀರಾ? ನೀವು 24 ತಾಸುಗಳ ಕಾಲ ಭದ್ರತೆ ಮಧ್ಯೆ ಅಡಗಿ ಕೂತಿರುತ್ತೀರಿ. ನೀವು ಜನರ ಮಧ್ಯೆ ಬಂದು ಜನರ ಜತೆ ಓಡಾಡಿ. ನಿಮ್ಮ ನಾಯಕ ನಮ್ಮ ನಾಯಕರ ಹತ್ಯೆ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ನೀವು ಉತ್ತರ ನೀಡಲೇಬೇಕು. ಖರ್ಗೆ ಅವರ ಬಗ್ಗೆ ಮಾತನಾಡುವಾಗ ಎಛ್ಚರಿಕೆಯಿಂದ ಮಾತನಾಡಿ. 

ಈಗ ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡಲು ಹಣ ಎಲ್ಲಿಂದ ತರುತ್ತೀರಿ ಎಂದು ನೀವು ಕೇಳಬಹುದು. ಆದರೆ ಒಂದು ಮಾತು ನೆನಪಿರಲಿ, ಬಿಜೆಪಿ ಸರ್ಕಾರ ನಿಮ್ಮಿಂದ 40% ಭ್ರಷ್ಟಾಚಾರದ ಮೂಲಕ ನಿಮ್ಮನ್ನು ಲೂಟಿ ಮಾಡಿದೆ. ಕಾಂಗ್ರೆಸ್ ಪಕ್ಷದ ಸರ್ಕಾರ ಪ್ರಾಮಾಣಿಕ ಸರ್ಕಾರವಾಗಿ ನಿಮ್ಮ ಹಣವನ್ನು ನಿಮಗಾಗಿ ವಿನಿಯೋಗಿಸಲಾಗುವುದು, ಬಿಜೆಪಿಯವರು ಲೂಟಿ ಮಾಡಿರುವ ಅಷ್ಟೂ ಹಣವನ್ನು ಈ ಯೋಜನೆಗಳ ಮೂಲಕ ನಿಮ್ಮ ಜೇಬಿಗೆ ಹಾಕುತ್ತೇವೆ. ನಮ್ಮದು ಶ್ರೀಮಂತರ ಸರ್ಕಾರವಾಗುವುದಿಲ್ಲ, ಬಡವರು, ರೈತರು, ಕಾರ್ಮಿಕರ ಸರ್ಕಾರವಾಗಿ ನಿಮ್ಮ ರಕ್ಷಣೆ ಮಾಡಲಿದೆ. 

ಈ ಸರ್ಕಾರಕ್ಕೆ 40ರ ಸಂಖ್ಯೆ ಬಹಳ ಸೂಕ್ತವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಅವರು ಎಲ್ಲಾ ಹಂತದಲ್ಲೂ 40 ಸಂಖ್ಯೆ ಬಳಸಿದ್ದಾರೆ. ಇದಕ್ಕಾಗಿ ನೀವು ಈ ಚುನಾವಣೆಯಲ್ಲಿ 40 ಸೀಟುಗಳನ್ನು ಮಾತ್ರ ನೀಡಿ. ಕಾಂಗ್ರೆಸ್ ಪಕ್ಷಕ್ಕೆ ನೀವು ಕನಿಷ್ಠ 150 ಸೀಟುಗಳನ್ನು ನೀಡಬೇಕು. ಅದಕ್ಕಿಂತ ಕಡಿಮೆ ಬಹುಮತ ನೀಡಿದರೆ, ಮತ್ತೆ ಶಾಸಕರ ಕಳ್ಳತನ ಮಾಡುವ ಪ್ರಯತ್ನ ಮಾಡುತ್ತಾರೆ. ಈ ಬಾರಿ ಕಾಂಗ್ರೆಸ್ 150 ಕ್ಷೇತ್ರಗಳನ್ನು ಗೆದ್ದೆ ಗೆಲ್ಲುತ್ತದೆ. ನೀವೆಲ್ಲರೂ ಇಲ್ಲಿಗೆ ಬಂದಿರುವುದಕ್ಕೆ ನಿಮಗೆ ಹೃದಯಪೂರ್ವಕ ಧನ್ಯವಾದಗಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News