"ನಾನು ವ್ಯಕ್ತಿಗತವಾಗಿ ಯಾರ ವಿರುದ್ಧ ಟೀಕೆ ಮಾಡುವುದಿಲ್ಲ. ನಮ್ಮ ಹೋರಾಟ ಸಿದ್ಧಾಂತದ ಆಧಾರದ ಮೇಲೆ"

ನಾನು ವ್ಯಕ್ತಿಗತವಾಗಿ ಯಾರ ವಿರುದ್ಧ ಟೀಕೆ ಮಾಡುವುದಿಲ್ಲ.ನಮ್ಮ ಹೋರಾಟ ಸಿದ್ಧಾಂತದ ಆಧಾರದ ಮೇಲೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಸವನಗುಡಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

Written by - Zee Kannada News Desk | Last Updated : Apr 28, 2023, 09:05 PM IST
  • ಮೋದಿ ನಾ ಖಾವೂಂಗಾ ನಾ ಖಾನೆ ದೂಂಗ ಎನ್ನುತ್ತಾರೆ
  • ಆದರೆ ಮೋದಿ ಅವರ ಪಕ್ಕದಲ್ಲಿ ಭ್ರಷ್ಟರು ಇದ್ದಾರೆ
  • ಇಡಿ, ಸಿಬಿಐ, ಐಟಿ ಎಲ್ಲಿ ಹೋಗಿದೆ?
"ನಾನು ವ್ಯಕ್ತಿಗತವಾಗಿ ಯಾರ ವಿರುದ್ಧ ಟೀಕೆ ಮಾಡುವುದಿಲ್ಲ. ನಮ್ಮ ಹೋರಾಟ ಸಿದ್ಧಾಂತದ ಆಧಾರದ ಮೇಲೆ" title=
file photo

ಬೆಂಗಳೂರು: ನಾನು ವ್ಯಕ್ತಿಗತವಾಗಿ ಯಾರ ವಿರುದ್ಧ ಟೀಕೆ ಮಾಡುವುದಿಲ್ಲ.ನಮ್ಮ ಹೋರಾಟ ಸಿದ್ಧಾಂತದ ಆಧಾರದ ಮೇಲೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಸವನಗುಡಿಯಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ ಅವರು ನಿರಂತರವಾಗಿ ಓಡಾಡುತ್ತಾ ಕೆಲಸ ಮಾಡುವ ವ್ಯಕ್ತಿ. ಹೀಗಾಗಿ ಅವರನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ. ನೀವು ಇವರಿಗೆ ಬೆಂಬಲ ನೀಡಿದರೆ, ಕ್ಷೇತ್ರ ಹಾಗೂ ರಾಜ್ಯ ಎರಡಕ್ಕೂ ಒಳ್ಳೆಯದಾಗುತ್ತದೆ. ರಾಜ್ಯ ಸರ್ಕಾರದ ಬಗ್ಗೆ ಎಲ್ಲೆ ಕೇಳಿದರೂ 40% ಕಮಿಷನ್ ಸರ್ಕಾರ ಎಂದು ಹೇಳುತ್ತಾರೆ. ಎಲ್ಲಾ ಕೆಲಸಗಳಿಗೂ ಹಣ ಪಡೆದೇ ಮಾಡುತ್ತಾರೆ. ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಗುತ್ತಿಗೆದಾರರ ಸಂಘ ಈ ಸರ್ಕಾರದಲ್ಲಿ 40% ಕಮಿಷನ್ ಪಡೆಯುತ್ತಿದ್ದು, ಇದರಿಂದ ಗುಣಮಟ್ಟದ ಕೆಲಸ ಆಗುವುದಿಲ್ಲ. ಇದನ್ನು ತನಿಖೆ ಮಾಡಿ ನಿಲ್ಲಿಸಿ ಎಂದು ಪ್ರಧಾನಿಗೆ ಪತ್ರ ಬರೆದರು. ಆದರೆ ಈ ಬಗ್ಗೆ ಪ್ರಧಾನಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಮೋದಿ ನಾ ಖಾವೂಂಗಾ ನಾ ಖಾನೆ ದೂಂಗ ಎನ್ನುತ್ತಾರೆ. ಆದರೆ ಮೋದಿ ಅವರ ಪಕ್ಕದಲ್ಲಿ ಭ್ರಷ್ಟರು ಇದ್ದಾರೆ. ಇಡಿ, ಸಿಬಿಐ, ಐಟಿ ಎಲ್ಲಿ ಹೋಗಿದೆ? ಎಂದು ಪ್ರಶ್ನಿಸಿದರು

ಇದನ್ನೂ ಓದಿ: Karnataka Assembly Election: ಬಿಜೆಪಿ ಸಮಾವೇಶದಲ್ಲಿ ಕನ್ನಡ ನಾಡ ಗೀತೆಗೆ ಅವಮಾನ ತಮಿಳು ನಾಡಗೀತೆ ಪ್ರಸಾರ!

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಪುತ್ರ 8 ಕೋಟಿ ಲಂಚ ಹಣ ಪಡೆದು ಸಿಕ್ಕಿಬಿದ್ದಿದ್ದಾರೆ. ಇವರನ್ನು ಯಾಕೆ ಇಡಿ ಅವರು ಜೈಲಿಗೆ ಹಾಕಿಲ್ಲ ಯಾಕೆ? ಎಂದು ಪ್ರಶ್ನಿಸಿದರು

ಬಿಜೆಪಿ ರಾಹುಲ್ ಗಾಂಧಿ ಅವರನ್ನು ಅನರ್ಹ ಮಾಡಿದೆ. ಆದರೆ ಗುಜರಾತಿನಲ್ಲಿ  ನಾರಾಯಣ ಭಾಯ್ ಕಚಾಡಿಯಾ ಎಂಬ ಸಂಸದ ದಲಿತ ವೈದ್ಯನಿಗೆ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ  3.10 ವರ್ಷ ಶಿಕ್ಷೆ ಆಗಿದ್ದರೂ ಆತನನ್ನು ಯಾವುದೇ ರೀತಿಯ ಅನರ್ಹ ಮಾಡಲಿಲ್ಲ. ಆದರೆ ಇಲ್ಲಿ ರಾಹುಲ ಗಾಂಧಿ ಅವರಿಗೆ ಮಾನಹಾನಿ ಪ್ರಕರಣದಲ್ಲಿ ಗರಿಷ್ಠ ಶಿಕ್ಷೆ ನೀಡಿ 24 ತಾಸಿನಲ್ಲಿ ಅನರ್ಹ ಮಾಡಿ ಮನೆ ಖಾಲಿ ಮಾಡಲು ನೊಟೀಸ್ ನೀಡಿದರು. ಅವರು ಮನೆ ಖಾಲಿ ಮಾಡಿದರು.

ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಸ್ವಂತ ಮನೆ ಇಲ್ಲ. ಅವರಿಗೆ ಬೇಕಾದವರಿಗೆ ವರ್ಷಾನುಗಟ್ಟಲೆ ಅವಕಾಶ ನೀಡಿದ್ದಾರೆ. ಒಬ್ಬರಿಗೆ ಒಂದೊಂದು ಕಾನೂನು ಬಿಜೆಪಿಯ ಆಡಳಿತ ಎಂದು ಹೇಳಿದರು

ಬಿಜೆಪಿ ನಾಯಕರು ಬಂದು ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿ ಮಾಡುತ್ತೇವೆ ಎಂದಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಬಿಜೆಪಿ ಕೊಡುಗೆ ಏನು? ಕಾಂಗ್ರೆಸ್ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಸಾರ್ವಜನಿಕ ಉದ್ದಿಮೆ ಆರಂಭಿಸಿತು. ಕಾಂಗ್ರೆಸ್ ಪಕ್ಷದ ಆಡಳಿತದಿಂದ ಬೆಂಗಳೂರು ಸಿಲಿಕಾನ್ ವ್ಯಾಲಿ ಆಗಿ ವಿಶ್ವದಲ್ಲೇ ಹೆಸರು ಮಾಡಿತು.  ಆದರೂ ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ.ನಾವು ಏನೂ ಮಾಡದೇ ದೇಶದಲ್ಲಿ ರಾಜ್ಯದಲ್ಲಿ ಇಷ್ಟು ಇಂಜಿನಿಯರ್, ಡಾಕ್ಟರ್ ಬರುತ್ತಿರಲಿಲ್ಲ. ಬಿಜೆಪಿ ಬಂದ ಮೇಲೆ ಸಾರ್ವಜನಿಕ ಉದ್ದಿಮೆ ಮುಚ್ಚಿದ್ದಾರೆ ಮಾರುತ್ತಿದ್ದಾರೆ ಎಂದು ಅವರು ಕಿಡಿ ಕಾರಿದರು.

ರಾಜ್ಯದಲ್ಲಿ 2.59 ಲಕ್ಷ ಸರ್ಕಾರಿ ಹುದ್ದೆ ಗಳು ಖಾಲಿ ಇವೆ. ಆದರೂ ಯಾಕೆ ಭರ್ತಿ ಮಾಡುತ್ತಿಲ್ಲ. ಇದೆಲ್ಲಾ ಮಾಡಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ಮಾಡುತ್ತಿಲ್ಲ. ನಿರುದ್ಯೋಗ ಸಮಸ್ಯೆ ಗರಿಷ್ಠ ಮಟ್ಟಕ್ಕೆ ಏರಿದೆ. ಪ್ರತಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಎಲ್ಲಾ ವಸ್ತುಗಳ ಮೇಲೆ ಜಿಎಸ್ ಟಿ ಹಾಕಿದ್ದಾರೆ. ಗಾಳಿ ಒಂದು ಬಿಟ್ಟು ಉಳಿದ ಎಲ್ಲದಕ್ಕೂ ಜಿಎಸ್ ಟಿ ವಿಧಿಸುತ್ತಾರೆ. ಇದಕ್ಕೂ ಮುಂದೆ ಜಿಎಸ್ ಟಿ ವಿಧಿಸಬಹುದು.ಇವರಿಗೆ ಜನರ ಬಗ್ಗೆ ಕಾಳಜಿ ಇಲ್ಲ. ಕೇವಲ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗ ಆಹಾರ ಕೊರತೆ ಇದ್ದ ದೇಶವನ್ನು ಆಹಾರ ಸ್ವಾವಲಂಬನೆ ದೇಶವಾಗಿ ಮಾಡಿದ್ದೇವೆ. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ ಮಾಡಿದ್ದು ಕಾಂಗ್ರೆಸ್ ಎಂದು ಅವರು ಹೇಳಿದರು.

ಬಿಜೆಪಿ ಯಾವುದೇ ಕೆಲಸ ಮಾಡದೇ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ವರ್ಷಕ್ಕೆ  2 ಕೋಟಿ ಉದ್ಯೋಗ, ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇವೆ, ರೈತರ ಆದಾಯ ಡಬಲ್, ಉಚಿತ ಸಿಲಿಂಡರ್ ನೀಡುತ್ತೇವೆ ಎಂದರು. ಯಾವುದನ್ನೂ ಮಾಡಲಿಲ್ಲ. ಕೇವಲ ಮೋಸ, ಸುಳ್ಳು, ವಂಚನೆಯಿಂದ ಮತ ಪಡೆದು ನಮ್ಮನ್ನು ಪ್ರಶ್ನಿಸುತ್ತಾರೆ ಎಂದರು

ಇದನ್ನೂ ಓದಿ: ಉಮಂಗ್ ಆ್ಯಪ್ ಮೂಲಕ ಓಪನ್‌ ಮಾಡಬಹುದು ಇಪಿಎಫ್ ಪಾಸ್​ಬುಕ್

ನಾನು ವ್ಯಕ್ತಿಗತವಾಗಿ ಯಾರ ವಿರುದ್ಧ ಟೀಕೆ ಮಾಡುವುದಿಲ್ಲ. ನಮ್ಮ ಹೋರಾಟ ಸಿದ್ಧಾಂತದ ಆಧಾರದ ಮೇಲೆ. ದೇಶ ಹಾಗೂ ರಾಜ್ಯದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ವೆಂಕಟೇಶ್ ಅವರಿಗೆ ಮತ ನೀಡಬೇಕು. ಬಸವನಗುಡಿ ಮತದಾರರು ಬಹಳ ಪ್ರಜ್ಞಾವಂತ ಮತದಾರರು. ಈ ಬಾರಿ ವೆಂಕಟೇಶ್ ಅವರನ್ನು ಆರಿಸಿ. ಕೆಲಸ ಮಾಡದಿದ್ದರೆ ಮುಂದಿನ ಬಾರಿ ತಿರಸ್ಕರಿಸಿ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಾಗ ಅಭಿವೃದ್ಧಿ ಆಗಿತ್ತು. ನಂತರ ಯಾವುದೇ ಕೆಲಸ ಆಗಿಲ್ಲ. ಇನ್ನು ರಸ್ತೆ ಕಳಪೆ ಕಾಮಗಾರಿ ಮಾಡಿ ಹಣ ಮಾಡುತ್ತಾರೆ. ಇವರಿಂದ ದೇಶ ರಾಜ್ಯ ಉದ್ಧಾರ ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3Lw

 

Trending News