ಸೋಮಣ್ಣ-ವಿಜಯೇಂದ್ರ ಮತ ಶಿಕಾರಿ: ಸಿದ್ದು- ಕಾಂಗ್ರೆಸ್ ವಿರುದ್ಧ ವಾಗ್ದಾಳಿ

Karnataka assembly Election: ಸಚಿವ ವಿ. ಸೋಮಣ್ಣ ಇಂದು ಮಾರ್ನಿಂಗ್ ವಾಕ್ ನಿಂದಲೇ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದರು‌. ಚಾಮರಾಜನಗರದ ವಿವಿಧ ಬಡಾವಣೆಗಳು, ಟೀ‌ ಅಂಗಡಿಗಳಿಗೂ ಎಡತಾಕಿದ ಸೋಮಣ್ಣ ತನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.

Written by - Yashaswini V | Last Updated : Apr 21, 2023, 06:05 PM IST
  • ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ- ಇದೆ ನನಗು ಅವರಿಗೂ ಇರೋ ವ್ಯತ್ಯಾಸ.
  • ಅವರು ಈಗ ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರೀನೂ ಅಲ್ಲ.
  • ನಾನು ಅಭ್ಯರ್ಥಿ , ಅವರೂ ಅಭ್ಯರ್ಥಿ ಅವನ್ಯಾರು, ಇವನ್ಯಾರು ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು ಎಂದು ತಿರುಗೇಟು ಕೊಟ್ಟ ಸೋಮಣ್ಣ
ಸೋಮಣ್ಣ-ವಿಜಯೇಂದ್ರ ಮತ ಶಿಕಾರಿ: ಸಿದ್ದು- ಕಾಂಗ್ರೆಸ್ ವಿರುದ್ಧ ವಾಗ್ದಾಳಿ title=

Karnataka assembly Election 2023: ಬಿಜೆಪಿ ಹಿರಿಯ ನಾಯಕ, ಸಚಿವವ ವಿ. ಸೋಮಣ್ಣ ಮುಂಜಾನೆಯಿಂದಲೇ ಚಾಮರಾಜನಗರದಲ್ಲಿ ಮತಬೇಟೆ ನಡೆಸಿದರೇ ಬಿಜೆಪಿ ಯುವನಾಯಕ ಬೆಳಗ್ಗೆಯಿಂದ ಸಂಜೆ ವರೆಗೆ ಹನೂರು, ಕೊಳ್ಳೇಗಾಲ ಕ್ಷೇತ್ರದಲ್ಲಿ ಮತಶಿಕಾರಿ ನಡೆಸಿದರು. ಇಬ್ಬರು ನಾಯಕರ ಮಿಂಚಿ‌ನ ಸಂಚಾರದ ರಿಪೋರ್ಟ್ ಇಲ್ಲಿದೆ... 

ಮುಂಜಾನೆಯೇ ಮತಬೇಟೆ-ಮುಖಂಡರ ಭೇಟಿ: 
ಸಚಿವ ವಿ. ಸೋಮಣ್ಣ ಇಂದು ಮಾರ್ನಿಂಗ್ ವಾಕ್ ನಿಂದಲೇ ಚಾಮರಾಜನಗರದಲ್ಲಿ ಮತಬೇಟೆ ಆರಂಭಿಸಿದರು‌. ಚಾಮರಾಜನಗರದ ವಿವಿಧ ಬಡಾವಣೆಗಳು, ಟೀ‌ ಅಂಗಡಿಗಳಿಗೂ ಎಡತಾಕಿದ ಸೋಮಣ್ಣ ತನಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡರು,  ಉಪ್ಪಾರ ಸೇರಿದಂತೆ ವಿವಿಧ ಸಮುದಾಯ ಮುಖಂಡರ ಮನೆಗೆ ಭೇಟಿ ನೀಡಿ ತಮ್ಮದೇ ಧಾಟಿಯಲ್ಲಿ ಚುನಾವಣೆ ಎದುರಿಸುತ್ತಿದ್ದಾರೆ ಸೋಮಣ್ಣ.

ಸಿದ್ದರಾಮಯ್ಯ ವಿರುದ್ಧ ಎದುರಾಳಿ ಸೋಮಣ್ಣ ಕೆಂಡ: 
ಚಾಮರಾಜನಗರದಲ್ಲಷ್ಟೇ ಅಲ್ಲದೇ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿರುವ ಸಚಿವ ವಿ. ಸೋಮಣ್ಣ ಸಿದ್ದು ವಿರುದ್ಧ ಇಂದು ಸಹ ವಾಗ್ಧಾಳಿಯನ್ನು ಮುಂದುವರೆಸಿದರು. 

ಇದನ್ನೂ ಓದಿ- BSY Lucky Car: ಪುತ್ರನ ಗೆಲುವಿಗೆ BSY ಬಳಸಿದ ಕಾರಿನ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ

ಸೋಮಣ್ಣ ಯಾರು ಎಂದಿದ್ದ ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಸಚಿವರು, 2006 ಚಾಮುಂಡೇಶ್ವರಿ ಚುನಾವಣೆಯಲ್ಲಿ ಸಿದ್ದರಾಮಯ್ಯಗೋಸ್ಕರ ಒದೆ ತಿಂದಿದ್ದೇನೆ, ಬರಿಮೈಯಲ್ಲಿ ದೇವಾಲಪುರದಿಂದ ಮೈಸೂರಿಗೆ ಹೋಗಿದ್ದೇನೆ, ನನ್ನ ಕಾರಿನ ಗ್ಲಾಸ್ ಒಡೆದಿದ್ದರು ಪ್ಯಾಂಟ್ ಹರಿದು ಹಾಕಿದ್ದರು ಆವತ್ತು ನನ್ನ ಸಮಾಜ ಎದುರು ಹಾಕಿಕೊಂಡು ಅವರಿಗೋಸ್ಕರ ಕೆಲ್ಸ ಮಾಡಿದ್ದೆ. ಇದೆಲ್ಲಾ ಸಿದ್ದರಾಮಯ್ಯ ಸಾಹೇಬರ ತಲೇಲಿ ಇಲ್ಲ ಎಂದು ಆಕ್ರೋಶ ಹೊರಹಾಕಿದರು.

ನಾನು ಸಾಹೇಬ್ರೆ ಅಂತೀನಿ ಅವರು ಏಕ ವಚನದಲ್ಲಿ ಮಾತನಾಡ್ತಾರೆ, ಇದೆ ನನಗು ಅವರಿಗೂ ಇರೋ ವ್ಯತ್ಯಾಸ. ಅವರು ಈಗ  ವಿರೋಧ ಪಕ್ಷದ ನಾಯಕರೂ ಅಲ್ಲ ನಾನು ಮಂತ್ರೀನೂ ಅಲ್ಲ. ನಾನು ಅಭ್ಯರ್ಥಿ , ಅವರೂ ಅಭ್ಯರ್ಥಿ ಅವನ್ಯಾರು, ಇವನ್ಯಾರು  ಅನ್ನೋ ಡೈಲಾಗ್ ಕಡಿಮೆ ಮಾಡಿದ್ರೆ ಒಳ್ಳೇದು ಎಂದು ತಿರುಗೇಟು ಕೊಟ್ಟರು.

ಹನೂರು, ಕೊಳ್ಳೇಗಾಲದಲ್ಲಿ ಮರಿಹುಲಿ ಮಿಂಚಿನ ಸಂಚಾರ:
ಹಳೇ ಮೈಸೂರು ಭಾಗದಲ್ಲಿ ಇಂದಿನಿಂದ ಪ್ರಚಾರಕ್ಕೆ ಧುಮುಕಿರುವ ಯುವನಾಯಕ ಬಿ.ವೈ. ವಿಜಯೇಂದ್ರ ಹನೂರು, ಕೊಳ್ಳೇಗಾಲ, ಯಳಂದೂರು, ಸಂತೇಮರಹಳ್ಳಿ ಹಾಗೂ ಉಮ್ಮತ್ತೂರು ಗ್ರಾಮಗಳಲ್ಲಿ ರೋಡ್ ಶೋ ನಡೆಸಿದರು.

ಇದನ್ನೂ ಓದಿ- Amit Shah Road Show: ದೇವನಹಳ್ಳಿಯಲ್ಲಿ ಅಮಿತ್ ಶಾ ರೋಡ್ ಶೋ ಹೇಗಿತ್ತು ನೋಡಿ

ಬಿಎಸ್ ವೈ ರಟ್ಟೆ ಗಟ್ಟಿ ಇದೆ ಎಂದು ಗುಡುಗಿದ ವಿಜಯೇಂದ್ರ: 
ಲಿಂಗಾಯತ ನಾಯಕರನ್ನು ತುಳಿಯುತ್ತಿದ್ದಾರೆ, ಬಿಎಸ್ ವೈ ಅವರನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಕಾಂಗ್ರೆಸ್ ಆರೋಪಗಳಿಗೆ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿ, ಯಡಿಯೂರಪ್ಪ ಅವರ ರಟ್ಟೆ ಇನ್ನೂ ಗಟ್ಟಿಯಾಗಿದೆ. ವೀರಶೈವ ಲಿಂಗಾಯತರನ್ನ ಕಾಂಗ್ರೆಸ್ ಯಾವ ರೀತಿ ನಡೆಸಿಕೊಂಡಿದೆ ಅಂತ ತತ್ವ ಜನತೆಗೆ ಗೊತ್ತು,  ಚುನಾವಣೆ ಸಂದರ್ಭದಲ್ಲಿ ಯಾರೋ ಒಬ್ಬರು ಕಾಂಗ್ರೆಸ್ ಗೆ ಬಂದಿದ್ದಾರೆ ಅಂತ ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ ಆಗಿದೆ ಅಂತ ಬಿಂಬಿಸಲು ಹೊರಟಿದ್ದಾರೆ. ಆದ್ರೆ ಅದನ್ನ ಯಾರೂ ಒಪ್ಪಲ್ಲ ಎಂದರು.

81ನೇ ವರ್ಷದಲ್ಲೂ ಯಡಿಯೂರಪ್ಪ ಕೆಲಸ ಮಾಡ್ತಿದಾರೆ, ಅವರ ರಟ್ಟೆ ಇನ್ನು ಗಟ್ಟೆಯಿದೆ, ಬಿಜೆಪಿ ಅಧಿಕಾರಕ್ಕೆ ಬರೋ ತನಕ ಸುಮ್ನೆ ಕುರೋ ವ್ಯಕ್ತಿ ಅಲ್ಲ. ಯಡಿಯೂರಪ್ಪ ಒಂದು ಹೆಜ್ಜೆ ಮುಂದೆ ಇಟ್ಟರೆ ಅದರ ಪರಿಣಾಮ ಏನಾಗುತ್ತೆ ಅನ್ನೋದು ವಿರೋಧ ಪಕ್ಷದವರಿಗೆ ಗೊತ್ತಿದೆ. ಬಿಜೆಪಿಯ ಹಿರಿಯರು ಒಟ್ಟಾಗಿ ಕೆಲಸ ಮಾಡ್ತಿದಾರೆ ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ಕೊಟ್ಟರು.

ಒಟ್ಟಿನಲ್ಲಿ ಒಂದುಕಡೆ ಸೋಮಣ್ಣ ಮತ್ತೊಂದು ಕಡೆ ವಿಜಯೇಂದ್ರ ಅವರ ಪ್ರಚಾರದಿಂದ ಬಿಜೆಪಿ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿದ್ದು ಚುನಾವಣಾ ಕಾವು ಹೆಚ್ಚಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News