ಕಲೆಕ್ಷನ್ ಬಜೆಟ್‌ನಲ್ಲಿ ದ್ವೇಷ ರಾಜಕಾರಣ!: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ!

Karnataka Budget 2023: ಇದು ಕಲೆಕ್ಷನ್ ಬಜೆಟ್ ಎಂದು ಆರೋಪಿಸಿರುವ ಬಿಜೆಪಿ, 'ಮಿಸ್ಟರ್ ಸಿದ್ದರಾಮಯ್ಯನವರೇ, ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಅಂದರೆ ಇದೇನಾ..? ಕಲೆಕ್ಷನ್ ಬಜೆಟ್‌ನಲ್ಲಿ ದ್ವೇಷ ರಾಜಕಾರಣ..!’ ಅಂತಾ ಕಿಡಿಕಾರಿದೆ.

Written by - Puttaraj K Alur | Last Updated : Jul 8, 2023, 02:00 PM IST
  • ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ಕಿಡಿಕಾರಿದೆ
  • ಮಿಸ್ಟರ್ ಸಿದ್ದರಾಮಯ್ಯನವರೇ ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಅಂದರೆ ಇದೇನಾ?
  • ಕಲೆಕ್ಷನ್ ಬಜೆಟ್‌ನಲ್ಲಿ ದ್ವೇಷ ರಾಜಕಾರಣವೆಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಬಿಜೆಪಿ
ಕಲೆಕ್ಷನ್ ಬಜೆಟ್‌ನಲ್ಲಿ ದ್ವೇಷ ರಾಜಕಾರಣ!: ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆಕ್ರೋಶ! title=
ಬಜೆಟ್ ವಿರುದ್ಧ ಬಿಜೆಪಿ ಕಿಡಿಕಾರಿದೆ!

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ 2023-24ನೇ ಸಾಲಿನ ರಾಜ್ಯ ಬಜೆಟ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಇದು ಕಲೆಕ್ಷನ್ ಬಜೆಟ್ ಎಂದು ಆರೋಪಿಸಿರುವ ಬಿಜೆಪಿ, ಮಿಸ್ಟರ್ ಸಿದ್ದರಾಮಯ್ಯನವರೇ, ‘ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು’ ಅಂದರೆ ಇದೇನಾ..? ಕಲೆಕ್ಷನ್ ಬಜೆಟ್‌ನಲ್ಲಿ ದ್ವೇಷ ರಾಜಕಾರಣ..!’ ಅಂತಾ ಕಿಡಿಕಾರಿದೆ.

APMC ಕಾಯ್ದೆ ರದ್ದು, ಪಠ್ಯಪರಿಷ್ಕರಣೆ ಕೈ ಬಿಟ್ಟು ಎಡಬಿಡಂಗಿ ಸಿದ್ಧಾಂತದ ಹೇರಿಕೆ, NEP ರದ್ದುಗೊಳಿಸಿ ಶಿಕ್ಷಣ ವ್ಯವಸ್ಥೆಯೇ ಅಯೋಮಯ, ಗೋ ರಕ್ಷಣೆಗಿದ್ದ ಜಿಲ್ಲೆಗೊಂದು ಗೋ ಶಾಲೆ ಯೋಜನೆ ರದ್ದು, ವಿವೇಕ ಶಾಲೆ ಅಭಿವೃದ್ಧಿ ಯೋಜನೆ ರದ್ದು, ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆಗೂ ತಿಲಾಂಜಲಿ, ಮಹಿಳೆಯರ ಸ್ವಸಹಾಯ ಸಂಘದ ಸಹಾಯಧನ ಬಂದ್, ಭೂಸಿರಿ ಯೋಜನೆಯಡಿ ನೀಡುವ 10,000 ರೂ. ಕಟ್ ಮತ್ತು ದೇಶ ಸೇವೆಗಾಗಿರುವ ಆಗ್ನಿವೀರ್ ತರಬೇತಿ ಯೋಜನೆ ರದ್ದು! ಇದು ಕಲೆಕ್ಷನ್ ಬಜೆಟ್‌ನಲ್ಲಿರುವ ದ್ವೇಷ ರಾಜಕಾರಣವಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಗಜೇಂದ್ರಗಡದಲ್ಲಿ ಬೀದಿ ನಾಯಿಗಳ ದಾಳಿ: ಬಾಲಕನಿಗೆ ಗಂಭೀರ ಗಾಯ

‘ಅಲ್ಪಸಂಖ್ಯಾತ ನಿರುದ್ಯೋಗಿಗಳಿಗೆ ಬ್ಯಾಂಕ್ ಸಾಲದ ಜತೆ 1 ಲಕ್ಷ ರೂ. ಸಹಾಯ, ಅಲ್ಪಸಂಖ್ಯಾತ ಯುವ ಜನರಿಗೆ ಕೌಶಲ್ಯ ತರಬೇತಿ, ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 360 ಕೋಟಿ ರೂ., 54 ಕೋಟಿ ರೂ.ವೆಚ್ಚದಲ್ಲಿ 126 ಶಾದಿ ಮಹಲ್ ನಿರ್ಮಾಣ, ವಕ್ಫ್ ಮಂಡಳಿ ಆಸ್ತಿಗಳ ರಕ್ಷಣೆಗೆ 50 ಕೋಟಿ ರೂ. ಅನುದಾನ ಮತ್ತು ಬೆಂಗಳೂರಿನ ಹಜ್ ಭವನದಲ್ಲಿ ವಸತಿ ಸಹಿತ ವ್ಯವಸ್ಥೆ! ಇದು ಕಲೆಕ್ಷನ್‌ ಬಜೆಟ್‌ನಲ್ಲಿರುವ ತುಷ್ಟೀಕರಣ ರಾಜಕೀಯದ ಅತಿರೇಕ’ವೆಂದು ಬಿಜೆಪಿ ಕುಟುಕಿದೆ.

‘ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು, ‘ಈಗಾಗಲೇ ಬೆಲೆ ಏರಿಕೆ ಮತ್ತು ಬರದಿಂದ ಕಂಗೆಟ್ಟಿರುವ ರಾಜ್ಯದ ಜನತೆಯ ಮೇಲೆ ತೆರಿಗೆ ಎಂಬ ಗದಾಪ್ರಹಾರ! ನಡೆಸಿದೆ’ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ: ಮಳೆಗಾಗಿ ವರುಣ ದೇವನಿಗೆ ಮೊರೆ ಹೋದ ಕೃಷಿ ಸಚಿವ ಚೆಲುವರಾಯಸ್ವಾಮಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News