ನೂರು ದಿನದೊಳಗೆ ೧೦೦ ಪರ್ಸೆಂಟ್ ಸರ್ಕಾರ : ಸುನಿಲ್ ಕುಮಾರ್

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ತುಂಬುವಷ್ಟರಲ್ಲಿ ೧೦೦ ಪರ್ಸೆಂಟ್ ಸರ್ಕಾರವಾಗಲಿದೆ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

Written by - Prashobh Devanahalli | Edited by - Manjunath N | Last Updated : Aug 10, 2023, 06:26 PM IST
  • ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸರ್ಕಾರದ ವಿರುದ್ಧ ಬಿಡುಗಡೆಯಾದ ಪ್ರತಿ ದಾಖಲೆಯನ್ನೂ ನಕಲಿ ಎಂದು‌ ನುಣುಚಿಕೊಂಡಿದ್ದೀರಿ
  • ಈ ಆತ್ಮಹತ್ಯೆಯೂ ನಕಲಿ ಎಂದು ಹೇಳುತ್ತೀರಾ ? ಎಂದು‌ ಪ್ರಶ್ನಿಸಿದ್ದಾರೆ
  • ಗುತ್ತಿಗೆದಾರರು ನಿಮ್ಮ‌ಸರ್ಕಾರದ ವಿರುದ್ಧ ಹದಿನೈದು ಪರ್ಸೆಂಟ್ ಆರೋಪ ಮಾಡಿದ್ದಾರೆ
 ನೂರು ದಿನದೊಳಗೆ ೧೦೦ ಪರ್ಸೆಂಟ್ ಸರ್ಕಾರ : ಸುನಿಲ್ ಕುಮಾರ್ title=
file photo

ಬೆಂಗಳೂರು : ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೂರು ದಿನ ತುಂಬುವಷ್ಟರಲ್ಲಿ ೧೦೦ ಪರ್ಸೆಂಟ್ ಸರ್ಕಾರವಾಗಲಿದೆ ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ಗುತ್ತಿಗೆದಾರ ಗೌತಮ ಆತ್ಮಹತ್ಯೆ‌ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಅಧಿಕಾರಕ್ಕೆ ಬಂದ ಮರು ದಿನದಿಂದಲೇ ಅಧಿಕೃತವಾಗಿ ಭ್ರಷ್ಟಾಷಾರದ ಅಂಗಡಿ ಬಾಗಿಲು ತೆರೆದ ಕಾಂಗ್ರೆಸಿಗರು ಆರೋಪಗಳೆಲ್ಲ ನಕಲಿ ಎಂದು ತಪ್ಪಿಸಿಕೊಳ್ಳುತ್ತಿದ್ದರು.ಈ ಸರ್ಕಾರದ ಧನದಾಹಕ್ಕೆ ಈಗ ಗುತ್ತಿಗೆದಾರ ಗೌತಮ್ ಪ್ರಾಣ ತೆತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: 0 ವರ್ಷ ಮೇಲ್ಪಟ್ಟ ನಂತರ ತೂಕ ಇಳಿಕೆಗೆ ಈ ಅಂಶಗಳೇ ಸಹಾಯವಾಗುವುದು! ಟ್ರೈ ಮಾಡಿ ನೋಡಿ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಸರ್ಕಾರದ ವಿರುದ್ಧ ಬಿಡುಗಡೆಯಾದ ಪ್ರತಿ ದಾಖಲೆಯನ್ನೂ ನಕಲಿ ಎಂದು‌ ನುಣುಚಿಕೊಂಡಿದ್ದೀರಿ. ಈ ಆತ್ಮಹತ್ಯೆಯೂ ನಕಲಿ ಎಂದು ಹೇಳುತ್ತೀರಾ ? ಎಂದು‌ ಪ್ರಶ್ನಿಸಿದ್ದಾರೆ.ಗುತ್ತಿಗೆದಾರರು ನಿಮ್ಮ‌ಸರ್ಕಾರದ ವಿರುದ್ಧ ಹದಿನೈದು ಪರ್ಸೆಂಟ್ ಆರೋಪ ಮಾಡಿದ್ದಾರೆ. ಅಧಿಕಾರಕ್ಕೆ ಬಂದು‌ ನೂರು ದಿನ ಪೂರೈಸುವುದರೊಳಗೆ ಇಷ್ಟೊಂದು ಆರೋಪ. ಇನ್ನೆಷ್ಟು ಗುತ್ತಿಗೆದಾರರನ್ನು ಸಾವಿನ ದವಡೆಗೆ ನೂಕಲು ನೀವು ಯೋಜಿಸಿದ್ದೀರಿ. ಸರ್ಕಾರ ನೂರು ದಿನ ಪೂರೈಸುವ ಹೊತ್ತಿಗೆ ನಿಮ್ಮದು ೧೦೦% ಭ್ರಷ್ಟ ಸರ್ಕಾರವಾಗುವುದರಲ್ಲಿ ಅನುಮಾನವಿಲ್ಲ ಎಂದು ಟೀಕಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News