26ನೇ ರಾಷ್ಟ್ರೀಯ ಯುವಜನೋತ್ಸವ : ಯುವಜನೋತ್ಸವದ ಜನಪ್ರಿಯತೆಗೆ ದೇಸಿಯ ಕ್ರೀಡೆಗಳ ಮೆರಗು

 

Written by - Zee Kannada News Desk | Last Updated : Jan 11, 2023, 11:56 PM IST
  • ನರೇಂದ್ರ ಮೋದಿ ಅವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ
  • ಯುವಸಮೂಹವನ್ನು ಉದ್ದೇಶಿಸಿ ಪ್ರೇರಕ ಭಾಷಣವನ್ನು ಅವರು ಮಾಡಲಿದ್ದಾರೆ
  • ಐದು ದಿನಗಳ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರೀತಿಯ ಕಲೆ, ನೃತ್ಯ ಮತ್ತು ಶಾರೀರಿಕ ಪ್ರದರ್ಶನಗಳು ನಡೆಯಲಿವೆ
26ನೇ ರಾಷ್ಟ್ರೀಯ ಯುವಜನೋತ್ಸವ : ಯುವಜನೋತ್ಸವದ ಜನಪ್ರಿಯತೆಗೆ ದೇಸಿಯ ಕ್ರೀಡೆಗಳ ಮೆರಗು title=

ಧಾರವಾಡ : ಭಾರತ ರಾಷ್ಟ್ರ ಒಂದೇ ಆದರೂ ಹಲವು ಕ್ಷೇತ್ರಗಳಲ್ಲಿ ವಿಭಿನ್ನತೆ ಮತ್ತು ವೈಶಿಷ್ಟ್ಯತೆಯನ್ನು ಹೊಂದಿದೆ. ಭಾರತ ತನ್ನದೇ ಆದ ವಿಶೇಷತೆಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ಅನೇಕ ಆಧುನಿಕ ಹಾಗೂ ಪಾಶ್ಚಿಮಾತ್ಯ ಆಟಗಳ ಮಧ್ಯದಲ್ಲೂ ಭಾರತದ ದೇಸಿಯ ಕ್ರೀಡೆಗಳು ತಮ್ಮ ಜನಪ್ರಿಯತೆ ಹಾಗೂ ಪಾವಿತ್ರ್ಯತೆಯನ್ನು ಇಂದಿಗೂ ಉಳಿಸಿಕೊಂಡು ಬಂದಿವೆ.

ಶಿಕ್ಷಣದ ಕಾಶಿ ಧಾರವಾಡದಲ್ಲಿ ಜನವರಿ 12 ರಿಂದ 16 ರ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ದೇಶಿಯ ಕ್ರೀಡೆಗಳ ಪ್ರದರ್ಶನಕ್ಕೆ ಅವಕಾಶ ನೀಡಿ ಸಾರ್ವಜನಿಕರಿಗೆ ಆಸಕ್ತಿ ಹುಟ್ಟಿಸಲು ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಬಾದಾಮಿಯಿಂದಲೇ ಸ್ಪರ್ಧಿಸಲು ವಿದೇಶದಲ್ಲಿರುವ ಸಿದ್ದು ಅಭಿಮಾನಿ ಮನವಿ

ಜನವರಿ 13, 14, 15 ರಂದು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1-30 ರ ವರೆಗೆ ಮತ್ತು ಮಧ್ಯಾಹ್ನ 2-30 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ರೀತಿಯ ಮನರಂಜನಾತ್ಮಕ ಹಾಗೂ ಶಾರೀರಿಕ ಬೆಳವಣಿಗೆಗೆ ಸಹಾಯವಾಗುವ ಸುಮಾರು ಏಳು ತರಹದ ದೇಸಿಯ ಕ್ರೀಡೆಗಳನ್ನು ಆಡಿಸಲಾಗುತ್ತಿದೆ. ಈ ಏಳು ಕ್ರೀಡೆಗಳು ಏಳು ರಾಜ್ಯದ ರಾಜ್ಯ ಆಟಗಳಾಗಿವೆ.

ಅವುಗಳಲ್ಲಿ ಪ್ರಮುಖವಾಗಿ ಕೇರಳ ರಾಜ್ಯದ ಕಲರಿಪಯಟ್ಟು (15 ಜನರಿರುವ ಮಾರ್ಷಲ್ ಆಟ), ಮಹಾರಾಷ್ಟ್ರದ ಮಲ್ಲಕಂಬ (15 ಜನರಿರುವ ಜಿಮ್ನಾಸ್ಟಿಕ್) ಮತ್ತು ಸಿಲಂಬಂ (7 ಜನರಿರುವ ಮಾರ್ಷಲ್ ಆಟ), ಮಣಿಪುರ ರಾಜ್ಯದ ಮುಖನಾ ಮತ್ತು ತಂಗಟಾ (19 ಜನರಿರುವ ಕುಸ್ತಿ ಮತ್ತು ಮಾರ್ಷಲ್ ಆಟ), ತೆಲಂಗಾಣ ರಾಜ್ಯದ ಕಬಡ್ಡಿ ಆಟ (15 ಜನರಿರುವ ಕಬಡ್ಡಿ ಆಟ), ಆಸ್ಸಾಂ ರಾಜ್ಯದ ಖೊಂಲೈನೈ (15 ಜನರಿರುವ ಕಬ್ಬಡ್ಡಿ ತರಹ ಆಟ), ಪಂಜಾಬ ರಾಜ್ಯದ ಘಾಟಕಾ (15 ಜನರಿರುವ ಯುದ್ಧಕಲೆ) ಒಟ್ಟು 101 ಜನ ತರಬೇತಿ ಹೊಂದಿದ ಪಟುಗಳು ಪ್ರದರ್ಶನ ನೀಡಲಿದ್ದಾರೆ.

ಇದನ್ನೂ ಓದಿ: "ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಬಿಜೆಪಿ ಪಕ್ಷ ಮಕ್ಮಲ್‌ ಟೋಪಿ ಹಾಕಿದೆ"

ಸಾರ್ವಜನಿಕರಿಗೆ ಅವಕಾಶವಿರುವ ದೇಸಿಯ ಕ್ರೀಡೆಗಳು: ಯುವಜನೋತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಿ ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶವಾಗುವಂತೆ ದೇಸಿಯ ಆಟಗಳಾದ ಹಗ್ಗ ಜಗ್ಗಾಟ, ಕಲ್ಲುಗುಂಡು ಎತ್ತುವುದು, ಲಗೋರಿ, ಗಿಲ್ಲಿದಾಂಡು, ಬುಗುರಿ ಆಟ, ಗೋಲಿ ಆಟ ಆಯೋಜಿಸಲಾಗಿದೆ.

ಸಾರ್ವಜನಿಕರು ಉಚಿತವಾಗಿ ಈ ಆಟಗಳಲ್ಲಿ ಭಾಗವಹಿಸಲು ಅವಕಾಶವಿದೆ.

ಜ. 12 ರ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ವೇದಿಕೆ ಮುಂದೆ ಪ್ರದರ್ಶನ: ಅವಳಿ ನಗರದಲ್ಲಿ ಹಬ್ಬದ ವಾತಾವರಣ ಮೂಡಿಸಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ಜ.12 ರಂದು ಸಂಜೆ 4 ಗಂಟೆಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ. ಯುವಸಮೂಹವನ್ನು ಉದ್ದೇಶಿಸಿ ಪ್ರೇರಕ ಭಾಷಣವನ್ನು ಅವರು ಮಾಡಲಿದ್ದಾರೆ.

ಐದು ದಿನಗಳ ರಾಷ್ಟ್ರೀಯ ಯುವಜನೋತ್ಸವದಲ್ಲಿ ವಿವಿಧ ರೀತಿಯ ಕಲೆ, ನೃತ್ಯ ಮತ್ತು ಶಾರೀರಿಕ ಪ್ರದರ್ಶನಗಳು ನಡೆಯಲಿವೆ. ಪ್ರಧಾನಮಂತ್ರಿಗಳ ಉದ್ಘಾಟನಾ ಕಾರ್ಯಕ್ರಮದ ನಂತರ ವೇದಿಕೆ ಮುಂಭಾಗದಲ್ಲಿ ಪ್ರಧಾನಮಂತ್ರಿಗಳ ಮುಂದೆ ಮಹಾರಾಷ್ಟ್ರದ ಅಹಮದನಗರ ಜಿಲ್ಲೆಯ ಸಾಮನಗರದ 19 ಜನ ಯೋಗ ಪಟುಗಳಿಂದ ಯೋಗ ಪ್ರದರ್ಶನವಾಗಲಿದೆ. ಮತ್ತು ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಉಜ್ಜಯಿನಿಯ 16 ಜನ ಯುವಪಟುಗಳು ಮಲ್ಲಕಂಬ ಪ್ರದರ್ಶನ ನಡೆಯಲಿದೆ.

ದೇಸಿಯ ಕ್ರೀಡೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಎ.ಸಿ. ರಮೇಶ (9480886539), ಮಂಜುನಾಥ .ಎಂ.ಆರ್.(9448765365), ಸದಾನಂದ ಅಮರಾಪುರ (9986250077) ಸಂಪರ್ಕಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News