ರಾಮಮಂದಿರಕ್ಕಾಗಿ 35 ವರ್ಷದ ಸೇವೆ: ಇಲ್ಲೊಬ್ಬಳು ಆಧುನಿಕ ಶಬರಿ

ಅನ್ನಪೂರ್ಣ ನಿರಂಜನ್ ಅವರು ಬರೆದಂತ 16 ಲಕ್ಷಕ್ಕೂ ಅಧಿಕ ರಾಮ ನಾಮ ಜಪಗಳುಳ್ಳ ಪುಸ್ತಕಗಳನ್ನು ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಎಂ.ಎಲ್.ಸಿ ಪಿ.ಹೆಚ್.ಪೂಜಾರ್, ಬೆಳಗಾವಿ ವಿಭಾಗದ ಬಿಜೆಪಿ ಸಹಪ್ರಭಾರಿ ಬಸವರಾಜ ಯಂಕಂಚಿ ಸಾಥ್ ನೀಡಿದ್ದಾರೆ.

Written by - Yashaswini V | Last Updated : Jan 16, 2024, 11:08 AM IST
  • ಅನ್ನಪೂರ್ಣ ಅವರು ಶ್ರೀರಾಮ ಜಪ ಬರೆಯಲು ಪ್ರಾರಂಭವಾದಾಗಿನಿಂದ ತಮಗೆ ಯಾವುದೇ ರೀತಿಯ ಸಮಸ್ಯೆಗಳು ಬಂದಿಲ್ಲ ಎಂದು ಹೇಳುತ್ತಾರೆ.
  • ನನ್ನ ಇಷ್ಟ ದೇವರಾದ ಶ್ರೀರಾಮ ಹಾಗೂ ಅಯೋಧ್ಯೆಗೆ ಈ ನನ್ನ ಚಿಕ್ಕ ಸೇವೆಯನ್ನು ಸಲ್ಲಿಸುವ ಆಸೆಯಿದ್ದು, ಅಲ್ಲದೆ ರಾಮಮಂದಿರವನ್ನು ನಾವು ಕಣ್ಣಾರೆ ನೋಡುವಂತ ಭಾಗ್ಯ ನಮಗೆ ದೊರೆತಿದೆ
  • ನನ್ನ ಪ್ರಯತ್ನ ಸಾರ್ಥಕವಾಗಿದ್ದು ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ರಾಮಮಂದಿರಕ್ಕಾಗಿ 35 ವರ್ಷದ ಸೇವೆ: ಇಲ್ಲೊಬ್ಬಳು ಆಧುನಿಕ ಶಬರಿ   title=

Ayodhya Ram Mandir: ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಕೋಟ್ಯಾಂತರ ರಾಮ ಭಕ್ತರ ಕನಸು. ಅದಕ್ಕಾಗಿ ಹೋರಾಟ, ಹರಕೆ ಹೊತ್ತವರೂ ಹಲವರು. ಅದೇ ರೀತಿ ಇಲ್ಲೊಬ್ಬ ಮಹಿಳೆ ರಾಮಮಂದಿರದ ನಿರ್ಮಾಣಕ್ಕೆ ಸಂಕಲ್ಪ ತೊಟ್ಟು 16ಲಕ್ಷಕ್ಕೂ ಅಧಿಕ ಶ್ರೀರಾಮ ನಾಮ ಜಪಗಳನ್ನ ಬರೆದು ರಾಮಮಂದಿರದ ಉದ್ಘಾಟನೆಗೆ ಶಬರಿಯಂತೆ ಕಾಯುತ್ತಿದ್ದಾರೆ. ಹಾಗಾದ್ರೆ ಯಾರವರು? ಏನಿದು ವಿಶೇಷ ಸಂಕಲ್ಪ ಅಂತೀರಾ? ಇಲ್ಲಿದೆ ವರದಿ. 

ಭಕ್ತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಶ್ರೀರಾಮನ ಜಪ ಬರೆಯುತ್ತಿರುವ ಮಹಿಳೆ ಬಾಗಲಕೋಟೆ ತಾಲೂಕಿನ ಗದ್ದನಕೇರಿ ಗ್ರಾಮದ ನಿವಾಸಿ ಅನ್ನಪೂರ್ಣ ಯಲ್ಲುಸಾ ನಿರಂಜನ್. ಹೌದು, ಶ್ರೀಮತಿ ಅನ್ನಪೂರ್ಣ ಯಲ್ಲುಸಾ  ನಿರಂಜನ್ ಎಂಬ ಆಧುನಿಕ ಶಬರಿ ತನ್ನ ಇಷ್ಟ ದೇವರಾದ ಶ್ರೀ ರಾಮನ ಜಪಗಳನ್ನು 16 ಲಕ್ಷ 68,368 ಶ್ರೀರಾಮ ಜಪವನ್ನು ಬರೆದು ತನ್ನ ವಿಶಿಷ್ಟ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಬರೆದ ರಾಮ ನಾಮ ಜಪಗಳ ಪುಸ್ತಕಗಳನ್ನ ಕಳುಹಿಸಬೇಕೆಂಬ ಮಹಾದಾಸೆ ಹೊಂದಿದ್ದಾರೆ. ಹೀಗಾಗಿ ಬಾಗಲಕೋಟೆಯ ಸಂಸದ ಪಿ.ಸಿ.ಗದ್ದಿಗೌಡ ಅವರು ಮಹಿಳೆಯ ಮನೆಗೆ ಆಗಮಿಸಿ ಮಹಿಳೆಯ ಸಾಧನೆ ಕಂಡು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅನ್ನಪೂರ್ಣ ನಿರಂಜನ್ ಅವರು ಬರೆದಂತ 16 ಲಕ್ಷಕ್ಕೂ ಅಧಿಕ ರಾಮ ನಾಮ ಜಪಗಳುಳ್ಳ ಪುಸ್ತಕಗಳನ್ನು ಪೂಜೆ ಸಲ್ಲಿಸಿ ಲೋಕಾರ್ಪಣೆಗೊಳಿಸಿದ್ದಾರೆ. ಎಂ.ಎಲ್.ಸಿ ಪಿ.ಹೆಚ್.ಪೂಜಾರ್, ಬೆಳಗಾವಿ ವಿಭಾಗದ ಬಿಜೆಪಿ ಸಹಪ್ರಭಾರಿ ಬಸವರಾಜ ಯಂಕಂಚಿ ಸಾಥ್ ನೀಡಿದ್ದಾರೆ.

ಇದನ್ನೂ ಓದಿ- Ram Mandir: ಭವ್ಯ ಶ್ರೀರಾಮ ಮಂದಿರದ ಗರ್ಭಗುಡಿಯ ಚಿನ್ನದ ಬಾಗಿಲು ಪೂರ್ಣ: ಎಷ್ಟೊಂದು ಅದ್ಭುತವಾಗಿದೆ ನೋಡಿ

ಶ್ರೀ ರಾಮನ ಪ್ರತಿಷ್ಠಾಪನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಣತೊಟ್ಟಂತೆ ದೇಶದಾದ್ಯಂತ ಅನ್ನಪೂರ್ಣ ನಿರಂಜನ್ ಅಂತಹ ಮಹಿಳೆಯರು ಕೂಡ ಎಲೆಯ ಮರೆಯ ಕಾಯಿಯಂತೆ ಸೇವಿ ಸಲ್ಲಿಸುತ್ತಿದ್ದು ಇಂತಹ ಮಹಿಳೆಯರ ಪ್ರಾಮಾಣಿಕ ಪ್ರಯತ್ನ ಹಾಗೂ ಭಕ್ತಿ ಶ್ರದ್ಧೆಗೆ ಇಂದು ನಾವು ರಾಮಮಂದಿರವನ್ನು ಕಾಣುವ ಭಾಗ್ಯ ದೊರೆತಂತಾಗಿದೆ ಎಂದಿದ್ದಾರೆ.ಈ ಮಹಿಳೆಯ ಸಾಧನೆಗಳನ್ನು ಹಾಗೂ ಅವರು ಬರೆದ ರಾಮನಾಮ ಜಪಗಳನ್ನು ಅಯೋಧ್ಯೆಗೆ ತಲುಪಿಸುವುದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನಕ್ಕೂ ತರುತ್ತೇನೆ ಎಂದರು.

ಬಾಲ್ಯದಿಂದಲೇ ದೈವ ಭಕ್ತಿಗೆ ಮಾರು ಹೋಗಿದ್ದ ಅನ್ನಪೂರ್ಣ ತನ್ನ ಆರಾಧ್ಯ ದೈವ ಪಂಡರಪುರದ ವಿಠ್ಠಲನ ಕ್ಷೇತ್ರದಲ್ಲಿ ಕೈರಾಡೆ  ಮಹಾರಾಜರ ಮಠದಲ್ಲಿ ರಾಮ ನಾಮ ಫಲದ ಮಹತ್ವವನ್ನು ತಿಳಿದುಕೊಂಡಿದ್ದಾರಂತೆ. ಅದೇ ರೀತಿ ಅಯೋಧ್ಯದಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಸಂಕಲ್ಪದಿಂದ ಕಳೆದ 35 ವರ್ಷಗಳಿಂದ ಪ್ರತಿ ದಿವಸ ಶ್ರೀರಾಮ ಜಪಗಳನ್ನು ಪುಸ್ತಕದಲ್ಲಿ ಬರೆಯುತ್ತಾ ಬಂದಿದ್ದಾರೆ.

ಅನ್ನಪೂರ್ಣ ಅವರು ಶ್ರೀರಾಮ ಜಪ ಬರೆಯಲು ಪ್ರಾರಂಭವಾದಾಗಿನಿಂದ ತಮಗೆ ಯಾವುದೇ ರೀತಿಯ ಸಮಸ್ಯೆಗಳು ಬಂದಿಲ್ಲ ಎಂದು ಹೇಳುತ್ತಾರೆ. ನನ್ನ ಇಷ್ಟ ದೇವರಾದ ಶ್ರೀರಾಮ ಹಾಗೂ ಅಯೋಧ್ಯೆಗೆ ಈ ನನ್ನ ಚಿಕ್ಕ ಸೇವೆಯನ್ನು ಸಲ್ಲಿಸುವ ಆಸೆಯಿದ್ದು, ಅಲ್ಲದೆ ರಾಮಮಂದಿರವನ್ನು ನಾವು ಕಣ್ಣಾರೆ ನೋಡುವಂತ ಭಾಗ್ಯ ನಮಗೆ ದೊರೆತಿದ್ದು ಹಾಗೂ ನನ್ನ ಪ್ರಯತ್ನ ಸಾರ್ಥಕವಾಗಿದ್ದು ಸಂತಸ ತಂದಿದೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೊಂಡರು ನನ್ನ ರಾಮ ನಾಮ ಜಪ ನಿರಂತರವಾಗಿ ಇರುತ್ತದೆ ಎಂದು ಹೇಳಿರುವ ಅನ್ನಪೂರ್ಣ ಅವರು ಪತಿ ಐದು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಅಪಾರ ಬಂಧು ಬಳಗದ ಅವಿಭಕ್ತ ಕುಟುಂಬ ಹೊಂದಿದ್ದು ಸಂತಸದಲ್ಲಿದ್ದಾರೆ .

ಇದನ್ನೂ ಓದಿ- Ram Mandir Ayodhya: ರಾಮನಂತಹ ಮಗು ಪಡೆಯಲು ತಾಯಂದಿರಲ್ಲಿ ಶುರುವಾಗಿದೆ ಹೊಸ ಟ್ರೆಂಡ್!

ಈ ಹಿಂದೆ ಅವರು ಗದ್ದನಕೇರಿ ಗ್ರಾಮದ ಗದ್ದನಕೇರಿ ಕ್ರಾಸ್'ಗೆ ಬಂದು ನೆಲೆಯೂರಿ  ಮನೆಯಲ್ಲಿ ಭಾರತ್  ಸಾವಜಿ ಖಾನಾವಳಿ ಎಂಬ ಒಂದು ಗೂಡಂಗಡಿಯನ್ನು ಪ್ರಾರಂಭಿಸಿದ್ದರು. ತದನಂತರ ಕಳೆದ 1982 ರಲ್ಲಿ ನಿವೇಶನ ಖರೀದಿಸಿ ಮನೆ ಕಟ್ಟಲು ಪ್ರಾರಂಭಿಸಿದಾಗಿನಿಂದ ರಾಮ ನಾಮ ಬರೆಯಲು ಪ್ರಾರಂಭಿಸಿದ್ದು ಇಂದಿಗೂ ಮುಂದುವರೆದಿದೆ. ಅಂದಿನಿಂದಲೇ ಶ್ರೀರಾಮ ಜಪಗಳನ್ನು ಬರೆಯಲು ಪ್ರಾರಂಭಿಸಿದ್ದರಿಂದ, ಸ್ವಂತ ಹೋಟೆಲ್ ನಡೆಸುವುದರ ಜೊತೆಗೆ ವಾಣಿಜ್ಯ ಮಳೆಗಳನ್ನು ಹಾಗೂ ಮನೆಗಳನ್ನು ನಿರ್ಮಿಸಿಕೊಂಡು ಸಂತಸದಿಂದ ಸಮೃದ್ಧಿಯಿಂದ ಇದ್ದೇವೆ ಎನ್ನುತ್ತಿದ್ದಾರೆ.

ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆ ಇಂದು ಜಾಗತಿಕ ಮಟ್ಟದಲ್ಲಿ ಸುದ್ದಿ ಆಗುತ್ತಿದ್ದು ಇಂತಹ ಗ್ರಾಮೀಣ ಪ್ರದೇಶದ ಅನೇಕ ಭಕ್ತರು ಶ್ರೀರಾಮ ಭಕ್ತರು ಶ್ರೀ ರಾಮನು ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿ ಎಂಬ ಉದ್ದೇಶದಿಂದ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಅದರಲ್ಲೂ ಕೂಡ ರಾಮನಾಮ ಜಪ ಬರಿದ 16 ಲಕ್ಷಕ್ಕೂ ಅಧಿಕ ರಾಮ ನಾಮ ಜಪವುಳ್ಳ ಪುಸ್ತಕಗಳನ್ನು ಅಯೋಧ್ಯಗೆ ತಲುಪಿಸಬೇಕೆಂಬ ಮಹಾದಾಸೆ ಹೊಂದಿದ ಅನ್ನಪೂರ್ಣ ಯಲ್ಲುಸಾ  ನಿರಂಜನ್ ಅವರ ಆಸೆ ಈಡೇರಲಿ ಎಂದು ಹಾರೈಸೋಣ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News