ಸನ್ನಡತೆ ಆಧಾರದಲ್ಲಿ ಇಬ್ಬರು ಮಹಿಳೆಯರು ಸೇರಿ 81 ಖೈದಿಗಳು ಬಿಡುಗಡೆ

ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ನಡತೆ ಆಧಾರದಲ್ಲಿ ಸಜಾಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಕಾರಾಗೃಹ ಇಲಾಖೆ ಈ ಬಾರಿಯೂ ರಾಜ್ಯದ ಜೈಲುಗಳಿಂದ ಒಟ್ಟು ಇಬ್ಬರು ಮಹಿಳಾ ಖೈದಿಗಳು ಸೇರಿ 81 ಮಂದಿ ಜೈಲು ಹಕ್ಕಿಗಳಿಗೆ ಮುಕ್ತಿ ಕೊಟ್ಟಿದೆ.

Written by - VISHWANATH HARIHARA | Edited by - Manjunath N | Last Updated : Aug 15, 2022, 09:55 PM IST
  • ವಿವಿಧ‌ ಅಪರಾಧವೆಸಗಿ ಶಿಕ್ಷಾ ಬಂಧಿಯಾಗಿರುವ ಖೈದಿಗಳಲ್ಲಿ ಸನ್ನಡತೆ ತೋರುವ ಬಂಧಿಗಳಿಗೆ ಬಿಡುಗಡೆ ಮಾಡುವುದು ಅಲಿಖಿತ‌ ನಿಯಮ.
ಸನ್ನಡತೆ ಆಧಾರದಲ್ಲಿ ಇಬ್ಬರು ಮಹಿಳೆಯರು ಸೇರಿ 81 ಖೈದಿಗಳು ಬಿಡುಗಡೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರತಿ ವರ್ಷದಂತೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸನ್ನಡತೆ ಆಧಾರದಲ್ಲಿ ಸಜಾಬಂಧಿಗಳನ್ನು ಬಿಡುಗಡೆ ಮಾಡಲಾಗಿದೆ. ರಾಜ್ಯ ಕಾರಾಗೃಹ ಇಲಾಖೆ ಈ ಬಾರಿಯೂ ರಾಜ್ಯದ ಜೈಲುಗಳಿಂದ ಒಟ್ಟು ಇಬ್ಬರು ಮಹಿಳಾ ಖೈದಿಗಳು ಸೇರಿ 81 ಮಂದಿ ಜೈಲು ಹಕ್ಕಿಗಳಿಗೆ ಮುಕ್ತಿ ಕೊಟ್ಟಿದೆ.No description available.

ವಿವಿಧ‌ ಅಪರಾಧವೆಸಗಿ ಶಿಕ್ಷಾ ಬಂಧಿಯಾಗಿರುವ ಖೈದಿಗಳಲ್ಲಿ ಸನ್ನಡತೆ ತೋರುವ ಬಂಧಿಗಳಿಗೆ ಬಿಡುಗಡೆ ಮಾಡುವುದು ಅಲಿಖಿತ‌ ನಿಯಮ. ಮಾಡಿದ್ದ ತಪ್ಪಿಗೆ ಪಶ್ಚಾತ್ತಾಪಪಟ್ಟು‌ ಬಿಡುಗಡೆ ಬಳಿಕ ಉತ್ತಮ ಭವಿಷ್ಯ ಕಟ್ಟಿಕೊಳ್ಳಲಿ ಎಂಬುದು ಬಿಡುಗಡೆ ಹಿಂದಿನ ಉದ್ದೇಶವಾಗಿದೆ‌‌. ಅದರಂತೆ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ 14 ಮಂದಿ ಸಜಾಬಂಧಿಗಳನ್ನು ಬಿಡುಗಡೆಗೊಳಿಸಲಾಗಿದೆ. ಬೆಳಗಾವಿ 3, ಬಳ್ಳಾರಿ 8, ವಿಜಯಪುರ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ 9 ಹಾಗೂ ಶಿವಮೊಗ್ಗ ಮಹಿಳಾ ಜೈಲಿನಲ್ಲಿ ಓರ್ವ ಮಹಿಳಾ ಸಜಾಬಂಧಿಯನ್ನು ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ‌.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News