ಬೆಂಗಳೂರು : 10ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳನ್ನು ಕಣ್ಣಿನ ತಪಾಸಣೆಗೆ (EYE Test) ಒಳಪಡಿಸಿ ದೃಷ್ಟಿದೋಷ ಕಂಡುಬಂದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುವುದು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದೆ. ಜ.20ರ ನಂತರ ಕಣ್ಣಿನ ತಪಾಸಣೆ ಮತ್ತು ಕನ್ನಡಕ ವಿತರಣೆ ಕಾರ್ಯ ಆರಂಭವಾಗಲಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ 'ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣ' ಕಾರ್ಯಕ್ರಮದಡಿಯಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ರಾಜ್ಯದಲ್ಲಿ ಈಗಾಗಲೇ 10ನೇ ತರಗತಿಗಳು ಆರಂಭವಾಗಿದ್ದು, ಎಸ್ಎಸ್ಎಲ್ ಸಿ (SSLC) ವಿದ್ಯಾರ್ಥಿಗಳ ತಪಾಸಣೆ ಮೊದಲು ನಡೆಯಲಿದೆ. ಇದರೊಂದಿಗೆ ಶಾಲೆಗೆ ಹಾಜರಾಗುತ್ತಿರುವ ವಿದ್ಯಾಗಮ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆಯೂ (Eye Test) ನಡೆಯಲಿದೆ.
ALSO READ: BMTC : ವಿದ್ಯಾರ್ಥಿಗಳೇ ಹೊಸ ಬಸ್ ಪಾಸ್ ಮಾಡಿಸುವ ಚಿಂತೆ ಬೇಡ ; ಹಳೆಯ ಪಾಸಿನಲ್ಲೇ ಪ್ರಯಾಣ ಮಾಡಬಹುದು
ಹೀಗೆ ನಡೆಯಲಿದೆ ಕನ್ನಡಕ ವಿತರಣೆ :
ಕೋವಿಡ್ (Coronavirus) ಕಾರಣ 1ರಿಂದ 5ನೇವರೆಗಿನ ತರಗತಿಗಳು ಕಾರ್ಯಾರಂಭ ಮಾಡಿಲ್ಲ. ಹಾಗಾಗಿ ಈ ಮಕ್ಕಳಿಗೆ ಕಳೆದ ಬಾರಿ ನಡೆದ ತಪಾಸಣೆಯ ಆಧಾರದ ಮೇಲೆ ಕನ್ನಡಕ (Spectacles) ವಿತರಣೆಯಾಗಲಿದೆ. ಇನ್ನು 6ರಿಂದ 10ನೇ ತರಗತಿಯ ಎಲ್ಲಾ ಮಕ್ಕಳಿಗೆ ನೇತ್ರ ತಪಾಸಣೆಯನ್ನು ಕಡ್ಡಾಯ ಮಾಡಲಾಗಿದೆ. ತಪಾಸಣೆ ವೇಳೆ ಯಾವ ವಿದ್ಯಾರ್ಥಿಗಳಲ್ಲಿ ದೃಷ್ಟಿದೋಷ ಕಂಡುಬರುತ್ತದೆಯೋ ಆ ಮಕ್ಕಳಿಗೆ ಕನ್ನಡಕ ವಿತರಿಸಲಾಗವುದು. ಇತ್ತೀಚೆಗೆ ಮಕ್ಕಳಲ್ಲಿ ಕಣ್ಣಿನ ದೋಷ ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಮಕ್ಕಳಿಗೆ ನೇತ್ರ ತಪಾಸಣೆ ಕಡ್ಡಾಯಗೊಳಿಸಲಾಗಿದೆ.
ಕಣ್ಣಿನ ತಪಾಸಣೆ ಎಲ್ಲಿ ಮತ್ತು ಹೇಗೆ ನಡೆಯಲಿದೆ:
ಕರೋನಾ ಕಾಲವಾದ ಕಾರಣ ಮುಂಜಾಗೃತಾ ಕ್ರಮಗಳನ್ನು ಸರ್ಕಾರ ಅನುಸರಿಸುತ್ತಿದೆ. ಹಾಗಾಗಿ 10 ರಿಂದ 15 ಮಕ್ಕಳ ತಂಡವನ್ನು ರಚಿಸಲಾಗುತ್ತದೆ. ನಂತರ ಶಾಲಾ ಆವರಣ ಅಥವಾ ಅಂಗನವಾಡಿಗಳಲ್ಲಿ (Anganavadi) ನೇತ್ರ ತಪಾಸಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಹೀಗೆ ತಪಾಸಣೆ ನಡೆಸುವ ವೇಳೆ ಮಕ್ಕಳಲ್ಲಿ ದೃಷ್ಟಿದೋಷ ಕಡುಬಂದಲ್ಲಿ ಆ ಮಕ್ಕಳಿಗೆ ಕನ್ನಡಕ ವಿತರಿಸಲಾಗುವುದು.
ALSO READ : Coronavirus: ರಾಜ್ಯದಲ್ಲಿ ಶಾಲೆ ಆರಂಭವಾದ 'ಎರಡೇ ದಿನದದಲ್ಲಿ 18 ಶಿಕ್ಷಕರಿಗೆ ಕೊರೊನಾ ಸೋಂಕು'..!
ಇದಕ್ಕೂ ಮೊದಲು ದೃಷ್ಟಿದೋಷವಿದ್ದ ಮಕ್ಕಳಿಗೆ ಮಾತ್ರ ಕನ್ನಡಕ ವಿತರಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ ಕಡ್ಡಾಯವಾಗಿ ಎಲ್ಲಾ ಮಕ್ಕಳ ಕಣ್ಣಿನ ತಪಾಸಣೆ ನಡೆಸಿ
ಕನ್ನಡಕ ನೀಡಲಾಗುವುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.