ಬೆಂಗಳೂರು: ಆಫೀಸಿಗೆ ಹೋಗುವವರಿಂದ ಹಿಡಿದು ಕಾಲೇಜಿಗೆ ಹೋಗುವವರು, ಮಕ್ಕಳು,ದೊಡ್ಡವರು ಎಂಬ ಬೇಧವಿಲ್ಲದೇ ಬಹುತೇಕರು ಸುಲಭವಾದ ಸಂಚಾರಕ್ಕೆ ಬಳಸುವ ಸಾರಿಗೆ ಅಂದರೆ ಅದು ನಮ್ಮ ಮೆಟ್ರೋ. ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೇ ಸಿಗ್ನಲ್ ತೊಂದರೆ ಇಲ್ಲದೆ ಶೀಘ್ರವಾಗಿ ಜನ ಟ್ರಾವೆಲ್ ಮಾಡ್ತಾರೆ. ಆದ್ರೆ ದಿನೇ ದಿನೇ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆ ಆಗಿರೋದ್ರಿಂದ BMRCL ಪ್ರಯಾಣಿಕರನ್ನು ಸೆಳೆಯಲು ಹೊಸ ಪ್ಲಾನ್ ಒಂದನ್ನು ಪರಿಚಯಿಸಲು ಹೊರಟಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬೇಕು ಅನ್ನೋ ಕಾರಣಕ್ಕೆ ಮೆಟ್ರೋ ಸಂಚಾರ ಆರಂಭ ಮಾಡಲಾಗಿದೆ. ಈಗಾಗಲೇ ಮೆಟ್ರೋಗೆ ಜನ ಫಿದಾ ಆಗಿದ್ದಾರೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕೆ ಹಲವು ವಿನೂತನ ಯೋಜನೆಗಳನ್ನು BMRCL ಜಾರಿ ಮಾಡುತ್ತಾ ಬರುತ್ತಿದೆ. ಇದೀಗ ಮತ್ತೊಂದು ಹೊಸ ಯೋಜನೆ ಜಾರಿ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಈಶ್ವರಪ್ಪಗೆ ಮತ್ತೆ ಸಂಕಷ್ಟ: ಬಿ ರಿಪೋರ್ಟ್ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ಸಂತೋಷ್ ಕುಟುಂಬಸ್ಥರು
ಸದ್ಯ ಬೆಂಗಳೂರು ಮೆಟ್ರೋದಲ್ಲಿ ಟೋಕನ್ ಹಾಗೂ ಸ್ಮಾರ್ಟ್ ಕಾರ್ಡ್ ತೆಗೆದುಕೊಳ್ಳಬೇಕು ಅಂತ ಉದ್ದುದ್ದ ಸಾಲಿನಲ್ಲಿ ನಿಂತುಕೊಳ್ಳಬೇಕು. ಆದ್ರೆ ಇನ್ಮುಂದೆ ಈ ಇಂತಹಾ ಕಿರಿಕಿರಿಗೆ ಇರೋದಿಲ್ಲ. ನಿಮ್ಮ ಮೊಬೈಲ್ ಮೂಲಕವೇ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಮೆಟ್ರೋ ನಿಗಮ ಮಾಡ್ತಿದೆ. ಪ್ರಯಾಣಿಕರು ತಮ್ ಸ್ಮಾರ್ಟ್ ಪೋನ್ನಲ್ಲೇ ಮೊಬೈಲ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿ, ನಂತರ ತಾವು ಪ್ರಯಾಣಿಸುವ ಮಾರ್ಗ ಮತ್ತು ಎಷ್ಟು ಸಂಖ್ಯೆಯ ಜನರು ಪ್ರಯಾಣಿಸುತ್ತಾರೆ ಎಂಬುದನ್ನು ನಮೂದಿಸಬೇಕಾಗುತ್ತದೆ. ನಂತರ ಅಪ್ಲಿಕೇಷನ್ ಮೂಲಕ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಬೇಕು. ಕೂಡಲೇ ಪ್ರಯಾಣದ ಮೊತ್ತವು ಆನ್ಲೈನ್ ಮೂಲಕ ಬಿಎಂಆರ್ಸಿಎಲ್ ಗೆ ಜಮಾ ಆಗಲಿದೆ. ಇಂತಹ ನೂತನ ವ್ಯವಸ್ಥೆಯನ್ನು ತರಲು ಬಿಎಂಆರ್ಸಿಎಲ್ ಮುಂದಾಗಿದೆ.
ದೆಹಲಿ ಮೆಟ್ರೋ ಮಾದರಿಯನ್ನೇ ಪಾಲನೆ;
2015ರ ಪೂರ್ವದಲ್ಲಿ ಅಳವಡಿಸಿದ ಎಎಫ್ಸಿ ಗೇಟ್ಗಳಲ್ಲಿ ಕ್ಯೂ ಆರ್ ಟಿಕೆಟ್ ವ್ಯವಸ್ಥೆಗೆ ಸ್ಪಂದಿಸುವುದಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ಮುಚ್ಚಲಾಗಿದೆ. ಹಳೆಯ ದ್ವಾರಗಳನ್ನು ಕ್ಯೂ ಆರ್ ವ್ಯವಸ್ಥೆಗೆ ಸ್ಪಂದಿಸುವಂತೆ ಸಾಫ್ಟ್ ವೇರ್ ಬದಲಿಸಲಾಗುವುದು, ದೆಹಲಿ ಮೆಟ್ರೋದಲ್ಲಿ ಈಗಾಗಲೇ ಈ ವ್ಯವಸ್ಥೆ ಅಳವಡಿಸಲಾಗಿದೆ. ವಿಮಾನ ನಿಲ್ದಾಣಗಳಲ್ಲಿ ಮಾತ್ರ ಮೊಬೈಲ್ ಟಿಕೆಟ್ ಸೇವೆ ಲಭ್ಯವಿದೆ.ಇದೀಗ ಮೆಟ್ರೋದಲ್ಲೂ ಲಭ್ಯವಾಗಲಿದೆ. ಕೊರೊನಾದಿಂದ ಪ್ರಯಾಣಿಕ ಸಂಖ್ಯೆ ಮೆಟ್ರೋದಲ್ಲಿ ಕುಸಿತವಾಗಿದೆ. ಆದ್ರೆ ಇದೀಗ ಮತ್ತೆ ಪ್ರಯಾಣಿಕರನ್ನು ಸೆಳೆಯಲು ನಮ್ಮ ಮೆಟ್ರೋ ಪ್ಲಾನ್ ಗಳನ ಪರಿಚಯಿಸಲು ಮುಂದಾಗಿದ್ದು, BMRCLನ ಈ ಪ್ಲಾನ್ ಆದಷ್ಟು ಬೇಗ ಜಾರಿಯಾಗಲಿ. ಜನ ಸಾಮಾನ್ಯರಿಗೆ ಈ ವಿನೂತನ ಸೇವೆ ಎಷ್ಟರ ಮಟ್ಟಿಗೆ ಸದ್ಭಳಕೆ ಆಗಲಿದೆ ಅನ್ನೋದನ್ನ ಕಾದುನೋಡಬೇಕಿದೆ.
ಇದನ್ನೂ ಓದಿ: ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ಬೆಂಗಳೂರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.