"ಹೊರನಾಡು ಅನ್ನಪೂಣೇಶ್ವರಿ ದೇಗುಲದ ನಿರ್ವಹಣೆಯಲ್ಲಿ ಭೀಮೇಶ್ವರ ಜೋಷಿಯವರ ಶಕ್ತಿ ದೊಡ್ಡದು"

Horanadu Annapurneshwari : ಕರ್ನಾಟಕದ ಜನಪ್ರಿಯ ದೇವಿ ದೇವಾಲಯಗಳಲ್ಲಿ, ಶ್ರೀ ಅನ್ನಪೂರ್ಣೇಶ್ವರಿಗೆ ಸಮರ್ಪಿತವಾದ ಶ್ರೀ ಹೊರನಾಡು ದೇವಾಲಯವು ಐತಿಹಾಸಿಕ ಮತ್ತು ಧಾರ್ಮಿಕ ಸ್ಥಳಗಳ ಪಟ್ಟಿಗಳಲ್ಲಿ ಒಂದಾಗಿದೆ. ಇದು ದೇವಿಗೆ ಮೀಸಲಾದ ವಾಸಸ್ಥಾನವಾಗಿದ್ದು, ಇದರ ಇತಿಹಾಸವು ಸಾಕಷ್ಟು ಹಿಂದಿನದಾಗಿದ್ದು, ಈ ಪ್ರಾಚೀನ ದೇವಾಲಯದ ಮೇಲೆ ಹಲವಾರು ಕಥೆಗಳು ಮತ್ತು ದಂತಕಥೆಗಳಲ್ಲಿ ಉಲ್ಲೇಖವಿದೆ.   

Written by - Zee Kannada News Desk | Last Updated : Apr 28, 2023, 10:03 AM IST
  • ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂಣೇಶ್ವರಿ ದೇಗುಲದಲ್ಲಿ ಸತತವಾಗಿ ಅನ್ನದಾಸೋಹ, ಭಕ್ತಿ ದಾಸೋಹ ಮತ್ತು ಜ್ಞಾನ ದಾಸೋಹ ನಡೆಯುತ್ತಿದೆ.
  • ಹೊರನಾಡಿನ ಚಂಡಿಕಾಯಾಗ ಮತ್ತು ಅನ್ನದಾನ ದೇಶದಲ್ಲೇ ಹೆಸರಾಗಿದೆ.
  • ಈ ದೇವಾಲಯವನ್ನು ಆನುವಂಶಿಕ ಧರ್ಮಕರ್ತರು ಅರ್ಚಕರು ನಿರ್ವಹಿಸುತ್ತಾರೆ
"ಹೊರನಾಡು ಅನ್ನಪೂಣೇಶ್ವರಿ ದೇಗುಲದ ನಿರ್ವಹಣೆಯಲ್ಲಿ ಭೀಮೇಶ್ವರ ಜೋಷಿಯವರ ಶಕ್ತಿ ದೊಡ್ಡದು"  title=

Chikkamangalore : ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಅನ್ನಪೂಣೇಶ್ವರಿ ದೇಗುಲದಲ್ಲಿ ಸತತವಾಗಿ ಅನ್ನದಾಸೋಹ, ಭಕ್ತಿ ದಾಸೋಹ ಮತ್ತು ಜ್ಞಾನ ದಾಸೋಹ ನಡೆಯುತ್ತಿದೆ. ಇದರ ನಿರ್ವಹಣೆ ವಿಷಯದಲ್ಲಿ ಭೀಮೇಶ್ವರ ಜೋಷಿಯವರ ಶಕ್ತಿ ದೊಡ್ಡದು ಎಂದು ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮೀಜಿ ಹೇಳಿದ್ದಾರೆ. 

ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಟೆಯ ಸುವರ್ಣ ಮಹೋತ್ಸವದ ಪ್ರಯುಕ್ತ ಬ್ರಹ್ಮ ಕುಂಭಾಭಿಷೇಕದ ಕಲಶ ಪ್ರತಿಷ್ಠಾಪನೆ ಮಾಡಲಾಯಿತು. ಕಳಸ ಮತ್ತು ಹೊರನಾಡು ಕ್ಷೇತ್ರದ ಸ್ಥಾಪನೆ ಅಗಸ್ತ್ಯರಿಂದ ಆಗಿದೆ. ಕಳಸದಲ್ಲಿ ಪ್ರತಿ ವರ್ಷ ಕಲ್ಯಾಣ ನಡೆಯುವ ಕಾರಣಕ್ಕೆ ದಕ್ಷಿಣ ಕಾಶಿ ಎಂದು ಹೆಸರು ಪಡೆದಿದೆ. ಹೊರನಾಡಿನ ಚಂಡಿಕಾಯಾಗ ಮತ್ತು ಅನ್ನದಾನ ದೇಶದಲ್ಲೇ ಹೆಸರಾಗಿದೆ. 

ಇದನ್ನೂ ಓದಿ-Video: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಟ್ರಕ್ ಬ್ರೇಕ್ ಫೇಲ್ ಆಗಿ 12 ವಾಹನಗಳಿಗೆ ಡಿಕ್ಕಿ; 6 ಗಾಯ

ಈ ದೇವಾಲಯವನ್ನು ಆನುವಂಶಿಕ ಧರ್ಮಕರ್ತರು ಅರ್ಚಕರು ನಿರ್ವಹಿಸುತ್ತಾರೆ ಮತ್ತು ಅವರ ಇತಿಹಾಸವು ಸುಮಾರು 400 ವರ್ಷಗಳ ಹಿಂದಿನದು. ದೇವಾಲಯವನ್ನು ಭಕ್ತರಿಗೆ ಲಭ್ಯವಾಗುವಂತೆ ಉಳಿಸುವ ಜವಾಬ್ದಾರಿಯನ್ನು ಕುಟುಂಬವು ಹೊಂದಿದೆ. ಇಲ್ಲಿನ ಧರ್ಮಕರ್ತರು ದೇವಾಲಯವನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು ಕೆಲವು ಧಾರ್ಮಿಕ ಆಚರಣೆಗಳನ್ನು ಸಹ ನಡೆಸಿಕೊಂಡು ಬರುತ್ತಿದ್ದಾರೆ.

ಕ್ಷೇತ್ರದ 5ನೇ ಧರ್ಮಕರ್ತರಾದ ವೆಂಕಟಸುಬ್ಬಾ ಜೋಯಿಸರು ಮಾಡಿದ ಪುನರ್ ಪ್ರತಿಷ್ಠೆಗೆ ಈಗ 50 ವರ್ಷ ತುಂಬಿದೆ ಎಂದರು. ಧರ್ಮಸ್ಥಳದ ಡಿ.ವೀರೇಂದ್ರ ಹೆಗ್ಗಡೆಯವರು, 70ರ ದಶಕದಲ್ಲಿ ನಮ್ಮ ತಂದೆಯನ್ನು ಕಾರಿನಲ್ಲಿ ನಾನೇ ಡ್ರೈವಿಂಗ್ ಮಾಡಿ ಹೊರನಾಡಿಗೆ ಕರೆದುಕೊಂಡು ಬಂದಿದ್ದೆ. ನಮ್ಮ ತಂದೆಯವರು ವೆಂಕಟಸುಬ್ಬಾ ಜೋಯಿಸರ ಜ್ಞಾನ ಕಂಡು ಬೆರಗಾಗಿದ್ದರು ಎಂದರು. ಹೊರನಾಡಿನಲ್ಲಿ ಅತ್ಯಂತ ಕ್ಷಿಪ್ರಗತಿಯ ಅಭಿವೃದ್ಧಿ ಆಗುತ್ತಿದೆ. 

ಇದನ್ನೂ ಓದಿ-25 ವರ್ಷಗಳಿಂದ ಪ್ರತ್ಯೇಕವಾಗಿರುವ ದಂಪತಿಗಳ ವಿಚ್ಚೇದನ ವಿಚಾರವಾಗಿ ಸುಪ್ರೀಂ ಹೇಳಿದ್ದೇನು?

ಭೀಮೇಶ್ವರ ಜೋಷಿ ಈ ಬೆಳೆವಣಿಗೆಗೆ ಕಾರಣಕರ್ತರು ಎಂದರು. ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ, ನಿಸರ್ಗದ ನಡುವೆ ತಾಯಿಯ ಮಡಿಲಲ್ಲಿ ಹೊರನಾಡಿನಲ್ಲಿ ನಡೆದಿರುವ ಅಗಾಧವಾದ ಕೆಲಸ ಸ್ಮರಣೀಯ ಎಂದರು. ಹೊರನಾಡು ಎಲ್ಲ ಜಾತಿ ಪಂಥವರಿಗೂ ಸೇರಿದ ಕ್ಷೇತ್ರ. ಧರಣಿ ಹೋಮದ ಮೂಲಕ ಕ್ಷೇತ್ರವು ಕೃಷಿಕರ ಎಲ್ಲಾ ಸಂಕಷ್ಟ ನಿವಾರಣೆ ಮಾಡುವ ಯತ್ನ ಮಾಡುತ್ತಿದೆ ಎಂದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News