ಸಿಎಂ ಭತ್ತ ನಾಟಿ ಮಾಡುವ ವಿಚಾರ: ಬಿಜೆಪಿ ಟೀಕೆಗೆ ಕುಮಾರಸ್ವಾಮಿ ತಿರುಗೇಟು

ಅರಳುಗುಪ್ಪೆಯ ಸೀತಾಪುರ ಗ್ರಾಮದಲ್ಲಿ ನಾಟಿ ಹಾಕಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ.

Last Updated : Aug 11, 2018, 01:00 PM IST
ಸಿಎಂ ಭತ್ತ ನಾಟಿ ಮಾಡುವ ವಿಚಾರ: ಬಿಜೆಪಿ ಟೀಕೆಗೆ ಕುಮಾರಸ್ವಾಮಿ ತಿರುಗೇಟು title=

ಮಂಡ್ಯ: ರೈತರಿಗೆ ಕೃಷಿ ಚಟುವಟಿಕೆಯಲ್ಲಿ ಪ್ರೋತ್ಸಾಹಿಸಲು ಹಾಗೂ ಆತ್ಮಸ್ಥೈರ್ಯ ತುಂಬಲು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸೀತಾಪುರದ ಹೊರವಲಯದ ದೇವರಾಜ್ ಎಂಬುವರ 5 ಎಕರೆ ಜಮೀನಿನಲ್ಲಿ ಇಂದು ಭತ್ತ ನಾಟಿ ಮಾಡಲು ಮುಂದಾಗಿದ್ದಾರೆ.  

ಆದರೆ ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಖ್ಯಾತೆ ತೆಗೆದಿದ್ದು, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಸೀತಾಪುರ -ಅರಳಕುಪ್ಪೆ ಗ್ರಾಮದಲ್ಲಿ ಆಯೋಜಿಸಿರುವ  ಭತ್ತದ ನಾಟಿ ಕಾರ್ಯಕ್ರಮ  ಹಾಸ್ಯಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಟೀಕಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಗದ್ದೆ ನಾಟಿ ಮಾಡುವುದನ್ನ ವ್ಯಂಗ್ಯ ಮಾಡಿರುವ ಕೇಂದ್ರ ಸಚಿವ ಅನಂತ ಕುಮಾರ್, ಗದ್ದೆ ನಾಟಿ ಕೇವಲ ಪೊಟೊ ಪೊಸ್ ಗಾಗಿ ಅಗಬಾರದು. ರೈತರ ವಿಚಾರದಲ್ಲಿ ರಾಜಕೀಯ ಲೇಪನ ಆಗಬಾರದು. ನಾವೇಲ್ಲರು ರೈತರ ಮಕ್ಕಳು. ರೈತರಿಗೆ ಒಳ್ಳೆದನ್ನ ಬಯಸಬೇಕು ಎಂದಿದ್ದಾರೆ.

ಸಿಎಂ ಕುಮಾರಸ್ವಾಮಿ ಭತ್ತದ ನಾಟಿ ಮಾಡುತ್ತಿರುವುದು ಒಂದು ಗಿಮಿಕ್ ಎಂದು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ನಾಯಕರ ಟೀಕೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಡಕ್ ತಿರುಗೇಟು-
ಇನ್ನು ಬಿಜೆಪಿ ನಾಯಕರ ಈ ಟೀಕೆಗೆ ಖಡಕ್ ತಿರುಗೇಟು ನೀಡಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜಕೀಯ ಗಿಟ್ಟಿಸಿಕೊಳ್ಳಲು ನಾನು ಸೀತಾಪುರಕ್ಕೆ ಹೋಗುತ್ತಿಲ್ಲ. ನಾನು ಹುಟ್ಟಿದ್ದು ರೈತರ ಕುಟುಂಬದಲ್ಲಿ. ನನಗೆ  ಭತ್ತದ ನಾಟಿ ಮಾಡೋದು ಹೊಸದೇನಲ್ಲ.  ರೈತರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಭತ್ತದ ಗದ್ದೆಗೆ ಇಳಿದು ನಾಟಿ ಮಾಡುತ್ತಿದ್ದೇನೆ. ಇದನ್ನ ರಾಜಕೀಯವಾಗಿ ತೆಗೆದುಕೊಂಡರೇ ನಾನೇನು ಮಾಡಲು ಆಗಲ್ಲ. ಇದನ್ನ ರಾಜಕೀಯವಾಗಿ ನೋಡಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.  

Trending News