ಬೆಂಗಳೂರು: ಬೆಂಗಳೂರಿನ ಗೋರಿಪಾಳ್ಯದಲ್ಲಿ ನಡೆದಿದ್ದ ಚಂದ್ರು ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, ‘ಆರೋಪಿ ಬೇಕಂತ ಕೊಲೆ ಮಾಡಿಲ್ಲ, ನರ ಕಟ್ ಆಗದೇ ಇದ್ದಿದ್ರೆ ಚಂದ್ರು ಸಾಯುತ್ತಿರಲಿಲ್ಲ’ ಎಂದಿದ್ದರು. ಜಮೀರ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಮಂಗಳವಾರ ಸರಣಿ ಟ್ವೀಟ್ ಮಾಡಿದೆ.
‘ಚಂದ್ರು ಹತ್ಯೆ ಆರೋಪಿ ಶಾಹಿದ್ ಪಾಷಾನಿಗೆ ಹತ್ಯೆ ಮಾಡುವ ಉದ್ದೇಶವಿರಲಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಆರೋಪಿ ಪರ ವಕಾಲತ್ತು ವಹಿಸಿದ್ದಾರೆ. ಉದ್ದೇಶವಿಲ್ಲದವರು ಚಾಕು ಇಟ್ಟುಕೊಂಡಿದ್ದೇಕೆ? ನಿಮ್ಮ ಶಿಷ್ಯನ ವರಸೆ ಬಿಡಿಸಿ ಹೇಳುವಿರಾ ಮಾಜಿ ಸಿಎಂ ಸಿದ್ದರಾಮಯ್ಯ? ಕಾಂಗ್ರೆಸ್ ಗೂಂಡಾಗಿರಿಯನ್ನು ಸಮರ್ಥಿಸಿಕೊಳ್ಳುತ್ತದೆಯೇ?’ ಎಂದು ಪ್ರಶ್ನಿಸಿದೆ.
ಕೊರೋನಾ ಕಾಲದಲ್ಲಿ ಹಗಲಿರುಳು ಶ್ರಮಿಸಿದ ಕೋವಿಡ್ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪುಂಡರನ್ನು ಜಮೀರ್ ಸಮರ್ಥಿಸಿಕೊಂಡಿದ್ದರು.
ಈಗ ಒಂದು ಕೊಲೆಯನ್ನೇ ಉದ್ದೇಶಪೂರ್ವಕವಲ್ಲದ ಕೊಲೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ.
ಶಾಸಕನನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲದಷ್ಟು ಅಸಮರ್ಥರೇ @DKShivakumar?#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) April 12, 2022
ಇದನ್ನೂ ಓದಿ: ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದ ಸಿದ್ದರಾಮಯ್ಯ
ಡಿಜೆ ಹಳ್ಳಿ ಗಲಭೆಯಲ್ಲೂ ಆರೋಪಿಗಳ ಸಮರ್ಥನೆ.
ದಲಿತ ಶಾಸಕನ ಮನೆ ಸುಟ್ಟವರ ಸಮರ್ಥನೆ.
ಕೊಲೆ ಪ್ರಕರಣದಲ್ಲೂ ಆರೋಪಿಗಳ ಸಮರ್ಥನೆ.ಈ ಒಂದು ವರ್ಗದ ಆರೋಪಿಗಳಿಗೆ ಕಾನೂನು, ಸಂವಿಧಾನ ಎನ್ನುವುದು ಲೆಕ್ಕಕ್ಕಿಲ್ಲವೇ?
ಕಾಂಗ್ರೆಸ್ ಪಕ್ಷಕ್ಕೆ ಕಾನೂನು, ಸಂವಿಧಾನದಲ್ಲಿ ನಂಬಿಕೆ ಇಲ್ಲವೇ?#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) April 12, 2022
‘ಕೊರೊನಾ ಕಾಲದಲ್ಲಿ ಹಗಲಿರುಳು ಶ್ರಮಿಸಿದ ಕೋವಿಡ್ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಪುಂಡರನ್ನು ಜಮೀರ್ ಸಮರ್ಥಿಸಿಕೊಂಡಿದ್ದರು. ಈಗ ಒಂದು ಕೊಲೆಯನ್ನೇ ಉದ್ದೇಶಪೂರ್ವಕವಲ್ಲದ ಕೊಲೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಶಾಸಕನನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಿಲ್ಲದಷ್ಟು ಅಸಮರ್ಥರೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್’ ಎಂದು ಕುಟುಕಿದೆ.
ಸಕಾರಣವಿಲ್ಲದೆ ಡಿಜೆ ಹಳ್ಳಿ ಗಲಭೆ ಎಬ್ಬಿಸಿದಂತೆ ಚಂದ್ರು ಹತ್ಯೆಯಲ್ಲೂ @INCKarnataka ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದೆ.
ಪ್ರಕರಣದ ಆರೋಪಿಗಳನ್ನು ಅತಿಯಾಗಿ ಸಮರ್ಥನೆ ಮಾಡುವ ಮೂಲಕ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ.#ಜನವಿರೋಧಿಕಾಂಗ್ರೆಸ್
— BJP Karnataka (@BJP4Karnataka) April 12, 2022
‘ಡಿಜೆ ಹಳ್ಳಿ ಗಲಭೆಯಲ್ಲೂ ಆರೋಪಿಗಳ ಸಮರ್ಥನೆ, ದಲಿತ ಶಾಸಕನ ಮನೆ ಸುಟ್ಟವರ ಸಮರ್ಥನೆ ಹಾಗೂ ಕೊಲೆ ಪ್ರಕರಣದಲ್ಲೂ ಆರೋಪಿಗಳ ಸಮರ್ಥನೆ. ಈ ಒಂದು ವರ್ಗದ ಆರೋಪಿಗಳಿಗೆ ಕಾನೂನು, ಸಂವಿಧಾನ ಎನ್ನುವುದು ಲೆಕ್ಕಕ್ಕಿಲ್ಲವೇ? ಕಾಂಗ್ರೆಸ್ ಪಕ್ಷಕ್ಕೆ ಕಾನೂನು, ಸಂವಿಧಾನದಲ್ಲಿ ನಂಬಿಕೆ ಇಲ್ಲವೇ?’ ಎಂದು ಬಿಜೆಪಿ ಪ್ರಶ್ನಿಸಿದೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
‘ಸಕಾರಣವಿಲ್ಲದೆ ಡಿಜೆ ಹಳ್ಳಿ ಗಲಭೆ ಎಬ್ಬಿಸಿದಂತೆ ಚಂದ್ರು ಹತ್ಯೆಯಲ್ಲೂ ಕಾಂಗ್ರೆಸ್ ಪಕ್ಷ ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿದೆ. ಪ್ರಕರಣದ ಆರೋಪಿಗಳನ್ನು ಅತಿಯಾಗಿ ಸಮರ್ಥನೆ ಮಾಡುವ ಮೂಲಕ ದುಷ್ಕೃತ್ಯಗಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ’ ಎಂದು ಬಿಜೆಪಿ ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.