ಸಿದ್ದರಾಮಯ್ಯನವರೇ ಇದು ನಿಮ್ಮ ಕರ್ಮದ ಫಲ: ಕಾಂಗ್ರೆಸ್ ಸೋಲಿಗೆ ಬಿಜೆಪಿ ವ್ಯಂಗ್ಯ

ಸಿದ್ದರಾಮಯ್ಯನವರೇ ನಿಮ್ಮ ಮಾತುಗಳು ನರಿ ಮತ್ತು ಹುಳಿ‌ ದ್ರಾಕ್ಷಿಯ ಕಥೆ ನೆನಪಿಸುತ್ತಿದೆ ಅಂತಾ ಬಿಜೆಪಿ ಟ್ವೀಟ್ ಮಾಡಿ ಟೀಕಿಸಿದೆ.

Written by - Zee Kannada News Desk | Last Updated : Mar 12, 2022, 01:24 PM IST
  • ಸಿದ್ದರಾಮಯ್ಯನವರೇ ನಿಮ್ಮ ಮಾತುಗಳು ನರಿ ಮತ್ತು ಹುಳಿ‌ ದ್ರಾಕ್ಷಿಯ ಕಥೆ ನೆನಪಿಸುತ್ತಿದೆ
  • ಇದು ನೀವು ಮಾಡಿದ ತಪ್ಪಿನಿಂದಾದ ಸೋಲು ಅಲ್ಲ, ಇದು ನಿಮ್ಮ ಕರ್ಮದ ಫಲ!
  • ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿ ವ್ಯಂಗ್ಯವಾಡಿದ ಬಿಜೆಪಿ
ಸಿದ್ದರಾಮಯ್ಯನವರೇ ಇದು ನಿಮ್ಮ ಕರ್ಮದ ಫಲ: ಕಾಂಗ್ರೆಸ್ ಸೋಲಿಗೆ ಬಿಜೆಪಿ ವ್ಯಂಗ್ಯ  title=
ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ತಿರುಗೇಟು

ಬೆಂಗಳೂರು: ‘ಪಂಚ’ ರಾಜ್ಯಗಳ ಚುನಾವಣೆ(5 State Election Result)ಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದಕ್ಕೆ ‘ಕೈ’ ನಾಯಕರಿಗೆ ಆಘಾತವಾಗಿದೆ. ‘ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ. ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬಂದಿರುವುದು ಆಮ್ ಆದ್ಮಿ ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಹೇಳಿಕೆ ನೀಡಿದ್ದರು.

ಸಿದ್ದರಾಮಯ್ಯ(Siddaramaiah)ನವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ #CongressMuktBharat ಹ್ಯಾಶ್ ಟ್ಯಾಗ್ ಬಳಿಸಿ ವ್ಯಂಗ್ಯವಾಡಿದೆ. ‘ಸಿದ್ದರಾಮಯ್ಯನವರೇ ನಿಮ್ಮ ಮಾತುಗಳು ನರಿ ಮತ್ತು ಹುಳಿ‌ ದ್ರಾಕ್ಷಿಯ ಕಥೆ ನೆನಪಿಸುತ್ತಿದೆ. ಇದು ನೀವು ಮಾಡಿದ ತಪ್ಪಿನಿಂದಾದ ಸೋಲು ಅಲ್ಲ, ಇದು ನಿಮ್ಮ ಕರ್ಮದ ಫಲ!’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಲು ಈ ಸೋಲು ಒಂದು ಪಾಠ: ಸತೀಶ ಜಾರಕಿಹೊಳಿ

‘ಪಂಚ’ ರಾಜ್ಯಗಳ ಚುನಾವಣೆ(5 State Election Result)ಯಲ್ಲಿ ಈ ಬಾರಿ ಮತದಾರರು ಕಾಂಗ್ರೆಸ್ ಗೆ ಕೈಕೊಟ್ಟು ಬಿಜೆಪಿಗೆ ಜೈ ಎಂದಿದ್ದಾರೆ. ಉತ್ತರಪ್ರದೇಶ ಸೇರಿದಂತೆ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡಿದೆ. ಪಂಜಾಬ್(Punjab Election 2022)ನಲ್ಲಿ ಹಾಲಿ, ಮಾಜಿ ಸಿಎಂಗಳೇ ಸೋಲು ಕಂಡಿದ್ದಾರೆ. ನವಜೋತ್ ಸಿಂಗ್ ಸಿಧು, ಕ್ಯಾಪ್ಟನ್ ಅಮರಿಂದರ್ ಸಿಂಗ್ ನಡುವಿನ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಹೀನಾಯ ಸೋಲು ಕಾಣಬೇಕಾಯಿತು. ‘ಕೈ’ ನಾಯಕರ ಒಳಜಗಳದ ಲಾಭ ಪಡೆದುಕೊಂಡ ಆಮ್ ಆದ್ಮಿ ಪಕ್ಷವು ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಸರ್ಕಾರ ರಚಿಸಲು ಸಿದ್ಧವಾಗಿದೆ.

ಕಾಂಗ್ರೆಸ್ ನ ದುರ್ಬಲ ನಾಯಕತ್ವದಿಂದಾಗಿ ಉತ್ತರಪ್ರದೇಶ(Uttar Pradesh)ದಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಮಣಿಪುರ, ಗೋವಾ ಮತ್ತು ಉತ್ತರಖಂಡನಲ್ಲಿಯೂ ಕಾಂಗ್ರೆಸ್ ಸರ್ಕಾರ ರಚಿಸುವಷ್ಟು ಸ್ಥಾನಗಳನ್ನು ಗೆಲ್ಲುವಲ್ಲಿ ವೈಫಲ್ಯ ಅನುಭವಿಸಿದೆ. ಮತದಾರ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಕೊಟ್ಟಿದ್ದು, ‘ಕಮಲ’ ಪಕ್ಷದ ಕೈ ಹಿಡಿದಿದ್ದಾನೆ. ಉತ್ತರಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲಿ ಬಿಜೆಪಿಯೇ ಸರ್ಕಾರ ರಚಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಉಘೇ ಉಘೇ ಮಾದಪ್ಪ ಕೋಟ್ಯಾಧೀಶ ಮಾದಪ್ಪ.. 28 ದಿನಕ್ಕೆ ಹುಂಡಿಯಲ್ಲಿ ಕೋಟಿ ಕೋಟಿ ಹಣ!

‘ಪಂಚ’ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ(BJP) ಅಭೂತಪೂರ್ವ ಗೆಲುವು ಸಾಧಿಸಿದ್ದು, ಕಾಂಗ್ರೆಸ್‌ ಬುಡಸಮೇತ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದೆ. ಇದರಿಂದ ಬಿಜೆಪಿ ‘ಕಾಂಗ್ರೆಸ್ ಮುಕ್ತ ಭಾರತ’ ಗುರಿ ಸಾಧಿಸುವತ್ತ ಮುಖ ಮಾಡಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News