ಉಘೇ ಉಘೇ ಮಾದಪ್ಪ ಕೋಟ್ಯಾಧೀಶ ಮಾದಪ್ಪ.. 28 ದಿನಕ್ಕೆ ಹುಂಡಿಯಲ್ಲಿ ಕೋಟಿ ಕೋಟಿ ಹಣ!

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 28 ದಿನಗಳಲ್ಲಿ ಇಷ್ಟು ಹಣ ಸಂಗ್ರಹವಾಗಿದೆ. 

Written by - Zee Kannada News Desk | Last Updated : Mar 12, 2022, 08:53 AM IST
  • ಉಘೇ ಉಘೇ ಮಾದಪ್ಪ ಕೋಟ್ಯಾಧೀಶ ಮಾದಪ್ಪ
  • ಇದೇ ಮೊದಲ ಬಾರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಇಷ್ಟು ಹಣ ಸಂಗ್ರಹ
  • 28 ದಿನಗಳಲ್ಲಿ ಹುಂಡಿಯಲ್ಲಿ 2.83 ಕೋಟಿ ಹಣ ಸಂಗ್ರಹ
ಉಘೇ ಉಘೇ ಮಾದಪ್ಪ ಕೋಟ್ಯಾಧೀಶ ಮಾದಪ್ಪ.. 28 ದಿನಕ್ಕೆ ಹುಂಡಿಯಲ್ಲಿ ಕೋಟಿ ಕೋಟಿ ಹಣ! title=
Male Mahadeshwara madappa betta

ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹಾಗೂ ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಅತ್ಯಲ್ಪ ಅವಧಿಯಲ್ಲಿ ಭಾರೀ ಮೊತ್ತದ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. 

ಶುಕ್ರವಾರ ಬೆಳಗ್ಗೆಯಿಂದ ತಡರಾತ್ರಿವರೆಗೂ ಹುಂಡಿ ಎಣಿಕೆ ನಡೆದಿದ್ದು ಹುಂಡಿ ಹಣ ಎಣಿಕೆ ಮಾಡಲಾಗಿದ್ದು, ಬರೋಬ್ಬರಿ 2,83,12,841 ಕೋಟಿ ರೂ. ಸಂಗ್ರಹವಾಗಿದೆ‌. ಇದರಲ್ಲಿ ನಾಣ್ಯವೇ 16 ಲಕ್ಷ ರೂ.ಗಳಷ್ಟಿದೆ. ಜೊತೆಗೆ, 3.8 ಕೆಜಿ ಬೆಳ್ಳಿ ಹಾಗೂ 73 ಗ್ರಾಂ ಚಿನ್ನವನ್ನು ಭಕ್ತರು ಕಾಣಿಕೆ ರೂಪದಲ್ಲಿ ಮಾದಪ್ಪನಿಗೆ (Madappa) ಅರ್ಪಿಸಿದ್ದಾರೆ.

ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಭಕ್ತಸಾಗರ; ಎರಡೇ ದಿನ ಬರೀ ನಾಲ್ಕು ಸೇವೆಗಳಿಂದ 20 ಲಕ್ಷ ಆದಾಯ!!

ವಿಶೇಷವೆಂದರೆ ಇದೇ ಮೊದಲ ಬಾರಿಗೆ ಮಲೆ ಮಹದೇಶ್ವರ ಬೆಟ್ಟದಲ್ಲಿ (Male Mahadeshwara Betta) ಅತಿ ಕಡಿಮೆ ಅವಧಿಯಲ್ಲಿ ಅಂದರೆ ಕೇವಲ 28 ದಿನಗಳಲ್ಲಿ ಇಷ್ಟು ಹಣ ಸಂಗ್ರಹವಾಗಿದೆ. 

ಇದನ್ನೂ ಓದಿ- Culture: ‘ಸಮಷ್ಟಿ’ಯಿಂದ ರಂಗಶಂಕರದಲ್ಲಿ ‘ಮಿಸ್. ಸದಾರಮೆ’ ನಾಟಕದ 50ನೇ ಪ್ರಯೋಗ

ಇನ್ನು, ಈ ಸಂಬಂಧ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಮಾಹಿತಿ ನೀಡಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರುವುದರಲ್ಲಿ ಇದೇ ಅತಿಹೆಚ್ಚಿನದ್ದಾಗಿದೆ. ಶಿವರಾತ್ರಿ ಜಾತ್ರೆ ಹಿನ್ನೆಲೆಯಲ್ಲಿ ಇಷ್ಟೊಂದು ಬಾರಿ ಮೊತ್ತ ಸಂಗ್ರಹವಾಗಿದೆ ಎಂದು ಅವರು ಜೀ ಕನ್ನಡ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News