ಬೆಂಗಳೂರು: ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲವೆಂದು ಬಿಜೆಪಿ ಟೀಕಿಸಿದೆ. #ಅಸಹಾಯಕಡಿಕೆಶಿ ಹ್ಯಾಶ್ ಟ್ಯಾಗ್ ಬಳಸಿ ಬಿಜೆಪಿ ಶನಿವಾರ ಸರಣಿ ಟ್ವೀಟ್ ಮಾಡಿದೆ.
‘ಹೋದ ಕಡೆಯಲ್ಲೆಲ್ಲಾ ಚಹಾ ಕುಡಿಸಿ "ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ" ಎಂದು ಜೈಕಾರ ಹಾಕಿಸುತ್ತಿದ್ದ ಸಿದ್ದರಾಮಯ್ಯ ಈಗ ಮತ್ತೊಂದು ತಂತ್ರ ಪ್ರಯೋಗಿಸಿದ್ದಾರೆ. ಮುಂದಿನ ಸಿಎಂ ಎಂದು ಈಗಲೇ ಘೋಷಿಸುವಂತೆ ಸಿದ್ದರಾಮಯ್ಯ ಬಣ ಕೈ ಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ, ಹಾಗಾದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೆಕ್ಕಕ್ಕಿಲ್ಲವೇ?’ ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ‘ಸೀಡ್ಲೆಸ್ ಕಡಲೆಬೀಜ’ದಂತಾಗಿದೆ!: ಕಾಂಗ್ರೆಸ್
‘ಇದೇ ನನ್ನ ಕೊನೆಯ ಚುನಾವಣೆ ಎಂದು ಹತ್ತಾರು ವರ್ಷಗಳಿಂದ ಹೇಳಿಕೊಂಡೇ ಬಂದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಸೆ ಇನ್ನೂ ಬಿಟ್ಟಿಲ್ಲ. ಡಿಕೆಶಿ ಆಸೆಗೆ ಈಗಿಂದೀಗಲೇ ತಣ್ಣೀರೆರಚುವ ಕೆಲಸ ಸಿದ್ದರಾಮಯ್ಯ ಬಣದಿಂದ ನಡೆಯುತ್ತಿದೆ. ಕಾಂಗ್ರೆಸ್ ಲಾಟರಿ ಎತ್ತಿ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸುವಿರಾ?’ ಅಂತಾ ಪ್ರಶ್ನಿಸಿದೆ.
ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಡಿಕೆಶಿ ನಡೆಯನ್ನು ಟೀಕಿಸಿ ಎಂಬಿ ಪಾಟೀಲರ ಪರವಾಗಿ ನಿಂತುಕೊಂಡರು.
ಈಗ ಅದೇ ಎಂಬಿ ಪಾಟೀಲರು ಸಿದ್ದರಾಮಯ್ಯ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಎಂದು ಒತ್ತಡ ಹೇರುತ್ತಿದ್ದಾರೆ.
ಚಿಂತನ ಶಿಬಿರಕ್ಕೆ ಹೋಗುವ ಮುನ್ನ #ಮೀರ್‌ಸಾದಿಕ್ ರಣತಂತ್ರ ಹೆಣೆದಿದ್ದರೇ?#ಅಸಹಾಯಕಡಿಕೆಶಿ
— BJP Karnataka (@BJP4Karnataka) May 14, 2022
‘ಮಾಜಿ ಸಂಸದೆ ರಮ್ಯಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಡಿಕೆಶಿ ನಡೆಯನ್ನು ಟೀಕಿಸಿ ಎಂ.ಬಿ.ಪಾಟೀಲರ ಪರವಾಗಿ ನಿಂತುಕೊಂಡರು. ಈಗ ಅದೇ ಎಂ.ಬಿ.ಪಾಟೀಲರು ಸಿದ್ದರಾಮಯ್ಯ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿ ಎಂದು ಒತ್ತಡ ಹೇರುತ್ತಿದ್ದಾರೆ. ಚಿಂತನ ಶಿಬಿರಕ್ಕೆ ಹೋಗುವ ಮುನ್ನ #ಮೀರ್‌ಸಾದಿಕ್ ರಣತಂತ್ರ ಹೆಣೆದಿದ್ದರೇ?’ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಹಾಡಹಗಲೇ ಸಾರ್ವಜನಿಕರ ಎದುರು ವಕೀಲೆ ಮೇಲೆ ಮಾರಣಾಂತಿಕ ಹಲ್ಲೆ..!
ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂದು @DKShivakumar ಅವರು ಹೋರಾಟ, ಎತ್ತಿನಗಾಡಿ ಪ್ರಯಾಣ, ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಮಾಡಿದ್ದು!
ಆದರೆ @siddaramaiah ಅವರು ಕೆಪಿಸಿಸಿ ಅಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೆ ತಾನೇ ಮುಂದಿನ ಸಿಎಂ ಎಂದು ಪಕ್ಷದೊಳಗೆ ಪ್ರಭಾವಿಯಾಗುತ್ತಿದ್ದಾರೆ.
ಡಿಕೆಶಿ ಲೆಕ್ಕಕ್ಕಿಲ್ಲವೇ?#ಅಸಹಾಯಕಡಿಕೆಶಿ
— BJP Karnataka (@BJP4Karnataka) May 14, 2022
‘ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎಂದು ಡಿಕೆಶಿಯವರು ಹೋರಾಟ, ಎತ್ತಿನಗಾಡಿ ಪ್ರಯಾಣ, ಮೇಕೆದಾಟು ಪಾದಯಾತ್ರೆ ಮಾಡಿದ್ದೇ ಮಾಡಿದ್ದು! ಆದರೆ, ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷರನ್ನು ಗಣನೆಗೆ ತೆಗೆದುಕೊಳ್ಳದೆ ತಾನೇ ಮುಂದಿನ ಸಿಎಂ ಎಂದು ಪಕ್ಷದೊಳಗೆ ಪ್ರಭಾವಿಯಾಗುತ್ತಿದ್ದಾರೆ. ಡಿಕೆಶಿ ಲೆಕ್ಕಕ್ಕಿಲ್ಲವೇ?’ ಎಂದು ಟೀಕಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.