ಬಿಎಂಟಿಸಿ ಬಸ್ ಸಂಚಾರ ಆರಂಭ : Condition Apply

ಕರೋನಾವೈರಸ್ Covid-19 ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಬಿಎಂಟಿಸಿ ಬಸ್ ಇದೀಗ ಮತ್ತೆ ಸಂಚಾರ ಆರಂಭಿಸಿದೆ.

Updated: Mar 26, 2020 , 09:13 AM IST
ಬಿಎಂಟಿಸಿ ಬಸ್ ಸಂಚಾರ ಆರಂಭ : Condition Apply
Image courtesy:DNA

ಬೆಂಗಳೂರು: ಇಡೀ ವಿಶ್ವವನ್ನೇ ತನ್ನ ಕಪಿಮುಷ್ಠಿಯಲ್ಲಿ ಬಂಧಿಸಿರುವ ಮಹಾಮಾರಿ ಕರೋನವೈರಸ್ (Coronavirus)  ಭೀತಿಯಲ್ಲಿ ಸ್ಥಗಿತಗೊಂಡಿದ್ದ ಬಿಎಂಟಿಸಿ (BMTC) ಬಸ್ ಸಂಚಾರ ಇದೀಗ ಮತ್ತೆ ಸಂಚಾರ ಆರಂಭಿಸಿದೆ.

ಕೊರೊನಾಗೆ ಕರ್ನಾಟಕ ತತ್ತರ: SSLC-PUC ಪರೀಕ್ಷೆ ಮುಂದೂಡಿಕೆ

ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ 180 ಬಸ್ಸುಗಳು ಸಂಚಾರ ಆರಂಭಿಸಿದ್ದು, COVID-19 ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಬಸ್ಸಿನಲ್ಲಿ ಕೇವಲ 20 ಜನರಿಗಷ್ಟೆ ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿವಿಧ ಸೇವೆಗಳಲ್ಲಿ ನಿರತರಾಗಿರುವ ಸಾರ್ವಜನಿಕರಿಗೆ ಉದಾಹರಣೆಗೆ ಬ್ಯಾಂಕ್ ನೌಕರರು, ಪೊಲೀಸರು, ಪತ್ರಕರ್ತರು, ಆರೋಗ್ಯ ಸೇವೆಯಲ್ಲಿರುವ ಆಸ್ಪತ್ರೆ ಸಿಬ್ಬಂದಿ, ಬೆಸ್ಕಾಂ ನೌಕರರು ಸೇರಿದಂತೆ ಅಗತ್ಯ ಸೇವೆಗಳಿಗೆ ಮಾತ್ರ ಬಸ್ಸಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಜೊತೆಗೆ ಬಸ್ಸಿನಲ್ಲಿ ಪ್ರಯಾಣಿಸುವವರು ಐಡಿ ಕಾರ್ಡ್ ತೋರಿಸಿ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ.